ರಾಮನಾಥಿ (ಗೋವಾ) ಇಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಗುರುಪ್ರಜೆ

ಸನಾತನದ ‘ಧರ್ಮಕಾರ್ಯಕ್ಕಾಗಿ ಜಾಹೀರಾತು ಮುಂತಾದ ಅರ್ಪಣೆ ಪಡೆಯುವುದು, ಇದು ಸಮಷ್ಟಿ ಸಾಧನೆ ! ಈ ಮರಾಠಿ ಗ್ರಂಥವನ್ನು ಪ್ರಕಾಶಿಸುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆ ಪ್ರತಿಮೆಯ ಪೂಜೆ ಮಾಡಲಾಯಿತು. ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಪುರೋಹಿತ ಪಾಠಶಾಲೆಯ ಸಂಚಾಲಕರಾದ ಶ್ರೀ. ದಾಮೋದರ ವಝೇಗುರೂಜಿಯವರು ಗುರುಪೂಜೆಯ ವಿಧಿಯ ಪೌರೋಹಿತ್ಯ ಮಾಡಿದರು. ಆಪತ್ಕಾಲದಲ್ಲಿ ಪ್ರತ್ಯಕ್ಷ ಗುರುಪೂರ್ಣಿಮಾ ಮಹೋತ್ಸವ ಆಚರಿಸಲು ಆಗದಿದ್ದರೂ ಶ್ರೀಗುರುಗಳು ಮಾಡುತ್ತಿರುವ ಅನನ್ಯ ಕೃಪೆಯ ಬಗ್ಗೆ ಸಾಧಕರು ಮನಸ್ಸಿನಲ್ಲಿಯೇ ಭಾವಪೂರ್ಣ ಕೃತಜ್ಞತೆ ವ್ಯಕ್ತಪಡಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷೆಯ ದೃಷ್ಟಿಯಿಂದ ನೀಡಿದ ಸೂಚನೆಗಳನ್ನು ಪಾಲಿಸಿ ಈ ಗುರುಪೂಜೆ ಮಾಡಲಾಯಿತು.