ಗುರುಪೂರ್ಣಿಮೆಯ ನಿಮಿತ್ತ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಂದೇಶ

‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ,  ಮೊದಲಿಗೆ ಸಾಧನೆ ಪ್ರಾರಂಭಿಸಿ.

ಗುರುಪೂರ್ಣಿಮೆಯ ನಿಮಿತ್ತ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ.

ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಸಂಸ್ಕೃತಿಗೆ ಲಭಿಸಿದ ಗೌರವಶಾಲಿ ಗುರುಪರಂಪರೆಯನ್ನು ಕೃತಜ್ಞತಾಪೂರ್ವಕ ಸ್ಮರಿಸುವ ದಿನ ಎಂದರೆ ಗುರುಪೂರ್ಣಿಮೆ. ಸಮಾಜಕ್ಕೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಗುರುಗಳ ಕಾರ್ಯವಾಗಿದೆ, ಅದೇ ರೀತಿ ಸಮಾಜಕ್ಕೆ ಕಾಲಾನುಸಾರ ಮಾರ್ಗದರ್ಶನ ಮಾಡುವುದೂ ಗುರುಪರಂಪರೆಯ ಕಾರ್ಯವಾಗಿದೆ. ಪ್ರಸ್ತುತ ಭಾರತ ಸಹಿತ ಸಂಪೂರ್ಣ ಪೃಥ್ವಿ ಸಂಕಟಕಾಲವನ್ನು ಎದುರಿಸುತ್ತಿದೆ.

ಗುರುಕೃಪೆ ಅಪಾರ ಧಾರೆ  ಸದಾ ಇರಲಿ ಗುರುಕೃಪೆಯ ಛಾಯೆ

ಶಿಷ್ಯನ ಜೀವನದ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತ ಮೇಲಿನ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುಗಳೇ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಪ್ರತ್ಯಕ್ಷ ಸಾಧನೆಯನ್ನು ಕಲಿಸುತ್ತಾರೆ.