ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ೨೦೨೨

ಸರ್ವರಿಗೂ ಆಮಂತ್ರಣ

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷಪ್ರೇಮದಿಂದ ಆಧಾರವನ್ನು ನೀಡಿ ಸಂಕಟ ಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ. ಈ ವರ್ಷ ಜುಲೈ ೧೩ ಕ್ಕೆ ಗುರುಪೂರ್ಣಿಮೆ ಇದೆ. ಸನಾತನ ಸಂಸ್ಥೆಯ ವತಿಯಿಂದ ನಡೆಯುವ ಗುರುಪೂರ್ಣಿಮಾ ಮಹೋತ್ಸವದ ವಿವರಕ್ಕಾಗಿ ಸಂಪರ್ಕಿಸಿ.

ಸಂಪರ್ಕ : ೯೩೪೨೫೯೯೨೯೯, ೯೩೭೯೭೭೧೭೭೧