ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತಗಳಲ್ಲಿ ಮುದ್ರಿತ ಲೇಖನಗಳನ್ನು ಈಗ ಜಾಲತಾಣದ ಒಂದೇ ‘ಲಿಂಕ್ ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಜಾಲತಾಣಗಳಲ್ಲಿ ಮುದ್ರಣವಾದ ಲೇಖನಗಳನ್ನು ಜಾಲತಾಣದ ವಿವಿಧ ‘ಕ್ಯಾಟಗರಿಸ್’ ನಲ್ಲಿ (ವಾರ್ತೆ / ಲೇಖನಗಳ ವಿಧಗಳು) ವಿಂಗಡಿಸಲಾಗಿದೆ. ಇವುಗಳಲ್ಲಿ ಅಂತಾ ರಾಷ್ಟ್ರೀಯ / ರಾಷ್ಟ್ರೀಯ / ರಾಜ್ಯ /ಸ್ಥಳೀಯ ವಾರ್ತೆ, ರಾಷ್ಟ್ರ-ಧರ್ಮ ಲೇಖನಗಳು, ಸಾಧನೆ, ಅನುಭೂತಿ ಇತ್ಯಾದಿ ವಿವಿಧ ‘ಕ್ಯಾಟಗರಿಸ್’ ಗಳು ಸೇರಿವೆ. ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವ ವ್ಯವಸ್ಥೆ ಇದೆ. ಅದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ಲಿನ (‘ಹೋಮ್ ಪೇಜ್’ನಲ್ಲಿ) ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕ’ದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ ಗಳ ರೂಪದಲ್ಲಿ. (ಶೀರ್ಷಿಕೆಗಳು ಮತ್ತು ಸಂಬಂಧಿತ ಚಿತ್ರಗಳ ರೂಪದಲ್ಲಿ) ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ನಮಗೆ ಬೇಕಾಗುವ ‘ಪೋಸ್ಟ್’ ಮೇಲೆ ಕ್ಲಿಕ್ ಮಾಡಿದರೆ, ಆ ವಾರ್ತೆ ಅಥವಾ ಲೇಖನವನ್ನು ತೆರೆದು ಓದಬಹುದು. ಮುಂದಿನ ವಾರ್ತೆ ಅಥವಾ ಲೇಖನವನ್ನು ಓದಲು ‘ಬ್ಯಾಕ್’ (ಹಿಂದೆ ಹೋಗಿ) ಕ್ಲಿಕ್ ಮಾಡಿದರೆ ನೀವು ‘ಈ ವಾರದ ಸಾಪ್ತಾಹಿಕ’ ಲಿಂಕ್‌ಗೆ ಮರಳಬಹುದು. ಅಲ್ಲಿ ನಿಮಗೆ ಬೇಕಾದ ವಾರ್ತೆ / ಲೇಖನಗಳ ಮೇಲೆ ಕ್ಲಿಕ್ ಮಾಡಿದರೆ, ವಾರ್ತೆ / ಲೇಖನ ತೆರೆದುಕೊಳ್ಳುತ್ತದೆ ಮತ್ತು ನೀವು ಅದನ್ನು ಓದಬಹುದು.

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಲೇಖನಗಳನ್ನು ಒಂದೇ ಕಡೆ ಓದಲು ಲಿಂಕ್ : sanatanprabhat.org/kannada/weekly

ಮರಾಠಿ ದೈನಿಕ : sanatanprabhat.org/marathi/todays-dainik

ಹಿಂದಿ ಪಾಕ್ಷಿಕ : sanatanprabhat.org/hindi/fortnightly

ಆಂಗ್ಲ ಪಾಕ್ಷಿಕ : sanatanprabhat.org/english/fortnightly

ಈ ಲಿಂಕ್‌ಗಳಲ್ಲಿನ ಲೇಖನಗಳು ಪೋಸ್ಟ್‌ಗಳ ರೂಪದಲ್ಲಿ ಕಾಣಿಸುತ್ತದೆ. ಈ ಪೋಸ್ಟ್‌ಗಳು ಕನ್ನಡ ಸಾಪ್ತಾಹಿಕದ ಲಿಂಕ್‌ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‌ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‌ನಲ್ಲಿ ಆಯಾ ದಿನದ ಪೋಸ್ಟ್‌ಗಳು ಕಾಣಿಸಿಕೊಳ್ಳುತ್ತವೆ. ಆಯಾ ಭಾಷೆಯ ಲಿಂಕ್‌ಗಳನ್ನು ಅದರ ಮುಖಪುಟ ‘ಹೋಮ್ ಪೇಜ್’ನಲ್ಲಿರುವ ಮೆನುಬಾರ್‌ನಲ್ಲಿಯೂ ಹಾಕಲಾಗಿದೆ. ಎಲ್ಲ ಸಾಧಕರು, ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು, ಹಿಂದುತ್ವನಿಷ್ಠರು ಈ ಸೌಲಭ್ಯದ ಲಾಭ ಪಡೆಯಬೇಕೆಂದು ವಿನಂತಿ.