‘ಗುರುಕೃಪಾಯೋಗ’ವೆಂದರೆ ಪರಾತ್ಪರ ಗುರುದೇವರ ರೂಪದಲ್ಲಿ ‘ಜಗನ್ಮಾತೆ’ಯ ಮಾತೃವಾತ್ಸಲ್ಯ ಭಾವದಿಂದ ತುಂಬಿ ತುಳುಕುವ ‘ಮಾತೃ ಸಂಹಿತೆ’ !

ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

೧. ಯುಗಗಳು ಮತ್ತು ಕಾಲದ ಆಧಾರದಲ್ಲಿ ಮಾಡಿರುವ ಹಿಂದೂ ಧರ್ಮಶಾಸ್ತ್ರದ ವಿಭಜನೆ

‘ಆನ್‌ಲೈನ್’ ಸತ್ಸಂಗ ಮಾಲಿಕೆಯಲ್ಲಿ ಪ್ರಸ್ತುತಪಡಿಸಲು ‘ವೇದ’ ಈ ವಿಷಯದ ಅಂಶಗಳನ್ನು ಬರೆಯುವಾಗ ‘ಕಲಿಯುಗ’ದಲ್ಲಿ ‘ಮಾತೃ ಸಂಹಿತೆ’ ಈ ವೇದಶಾಸ್ತ್ರದ ಹೊಸ ಮಾರ್ಗದರ್ಶಕ ಶ್ರೇಣಿ ಇದೆ, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. ಯುಗ ಮತ್ತು ಕಾಲ ಇವುಗಳ ಆಧಾರದಲ್ಲಿ ಹಿಂದೂ ಧರ್ಮಶಾಸ್ತ್ರವನ್ನು ಮುಖ್ಯವಾಗಿ ಮುಂದಿನ ಮೂರು ಗುಂಪುಗಳಲ್ಲಿ ವಿಭಜನೆ ಮಾಡಲಾಗಿದೆ.

ಅ. ‘ಪ್ರಭು ಸಂಹಿತೆ’, ಅಂದರೆ ವೇದ/ಶ್ರುತಿ (ಈಶ್ವರೀ ಆದೇಶಕ್ಕನುಸಾರ ಮಾರ್ಗದರ್ಶನ ಮಾಡುವುದು)

ಆ. ‘ಸುಹೃತ ಸಂಹಿತೆ’, ಅಂದರೆ ಸ್ಮೃತಿ (ಮಿತ್ರನ ಹಾಗೆ ಮಾರ್ಗದರ್ಶನ ಮಾಡುವುದು)

ಇ. ‘ಕಂಠ ಸಂಹಿತೆ’, ಅಂದರೆ ಪುರಾಣೋಕ್ತ ಇತಿಹಾಸ (ಅತ್ಯಂತ ಮಧುರ ಮೋಹಕ ವಾಣಿಯಲ್ಲಿ ಮಾರ್ಗದರ್ಶನ ಮಾಡುವುದು)

(ಪೂ.) ಸೌ. ಉಮಾ ರವಿಚಂದ್ರನ್

೨. ಸತ್ಯಯಗದಲ್ಲಿ ಪರಮಾತ್ಮನ ವಚನ ವೇದಪ್ರಮಾಣ ಆಗಿರುವುದರಿಂದ ವೇದಗಳ ವರ್ಗೀಕರಣವನ್ನು ‘ಪ್ರಭು ಸಂಹಿತೆ’, ಎಂದು ಮಾಡಲಾಯಿತು

ಸತ್ಯಯುಗದಲ್ಲಿನ ಜೀವಗಳು ಸಾತ್ತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿದ್ದವು. ಅವರ ಆಚರಣೆ ವೇದಗಳಿಗನುಸಾರವಾಗಿ ಇತ್ತು.  ಪರಮಾತ್ಮನ ವಚನಗಳು ವೇದಕ್ಕನುಸಾರ ಇದ್ದುದರಿಂದ ಆ ಕಾಲಕ್ಕನುಸಾರ ವೇದಗಳ ವರ್ಗೀಕರಣವನ್ನು ‘ಪ್ರಭು ಸಂಹಿತೆ’ ಎಂದು ಮಾಡಲಾಯಿತು. ಆ ಕಾಲದಲ್ಲಿ ಪರಮಾತ್ಮನ ವೇದ ವಚನವನ್ನು ಪಾಲಿಸಲಾಗುತ್ತಿತ್ತು.

೩. ತ್ರೇತಾಯುಗದಲ್ಲಿ ಜೀವಗಳ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗುವುದು ಮತ್ತು ಅವರಿಂದ ವೇದಶಾಸ್ತ್ರಗಳ ಪಾಲನೆಯಾಗಲು ವೇದಗಳ ‘ಸುಹೃತ ಸಂಹಿತೆ’, ಹೀಗೆ ವರ್ಗೀಕರಣವಾಗುವುದು

ತ್ರೇತಾಯುಗದಲ್ಲಿ ವೇದಶಾಸ್ತ್ರಗಳ ಮಾರ್ಗದರ್ಶನವನ್ನು ಮಾಡುವಾಗ ಪ್ರಭುವಿನ ಆದೇಶದ ರೂಪಾಂತರ ಮೃದುವಾಗಿ ಮಿತ್ರನಂತೆ ಆಯಿತು. ಆದ್ದರಿಂದ ಅದನ್ನು ‘ಸುಹೃತ ಸಂಹಿತೆ’ ಎಂದು ವರ್ಗೀಕರಣ ಮಾಡಲಾಯಿತು. ಆ ಕಾಲದಲ್ಲಿ ಜೀವಗಳ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗಿದ್ದರಿಂದ ವೇದಗಳ ಶ್ರವಣ ಮತ್ತು ಆಜ್ಞಾಪಾಲನೆ ಮಾಡುವ ಸಿದ್ಧತೆ ಅವರಲ್ಲಿರಲಿಲ್ಲ. ಅವರು ವೇದಶಾಸ್ತ್ರಗಳನ್ನು ಪಾಲಿಸಬೇಕೆಂದು ಸೌಮ್ಯ, ಮಿತೃವತ್ ಉಪದೇಶ ನೀಡಲಾಯಿತು.

೪. ದ್ವಾಪರಯುಗದಲ್ಲಿ ಮಾನವನಲ್ಲಿ ವೇದ ಸಂಹಿತೆಗಳ ಶ್ರವಣವನ್ನು ಮಾಡುವ  ಮಾನಸಿಕತೆಯೂ ಉಳಿಯಲಿಲ್ಲ, ಆದ್ದರಿಂದ ಮಧುರ ವಾಣಿಯಲ್ಲಿ ಇತಿಹಾಸ ಮತ್ತು ಪುರಾಣಗಳ ವರ್ಣನೆಯನ್ನು ಮಾಡಿ ಹೇಳಬೇಕಾಯಿತು.

ದ್ವಾಪರಯುಗದಲ್ಲಿ ಮಾನವನ ಮನೋವೃತ್ತಿಯು ಕುಸಿದಿದ್ದರಿಂದ ಅವನು ಪ್ರಭು ಸಂಹಿತೆ ಮತ್ತು ಸುಹೃತ ಸಂಹಿತೆಯ ಶ್ರವಣವನ್ನೂ ಮಾಡುತ್ತಿರಲಿಲ್ಲ. ಆದ್ದರಿಂದ ಪುರಾಣ ಮತ್ತು ಇತಿಹಾಸ ಇವುಗಳ ರೂಪದಲ್ಲಿ ವೇದಗಳ ವರ್ಣನೆ ಮಾಡಬೇಕಾಗುತ್ತಿತ್ತು. ‘ಪತಿಯ ಹಿತಕ್ಕಾಗಿ ಅವನ ಪತ್ನಿಯು ಮಧುರ ವಾಣಿಯಲ್ಲಿ ಸಂವಾದ ಮಾಡುವಂತೆ’ ವೇದವರ್ಣನೆಯ ಸ್ವರೂಪ ಇದ್ದುದರಿಂದ ಅದನ್ನು ‘ಕಂಠ ಸಂಹಿತೆ’ ಎಂದು ವರ್ಗೀಕರಿಸಲಾಯಿತು.

೫. ಕಲಿಯುಗದಲ್ಲಿ ಮಾನವನ ಅಹಂಕಾರ ಹೆಚ್ಚಾಗಿದ್ದರಿಂದ ಅವನಿಗೆ ಇತಿಹಾಸ ಮತ್ತು ಪುರಾಣ ಕಾಲ್ಪನಿಕ ಅನಿಸುವುದು

ಸದ್ಯ ಕಲಿಯುಗಾಂತರ್ಗತ ಕಲಿಯುಗದಲ್ಲಿ ಮಾನವನ ಸಾತ್ತ್ವಿಕತೆ ಶೇ. ೨೦ ರಷ್ಟೇ ಇದೆ. ಆದುದರಿಂದ ಅವನಲ್ಲಿ ಪ್ರಭು ಸಂಹಿತೆ, ಸುಹೃತ ಸಂಹಿತೆ ಮತ್ತು ಕಂಠ ಸಂಹಿತೆಯ ಶ್ರವಣ ಮಾಡುವ ಮಾನಸಿಕತೆಯೂ ಉಳಿದಿಲ್ಲ. ಅಹಂಕಾರದಿಂದ ಮಾನವನಲ್ಲಿ ‘ಇತಿಹಾಸ ಮತ್ತು ಪುರಾಣಗಳು ಕಾಲ್ಪನಿಕವಾಗಿವೆ’, ಎಂಬ ತಪ್ಪು ಅಭಿಪ್ರಾಯ ನಿರ್ಮಾಣವಾಗಿದ್ದರಿಂದ ಅವುಗಳ ಮೇಲೆ ವಿಶ್ವಾಸವನ್ನಿಡುವುದು ಅಸಾಧ್ಯವಾಗಿದೆ.

೬. ‘ಗುರುಕೃಪಾಯೋಗ’ ಈ ಸಾಧನಾಮಾರ್ಗವು ಪರಾತ್ಪರ ಗುರುದೇವರ ರೂಪದಲ್ಲಿನ ‘ಜಗನ್ಮಾತೆ’ಯ ಮಾತೃವಾತ್ಸಲ್ಯ ಭಾವದಿಂದ ತುಂಬಿದ್ದರಿಂದ ಅದರ ವರ್ಗೀಕರಣವನ್ನು ‘ಮಾತೃಸಂಹಿತೆ’ ಈ ಶ್ರೇಣಿಯಲ್ಲಿ ಮಾಡಲಾಗಿದೆ

ಈ ಘೋರ ಕಲಿಯುಗದಲ್ಲಿ ಜಿಜ್ಞಾಸು ಮತ್ತು ಸಾಧಕರ ಉದ್ಧಾರಕ್ಕಾಗಿ ಸಾಕ್ಷಾತ್ ಪರಮೇಶ್ವರನು ಅವತಾರ ತಾಳಿ ‘ಗುರುಕೃಪಾಯೋಗ’ ಎಂಬ ಹೆಸರಿನ ಐದನೇ ವೇದವನ್ನು ಸ್ಥಾಪಿಸಿದ್ದಾನೆ. ಅದರಲ್ಲಿನ ಮಾರ್ಗದರ್ಶನವು ಮಾತೃವಾತ್ಸಲ್ಯ ಭಾವದಿಂದ ತುಂಬಿದ್ದರಿಂದ ಅದನ್ನು ‘ಮಾತೃಸಂಹಿತಾ’ ಈ ಶ್ರೇಣಿಯಲ್ಲಿ ವರ್ಗೀಕರಣ ಮಾಡಲಾಗಿದೆ. ಮಾತೆಗೆ ಬಾಲಕನ ಮೇಲಿರುವ ಉದಾತ್ತ ಪ್ರೇಮವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರ್ವಸಾಮಾನ್ಯ ಮಾತೆಯ ವಾತ್ಸಲ್ಯದಲ್ಲಿ ಆದೇಶ ಅಥವಾ ಅಪೇಕ್ಷೆ ಇರುವುದಿಲ್ಲ, ಕೇವಲ ಪ್ರೇಮ ಮತ್ತು ಕೃಪೆಯ ಮಳೆ ಸುರಿಯುತ್ತದೆ, ಮತ್ತು ಪರಾತ್ಪರ ಗುರುದೇವರ ರೂಪದಲ್ಲಿನ ‘ಜಗನ್ಮಾತೆ’ಯ ವಾತ್ಸಲ್ಯವು ನಿಜವಾಗಿಯೂ ಅವರ್ಣನೀಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರುದೇವರ ‘ಮಾತೃ ಸಂಹಿತೆ’ಯ ಪ್ರಕಟೀಕರಣವು ಅವರ ಸುವಚನಗಳು, ಕೃತಿ, ಲೇಖನಮಾಲೆ, ಗ್ರಂಥ, ಸತ್ಸಂಗ, ಶಿಬಿರ, ಸಭೆ, ಜಾಲತಾಣ, ಆಧ್ಯಾತ್ಮಿಕ ಸಂಶೋಧನೆಯ ಮಾಧ್ಯಮದಿಂದಾಗಿದೆ.

೭. ‘ಗುರುಕೃಪಾಯೋಗ’ ಕಲಿಯುಗದಲ್ಲಿ ಸುಲಭ ಮತ್ತು ವಿಹಂಗಮ ಮಾರ್ಗದಿಂದ ಈಶ್ವರಪ್ರಾಪ್ತಿಯ ಮಾಡುವ ಮಾರ್ಗವಾಗಿದೆ

ವೇದಶಾಸ್ತ್ರವು ಯಜ್ಞಯಾಗಾದಿ ಕರ್ಮಕಾಂಡದ ಮೇಲೆ ಕೇಂದ್ರೀಕೃತವಾಗಿದೆ. ಸ್ಮೃತಿ ಮತ್ತು ಉಪನಿಷತ್‌ಗಳಲ್ಲಿ ಜ್ಞಾನಯೋಗದ ಮಾರ್ಗದರ್ಶನ ಇರುವುದರಿಂದ ಅದಕ್ಕೆ ‘ಬ್ರಹ್ಮವಿದ್ಯಾ’, ಎಂದು ಸಂಬೋಧಿಸಲಾಗುತ್ತದೆ. ಇತಿಹಾಸ ಮತ್ತು ಪುರಾಣಗಳ ಮೂಲಕ ಈಶ್ವರೀ ಅವತಾರಗಳ ದೈವೀ ಲೀಲೆಯನ್ನು ವರ್ಣಿಸಿರುವುದರಿಂದ ಅವುಗಳ ಶ್ರವಣದಿಂದ ಭಕ್ತಿಭಾವ ನಿರ್ಮಾಣವಾಗುತ್ತದೆ. ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ ಇವುಗಳ ತ್ರಿವೇಣಿ ಸಂಗಮವಾಗಿ ಕಲಿಯುಗದಲ್ಲಿ ‘ಗುರುಕೃಪಾಯೋಗ’ ನಿರ್ಮಾಣವಾಯಿತು. ಈ ಮಾರ್ಗದ ರೂಪದಲ್ಲಿ ನಾಲ್ಕೂ ಯುಗಗಳಲ್ಲಿ ಕಠಿಣವಾಗಿರುವ, ಆದರೆ ಕಲಿಯುಗದಲ್ಲಿ ಸುಲಭ ಮತ್ತು ವಿಹಂಗಮ ಮಾರ್ಗದಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಅತಿ ಉತ್ತಮ ಸಾಧನಾ ಮಾರ್ಗವು ಈಶ್ವರನ ಕರುಣಕೃಪೆಯಿಂದ ಉಪಲಬ್ಧವಾಗಿದೆ.