‘ಪರಾತ್ಪರ ಗುರು ಡಾ. ಆಠವಲೆಯವರು ಗುರುಪ್ರಾಪ್ತಿಯ ನಂತರ ತನು, ಮನ ಮತ್ತು ಧನ ಅಂದರೆ, ತಮ್ಮ ಸರ್ವಸ್ವವನ್ನು ಗುರುಚರಣಗಳಲ್ಲಿ ಸಮರ್ಪಿಸಿದರು. ಅವರ ಬಳಿ ಶೇಷ ಉಳಿದಿರುವುದು ಕೇವಲ ‘ಸಾಧಕರೂಪಿ ಧನಸಂಪತ್ತು’ ಮಾತ್ರ !
ಈಶ್ವರಪ್ರಾಪ್ತಿಯ ಏಕೈಕ ಹಂಬಲವನ್ನಿಟ್ಟುಕೊಂಡು ನಿರಂತರವಾಗಿ ಸಾಧನೆಯನ್ನು ಮಾಡುವ, ಹಾಗೆಯೇ ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ (ರಾಮರಾಜ್ಯದ) ಸ್ಥಾಪನೆಗಾಗಿ ನಿಸ್ವಾರ್ಥದಿಂದ ಅವಿರತವಾಗಿ ಶ್ರಮಿಸುವ, ಸಾವಿರಾರು ಸಾಧಕರನ್ನು ಸಿದ್ಧ ಪಡಿಸುವ ಲೀಲೆಯನ್ನು ಕೇವಲ ಪರಾತ್ಪರ ಗುರು ಡಾಕ್ಟರರೇ ಮಾಡಬಲ್ಲರು ! ೧೫ ಜೂನ್ ೨೦೨೨ ರವರೆಗೆ ಈ ಸಾಧಕರಲ್ಲಿನ ೧೧೫ ಕ್ಕಿಂತ ಹೆಚ್ಚು ಸಾಧಕರು ಸಂತರಾಗಿದ್ದು ೧೩೬೭ ಕ್ಕಿಂತ ಹೆಚ್ಚು ಸಾಧಕರು ಮತ್ತು ಬಾಲಸಾಧಕರು ಬೇಗನೆ ಸಂತರಾಗುವ ಮಾರ್ಗದಲ್ಲಿದ್ದಾರೆ. ಪ್ರಮುಖರ ಸಂದರ್ಭದಲ್ಲಿ ಅಥವಾ ಸಾಧಕರ ಸಂದರ್ಭದಲ್ಲಿ ಹೀಗೆ ಘಟಿಸುವ ಇಂತಹ ಯಾವ ಸಂಪ್ರದಾಯ ಅಥವಾ ಆಧ್ಯಾತ್ಮಿಕ ಸಂಸ್ಥೆ ಇಂದು ಜಗತ್ತಿನಲ್ಲಿದೆ ? ಇಂತಹ ಚಮತ್ಕಾರ ಮಾಡುವ ಪರಾತ್ಪರ ಗುರು ಡಾಕ್ಟರರು ಈ ಪೃಥ್ವಿಯಲ್ಲಿನ ಏಕೈಕರಾಗಿದ್ದಾರೆ.
ವಿವಿಧ ಗುಣಗಳು, ಕೌಶಲ್ಯ, ಭಾವರೂಪಿ ವಿವಿಧ ಬಣ್ಣಗಳ ಛಾಯೆಗಳಿರುವ ಈ ಸಾಧಕರನ್ನು ಪರಾತ್ಪರ ಗುರು ಡಾಕ್ಟರರು, ತಮ್ಮ ಪ್ರೀತಿಯಿಂದ ಆಕಾಶದಲ್ಲಿನ ಸುಂದರ ಏಳು ಬಣ್ಣಗಳ ಇಂದ್ರಧನುಷ್ಯದಂತೆ ಜೋಡಿಸಿಟ್ಟಿದ್ದಾರೆ. ಯಾರಾದರು ಅಪರಿಮಿತ ಸಂಪತ್ತನ್ನು ನೀಡಲು ತಯಾರಾದರೂ, ಅದಕ್ಕೆ ಬದಲಾಗಿ ಈ ಅಮೂಲ್ಯ ‘ಸಾಧಕರೂಪಿ ಧನಸಂಪತ್ತು ಸಿಗಲಾರದು’, ಅಷ್ಟು ಅದು ಅಮೂಲ್ಯವಾಗಿದೆ.
ಹಿಂದೆ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಬಳಿಯಿರುವ ‘ಮಾವಳೆರೂಪಿ’ (ಧರ್ಮಯೋಧರು) ಧನಸಂಪತ್ತಿನ ಬಲದಲ್ಲಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈಗ ಪರಾತ್ಪರ ಗುರು ಡಾಕ್ಟರರು ತಮ್ಮ ಬಳಿಯಿರುವ ‘ಸಾಧಕರೂಪಿ ಧನಸಂಪತ್ತಿನ’ ಬಲದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡುವರು ! ಇದರೊಂದಿಗೆ ಪರಾತ್ಪರ ಗುರು ಡಾಕ್ಟರರು ಮಾಡುತ್ತಿರುವ ಧರ್ಮಸಂಸ್ಥಾಪನೆಯ ಕಾರ್ಯದಿಂದ, ಹಾಗೆಯೇ ಅವರು ಸಿದ್ಧಪಡಿಸುತ್ತಿರುವ ಸಂತರ ಸಮೂಹದಿಂದ ಭಾರತ ಬೇಗನೆ ಮತ್ತೊಮ್ಮೆ ‘ಜಗತ್ತಿನ ಆಧ್ಯಾತ್ಮಿಕ ಗುರು’ ಆಗುವುದು !’
– (ಪೂ.) ಸಂದೀಪ ಆಳಶಿ (೧೬.೭.೨೦೨೧)