ಗುರು ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ
ಗುಶಬ್ದಸ್ತ್ವಂಧಕಾರಃ ಸ್ಯಾತ್ ರುಶಬ್ದಸ್ತನ್ನಿರೋಧಕಃ | ಅಂಧಕಾರನಿರೋಧತ್ವಾತ್ ಗುರು ಇತ್ಯಾಭಿಧೀಯತೇ ||
ಅರ್ಥ : ‘ಗು’ ಕಾರವೆಂದರೆ ಅeನರೂಪಿ ಅಂಧಕಾರ ಮತ್ತು ‘ರು’ ಕಾರವೆಂದರೆ ಆ ಅಂಧಕಾರವನ್ನು ನಾಶಗೊಳಿಸುವ ಜ್ಞಾನರೂಪಿ ತೇಜ. ಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ಹೋಗಲಾಡಿಸುವವನೇ ಗುರು.
‘ಶ್ರೀ ಗುರುಚರಿತ್ರೆಯಲ್ಲಿ ಗುರುಗಳ ಹೆಸರು ‘ವೇದಧರ್ಮ’ ಎಂದಿದೆ. ಅಂದರೆ ಯಾವನ ಕಾಯಿಕ, ವಾಚಿಕ, ಮಾನಸಿಕ ಕ್ರಿಯೆಗಳು ವೇದಾನುಕೂಲವಾಗಿರುತ್ತವೆಯೋ, ಅವನಿಗೆ ಮಾತ್ರ ವೇದಧರ್ಮವು ‘ಸದ್ಗುರು’ ಪದವಿಯನ್ನು ಕೊಡುತ್ತದೆ. – ಪ.ಪೂ. ಕಾಣೇ ಮಹಾರಾಜರು
ಶಿಷ್ಯನ ವಿಶ್ವಾಸ
‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿರುತ್ತದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲಿಯೇ ಗುರುಗಳಿದ್ದಾರೆ. – ಪ.ಪೂ. ಭಕ್ತರಾಜ ಮಹಾರಾಜರು
ಭಾವಾರ್ಥ : ‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ’, ಇದರಲ್ಲಿನ ‘ಗುರು’ ಶಬ್ದವನ್ನು ಬಾಹ್ಯ ಗುರುಗಳ ಬಗ್ಗೆ ಉಪಯೋಗಿಸಲಾಗಿದೆ. ಗುರುಗಳ ಮೇಲೆ ವಿಶ್ವಾಸವಿದ್ದರೆ ಮಾತ್ರ ಗುರುಗಳು ‘ಗುರು’ ಎಂದು ಕಾರ್ಯವನ್ನು ಮಾಡಬಲ್ಲರು. ‘ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲಿಯೇ ಗುರುಗಳಿದ್ದಾರೆ’ ಇದರಲ್ಲಿ ‘ಗುರು’ ಶಬ್ದವು ಅಂತರ್ಯಾಮಿ ಗುರುವಾಗಿದೆ’.
ಗುರುತತ್ತ್ವ
‘ಮನಸ್ಸನ್ನು ರೋಗಗಳ ಆಚೆಗೆ ಕೊಂಡೊಯ್ಯಲು, ಬುದ್ಧಿಯನ್ನು ನಿಯಂತ್ರಣದಲ್ಲಿಡಲು, ಚಿತ್ತಕ್ಕೆ ಚೈತನ್ಯದ ಸಮೃದ್ಧಿಯನ್ನು ಪ್ರಾಪ್ತ ಮಾಡಿಕೊಡಲು ಮತ್ತು ಅಹಂಅನ್ನು ಲಯಗೊಳಿಸಿ ಅದನ್ನು ದೇವಾಧೀನಗೊಳಿಸಲು ಸಹಾಯವಾಗುವ ಶ್ರೇಷ್ಠತೆಯೆಂದರೆ ಗುರುತತ್ತ್ವ’.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (ಆಧಾರ : ಸನಾತನ ನಿರ್ಮಿತ ಗ್ರಂಥ ‘ಗುರುಗಳ ಮಹತ್ವ’)