ಅರ್ಪಣೆದಾರರೇ, ಗುರುಪೂರ್ಣಿಮೆ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಣೆ ಮಾಡಿ ಗುರುತತ್ತ್ವದ ಲಾಭ ಪಡೆಯಿರಿ

‘೧೩.೭.೨೦೨೨ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನದಂದು ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರ ಪಟ್ಟು ಹೆಚ್ಚಾಗುತ್ತದೆ.

೧. ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ

ನಿರ್ಗುಣ ಪರಮೇಶ್ವರನ ಪೃಥ್ವಿಯ ಮೇಲೆ ಕಾರ್ಯನಿರತವಾಗಿರುವ ಸಗುಣ ರೂಪವೆಂದರೆ ಗುರು ! ಗುರುಗಳು ಶಿಷ್ಯನಿಗೆ ಜ್ಞಾನ ನೀಡಿ ಅವನ ಪಾರಮಾರ್ಥಿಕ ಉನ್ನತಿಯಾಗಲು ಅಖಂಡವಾಗಿ ಪರಿಶ್ರಮಿಸುತ್ತಾರೆ. ಆದುದರಿಂದ ಶಿಷ್ಯನಿಗೆ ಗುರುಗಳಿಲ್ಲದೇ ಪರಿಹಾರೋಪಾಯವಿಲ್ಲ. ‘ಶಿಷ್ಯನು ಗುರುಗಳಿಗೆ ಸರ್ವಸ್ವವನ್ನು ಅರ್ಪಿಸಿ ಅವರ ಸೇವೆ ಮಾಡುವುದೇ ನಿಜವಾದ ಗುರುದಕ್ಷಿಣೆಯಾಗಿರುತ್ತದೆ’. ಅದರಿಂದ ಶಿಷ್ಯನ ಮೇಲೆ ಗುರುಕೃಪೆಯ ಪ್ರವಾಹ ಅಖಂಡವಾಗಿರುತ್ತದೆ.

೨. ಗುರುಪೂರ್ಣಿಮೆಯ ನಿಮಿತ್ತ ಗುರುಕಾರ್ಯಕ್ಕಾಗಿ, ಅಂದರೆ ಧರ್ಮಕಾರ್ಯಕ್ಕಾಗಿ ಅರ್ಪಣೆ ನೀಡಿ

ಈ ಗುರುಪೂರ್ಣಿಮೆ ನಿಮಿತ್ತ ತನು, ಮನ ಮತ್ತು ಧನವನ್ನು ಅಧಿಕಾಧಿಕ ತ್ಯಾಗ ಮಾಡಿ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಅವಕಾಶ ಎಲ್ಲರಿಗೆ ಲಭಿಸಿದೆ. ಆದುದರಿಂದ ಜಿಜ್ಞಾಸುಗಳು ಹಾಗೂ ಹಿತಚಿಂತಕರು ‘ಧರ್ಮಪ್ರಸಾರದ ಕಾರ್ಯ ಮಾಡುವುದು ಮತ್ತು ಅದಕ್ಕಾಗಿ ಧನವನ್ನು ಅರ್ಪಿಸುವುದು’ ಈ ಮೂಲಕ ಆಧ್ಯಾತ್ಮಿಕ ಸ್ತರದಲ್ಲಿ ಗುರುಪೂರ್ಣಿಮೆಯ ಲಾಭ ಪಡೆದುಕೊಳ್ಳಿ.

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮ ಪ್ರಸಾರದ ಕಾರ್ಯ ಮಾಡುವುದು’ ಕಾಲಾನುಸಾರ ಸರ್ವಶ್ರೇಷ್ಠ ಸಾಧನೆಯಾಗಿದೆ. ಆದ್ದರಿಂದ ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಈ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿದೆ.  ಆದ್ದರಿಂದ, ಅರ್ಪಣೆದಾರರು ಸನಾತನ ಸಂಸ್ಥೆಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿಯೂ ಧರ್ಮಕಾರ್ಯಕ್ಕಾಗಿ ವಿನಿಯೋಗಿಸಲಿದೆ.

ಅರ್ಪಣೆ ನೀಡಲು ಇಚ್ಛಿಸುವವರು ಸೌ. ಭಾಗ್ಯಶ್ರೀ ಸಾವಂತ ಇವರನ್ನು ೭೦೫೮೮೮೫೬೧೦ ಈ  ದೂರವಾಣಿ ಸಂಖ್ಯೆಗೆ ಅಥವಾ [email protected] ಈ ಗಣಕೀಯ ವಿಳಾಸಕ್ಕೆ ಸಂಪರ್ಕಿಸಬೇಕು.

ಗುರುಪೂರ್ಣಿಮೆಗಾಗಿ ಮನೆಯಲ್ಲಿಯೇ ಕುಳಿತು ಆನ್‌ಲೈನ್  ಮೂಲಕ ಅರ್ಪಣೆಯನ್ನು ಮಾಡುವ ಸೌಲಭ್ಯವೂ ಲಭ್ಯವಿದೆ. ಅದಕ್ಕಾಗಿ https://www.sanatan.org/en/donate ಈ ಲಿಂಕ್‌ಗೆ ಭೇಟಿ ನೀಡಿ.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ (೧೨.೬.೨೦೨೨)