ಫೋಂಡಾ (ಗೋವಾ) – ‘ಗುರು-ಶಿಷ್ಯ ಪರಂಪರೆಯು ಭಾರತ ಭೂಮಿಯ ವೈಶಿಷ್ಟ್ಯವಾಗಿದೆ. ಧರ್ಮಕ್ಕೆ ಗ್ಲಾನಿ ಬಂದಾಗ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಈಗಿನ ಸಂಕಟಕಾಲದಲ್ಲಿ ಸಮಾಜಕ್ಕೆ ದಿಕ್ಕು ತೋರಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ‘ಆನ್ಲೈನ್ ಗುರು ಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು. ಈ ಮಹೋತ್ಸವನ್ನು ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ತೆಲುಗು, ತಮಿಳು ಮತ್ತು ಮಲ್ಯಾಳಂ ಈ ೧೧ ಭಾಷೆಗಳಲ್ಲಿ ಜುಲೈ ೫ ರ ಸಾಯಂಕಾಲ ಭಾವಪೂರ್ಣ ವಾತಾವರಣದಲ್ಲಿ ಪ್ರಸಾರ ಮಾಡಲಾಯಿತು. ‘ಫೇಸಬುಕ್ ಮತ್ತು ‘ಯೂ-ಟ್ಯೂಬ್ ತಂತ್ರಾಂಶದಿಂದ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಯಿತು. ಸಾವಿರಾರು ಜಿಜ್ಞಾಸುಗಳು ಈ ಕಾರ್ಯಕ್ರಮದ ಲಾಭ ಪಡೆದರು. ಈ ಕಾರ್ಯಕ್ರಮದ ಆರಂಭದಲ್ಲಿ ಶ್ರೀವ್ಯಾಸ ಮಹರ್ಷಿ ಮತ್ತು ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪ.ಪೂ. ಭಕ್ತರಾಜರ ಪ್ರತಿಮೆಯ ಪೂಜೆ ಮಾಡಲಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾರ್ಗದರ್ಶನವಿರುವ ‘ವಿಡಿಯೋ ತೋರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ಭಾವೀ ಆಪತ್ಕಾಲದಲ್ಲಿ ಹಿಂದೂಗಳ ಕರ್ತವ್ಯ ಮತ್ತು ಧರ್ಮಾಧಿಷ್ಠಿಯ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾಡಬೇಕಾದ ಪ್ರಯತ್ನಗಳ ದಿಶೆ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ‘ಕೊರೋನಾ ಮಹಾಮಾರಿ ಮತ್ತು ಅನಂತರ ಉದ್ಭವಿಸಿದ ಯುದ್ಧಸದೃಶ್ಯ ಪರಿಸ್ಥಿತಿಯು ಆಪತ್ಕಾಲದ ಲಕ್ಷಣಗಳಾಗಿವೆ. ಅನೇಕ ದಾರ್ಶನಿಕ ಸಂತರು ಹಾಗೂ ಭವಿಷ್ಯಕಾರರು ೨೦೨೦ ರಿಂದ ೨೦೨೩ ಈ ಅವಧಿಯಲ್ಲಿ ಸಂಕಟಕಾಲವಿರುವುದಾಗಿ ಹೇಳಿದ್ದಾರೆ. ಅದರಿಂದ ಪಾರಾಗಲು ಸಾಧನೆಯ ಬೆಂಬಲ ಆವಶ್ಯಕವಿದೆ. ೨೦೨೩ ನೇ ಇಸ್ವಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಈ ಕಾರ್ಯದಲ್ಲಿ ಯೋಗದಾನ ನೀಡುವುದು ಗುರುದಕ್ಷಿಣೆಯಾಗುವುದು, ಎಂದು ಈ ವೇಳೆ ಮಾರ್ಗದರ್ಶನ ಮಾಡಲಾಯಿತು.