‘ಸಮಾಜದಲ್ಲಿನ ಕೆಲವು ಗುರುಗಳ ಇಬ್ಬರು ಅಥವಾ ಮೂವರು ಶಿಷ್ಯರು ಸಂತರಾಗುತ್ತಾರೆ; ಆದರೆ ಸನಾತನದಲ್ಲಿ ೧೧೫ ಜನ ಸಂತರು ಹೇಗೆ ?’ ಈ ಪ್ರಶ್ನೆಯ ಉತ್ತರ

‘ಮೇಲಿನ ಪ್ರಶ್ನೆ ಕೆಲವೊಂದು ಜನರ ಮನಸ್ಸಿನಲ್ಲಿ ಬರುತ್ತದೆ. ಇದರ ಉತ್ತರ ಮುಂದಿನಂತಿದೆ.

ಹೆಚ್ಚಿನ ಸಂತರು ಸಮಾಜದಲ್ಲಿನ ಜನರ ವ್ಯಾವಹಾರಿಕ ಅಡಚಣೆಗಳನ್ನು ದೂರಗೊಳಿಸಲು ಒತ್ತು ನೀಡುತ್ತಾರೆ. ಅದರಿಂದ ಅವರ ಅನೇಕ ಭಕ್ತರು ತಯಾರಾಗುತ್ತಾರೆ. ಅವರಲ್ಲಿನ ಬಹಳ ಕಡಿಮೆ ಜನ ಭಕ್ತರು ಅವರು ಹೇಳಿದ ಅಂಶಗಳನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸುತ್ತಾರೆ ಮತ್ತು ಅವರಲ್ಲಿನ ಇಬ್ಬರು-ಮೂವರು ಮಾತ್ರ ಅವರು ಹೇಳಿದ ಸಾಧನೆಯನ್ನು ಮಾಡಿ ‘ಶಿಷ್ಯ’ ಪದವಿಯ ವರೆಗೆ ತಲುಪುತ್ತಾರೆ ಮತ್ತು ಮುಂದೆ ಅವರನ್ನೇ ‘ಸಂತ’ರೆಂದು ಕರೆಯುತ್ತಾರೆ. ಆದುದರಿಂದ ಹೆಚ್ಚಿನ ಸಂಪ್ರದಾಯಗಳಲ್ಲಿ ‘ಸಂತ’ರನ್ನು ತಯಾರಿಸುವ ಪ್ರಕ್ರಿಯೆ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ತದ್ವಿರುದ್ಧ ಸನಾತನದಲ್ಲಿ ವ್ಯಾವಹಾರಿಕ ಅಡಚಣೆಗಳಿಗಾಗಿ ಎಂದಿಗೂ ಮಾರ್ಗದರ್ಶನ ಮಾಡುವುದಿಲ್ಲ. ಎಲ್ಲರಿಗೂ ಮೊದಲಿನಿಂದಲೇ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಶಿಕ್ಷಣ ನೀಡಲಾಗುತ್ತದೆ. ಅದರಿಂದ ಪ್ರತಿಯೊಬ್ಬ ಸಾಧಕನು ಆಧ್ಯಾತ್ಮಿಕ ಸ್ತರದಲ್ಲಿ ಕೃತಿಶೀಲನಾಗುತ್ತಾನೆ. ಅದರ ಪರಿಣಾಮವೆಂದು ೧೫ ಜೂನ್ ೨೦೨೨ ರ ವರೆಗೆ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಸಾವಿರಾರು ಸಾಧಕರ ಪೈಕಿ ೧೩೬೭ ಕ್ಕಿಂತ ಹೆಚ್ಚು ಸಾಧಕರು ಶೇ. ೬೦ ಕ್ಕಿಂತ ಹೆಚ್ಚು ಮಟ್ಟದವರಾಗಿದ್ದು ಅವರು ಸಂತರಾಗುವ ಮಾರ್ಗದಲ್ಲಿದ್ದಾರೆ ಮತ್ತು ಇಂದಿನವರೆಗೆ ೧೧೫ ಜನ ಸಾಧಕರು ಸಂತರಾಗಿದ್ದಾರೆ.

– (ಪರಾತ್ಪರ ಗುರು) ಡಾ. ಆಠವಲೆ