‘ನೆಟ್‌ಫ್ಲಿಕ್ಸ್’ನಲ್ಲಿ ಪ್ರಸಾರವಾಗುವ ‘ಲುಡೋ’ ಚಲನಚಿತ್ರದಲ್ಲಿಯೂ ಹಿಂದೂ ದೇವತೆಗಳ ವಿಡಂಬನೆ !

  • ಪ್ರತಿದಿನ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿರುವಾಗ ‘ನಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಬಾರದು’ ಎಂದು ಹಿಂದೂಗಳಿಗೆ ಅನಿಸಿದರೆ ಏನು ತಪ್ಪು ?

  • ಹಿಂದೂಗಳ ಶ್ರದ್ಧೆ, ಸಂಪ್ರದಾಯಗಳಿಗೆ ಅಗೌರವ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರವು ಆದಷ್ಟು ಬೇಗ ಹಿಂದೂಗಳಿಗೆ ನ್ಯಾಯ ಒದಗಿಸಲಿ ಎಂಬ ಅಪೇಕ್ಷೆ !

(ಈ ಚಿತ್ರವನ್ನು ಪ್ರಕಟಿಸುವ ಉದ್ದೇಶ ಯಾವುದೇ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದ್ದಾಗಿರದೆ ನಿಜ ಸ್ಥಿತಿಯನ್ನು ತೋರಿಸುವ ಉದ್ದಶವಾಗಿದೆ)

ನವ ದೆಹಲಿ – ವಿವಿಧ ಸಂಸ್ಥೆಗಳ ಅಧಿಕಾರಿಗಳು, ಅದೇರೀತಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ನಿರ್ಮಾಪಕರು-ನಿರ್ದೇಶಕರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಸ್ಪರ್ಧೆ ನಡೆಸುತ್ತಿದ್ದಾರೆ. ‘ಎ ಸೂಟಬಲ್ ಬಾಯ್’ ಎಂಬ ವೆಬ್ ಸರಣಿಯು ಮುಸ್ಲಿಂ ಹುಡುಗನೊಬ್ಬ ದೇವಾಲಯದ ಆವರಣದಲ್ಲಿ ಹಿಂದೂ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಚಿತ್ರಿಸಿದರೆ, ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ‘ಲುಡೋ’ ಚಲನಚಿತ್ರವು ಹಿಂದೂ ದೇವತೆಗಳನ್ನು ಬಹುರೂಪಿಗಳ (ಛದ್ಮವೇಷ ಧರಿಸುವವರ) ಹಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.

ಕೆಲವು ವರ್ಷಗಳ ಹಿಂದೆ ಅಮೀರ್ ಖಾನ್ ಅವರ ‘ಪಿಕೆ’ ಚಲನಚಿತ್ರದಲ್ಲಿ ಹೇಗೆ ಹಿಂದೂ ದೇವತೆಗಳಿಗೆ ಅಗೌರವ ತೋರಿದರೋ, ಅದೇರೀತಿ ಅನುರಾಗ್ ಬಸು ನಿರ್ದೇಶನದ ‘ಲುಡೋ’ ಚಲನಚಿತ್ರದಲ್ಲೂ ಇದೇ ರೀತಿ ಮಾಡಲಾಗಿದೆ.

೧. ಚಲನಚಿತ್ರದ ಒಂದು ದೃಶ್ಯದಲ್ಲಿ ಮೂರು ಜನರನ್ನು ವಿಚಿತ್ರ ವೇಷಭೂಷಣಗಳಲ್ಲಿ ತೋರಿಸಲಾಗಿದ್ದು, ಅವರು ಬ್ರಹ್ಮ, ವಿಷ್ಣು ಮತ್ತು ಶಂಕರರ ರೂಪದಲ್ಲಿ ತೋರಿಸಿ ರಸ್ತೆಯಲ್ಲಿ ನೃತ್ಯ ಮತ್ತು ಜಿಗಿಯುತ್ತಿರುವಂತೆ ತೋರಿಸಲಾಗಿದೆ. ನಟ ಆದಿತ್ಯ ರಾಯ ಕಪೂರ್ ಅವರು ಮೂವರನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ ಎಂದು ತೋರಿಸಲಾಗಿದೆ.

೨. ಮತ್ತೊಂದು ಪ್ರಸಂಗದಲ್ಲಿ, ಭಗವಾನ ಶಂಕರ ಮತ್ತು ಮಹಾಕಾಳಿ ದೇವಿಯ ರೂಪದಲ್ಲಿ ಇಬ್ಬರು ವಾಹನವನ್ನು ತಳ್ಳುತ್ತಿರುವುದು ತೋರಿಸಲಾಗಿದೆ.

೩. ಒಂದು ಪ್ರಸಂಗದಲ್ಲಿ ನಟ ಮತ್ತು ನಟಿ ಒಟ್ಟಿಗಿರುವಾಗ, ನಟಿಯ ತಾಯಿಯ ದೂರವಾಣಿ ಕರೆ ಬರುತ್ತದೆ ಆಗ ಆಕೆಗೆ ಎಲ್ಲಿದ್ದಾಳೆ ಎಂದು ತಾಯಿ ಕೇಳಿದಾಗ, ಅವಳು ದೇವಸ್ಥಾನದಲ್ಲಿದ್ದೇನೆ ಎಂದು ಹೇಳುತ್ತಾಳೆ.

೪. ಈ ಚಲನಚಿತ್ರದಲ್ಲಿ ರಾಮಲೀಲೆ, ಹಾಗೂ ಹಸುವನ್ನು ಉದ್ದೇಶಪೂರ್ವಕವಾಗಿ ಅಪಹಾಸ್ಯ ಮಾಡಲಾಗಿದೆ.

೫. ಮತ್ತೊಂದು ಪ್ರಸಂಗದಲ್ಲಿ ನಿರ್ದೇಶಕ ಅನುರಾಗ್ ಬಸು ಮತ್ತು ನಟ ರಾಹುಲ್ ಬಗ್ಗಾ ಅವರು ಲುಡೋ ಆಡುತ್ತಿದ್ದಾರೆ. ಅದರಲ್ಲಿ ಅನುರಾಗ್ ಬಸು ರಾಹುಲ್ ಬಗ್ಗಾ ಅವರನ್ನು ಉದ್ದೇಶಿಸಿ, ‘ಕೊರೋನಾದಿಂದ ಇಷ್ಟು ಜನರು ಸತ್ತರೆ, ಅವರೆಲ್ಲರೂ ಪಾಪಿಗಳಾಗಿದ್ದರು ಎಂದು ನಿಮಗೆ ಅನಿಸುತ್ತದೆಯೇ ?’ ಎಂದು ಕೇಳುತ್ತಾರೆ. ಆ ಸಮಯದಲ್ಲಿ ಪಾಪ ಮತ್ತು ಪುಣ್ಯದ ಬಗ್ಗೆ ಬಗ್ಗಾ ಇವರಿಗೆ ಸಮಜಾಯಿಷಿ ಹೇಳುವಾಗ, “ಮಹಾಭಾರತದ ಯುದ್ಧ ಮುಗಿದ ನಂತರ ಯಾವಾಗ ಪಾಂಡವರು ಸ್ವರ್ಗಕ್ಕೆ ಹೋಗುತ್ತಾರೆ, ಆಗ ದುರ್ಯೋಧನನು ಈಗಾಗಲೇ ಅಲ್ಲಿಯೇ ಕುಳಿತಿದ್ದಾನೆಂದು ತೋರುತ್ತದೆ.” ‘ದುರ್ಯೋಧನನು ಜಗತ್ತಿನ ದೃಷ್ಟಿಯಲ್ಲಿ ಪಾಪಿಯಾಗಿದ್ದನು’, ಎಂದು ಈ ಸಮಯದಲ್ಲಿ ಬಸು ಹೇಳುತ್ತಾರೆ. ಈ ಮಾಧ್ಯಮದಿಂದ ಕೌರವರನ್ನು ನಾಯಕರಂತೆ ಮತ್ತು ಪಾಂಡವರನ್ನು ಖಳನಾಯಕರಂತೆ ತೋರಿಸಲಾಗಿದೆ. ಇದಕ್ಕಾಗಿ ಅನುರಾಗ್ ಬಸು ತನ್ನ ಮನಸ್ಸಿಗೆ ಬಂದಂತೆ ಕಾಲ್ಪನಿಕ ಕಥೆಯನ್ನು ಹೇಳುತ್ತಿದ್ದಾನೆ ಎಂದು ತೋರಿಸಲಾಗಿದೆ.