ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಸಹಭಾಗಿಯಾಗಲು ಅಮೂಲ್ಯ ಅವಕಾಶ !
‘ಮಹಾರಾಷ್ಟ್ರ, ಗೋವಾ ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಿವೆ. ಅಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುವ ಅನೇಕ ಸಾಧಕರು ಮತ್ತು ಅವರ ಕುಟುಂಬದವರು ಇದ್ದಾರೆ. ಸನಾತನದ ಕಾರ್ಯವು ಭಾರತದಾದ್ಯಂತ ಹರಡಿರುವುದರಿಂದ ಮೇಲಿನ ಸ್ಥಳಗಳಲ್ಲಿ, ಹಾಗೆಯೇ ಇತರ ಬೇರೆ ಕಡೆಗಳಲ್ಲಿಯೂ ಮನೆಯಲ್ಲಿ ಕುಟುಂಬದವರೊಂದಿಗೆ ವಾಸಿಸುವ ಸನಾತನದ ಸಾಧಕರ ಸಂಖ್ಯೆಯು ತುಂಬಾ ಇದೆ.
ಕಳೆದ ಒಂದೂವರೆ ವರ್ಷಗಳಿಂದ ಕೊರೊನಾದಿಂದ ಎಲ್ಲೆಡೆ ಆಪತ್ಕಾಲದ ಸ್ಥಿತಿಯು ಉದ್ಭವಿಸಿದೆ. ಅನೇಕ ಸ್ಥಳಗಳಲ್ಲಿ ಸಾಧಕರು ಮತ್ತು ಅವರ ಕುಟುಂಬದವರಿಗೆ ತುರ್ತಾಗಿ ತುರ್ತುರೋಗಿವಾಹಕ (ಅಂಬ್ಯುಲೆನ್ಸ್)ಗಳು ಲಭ್ಯವಾಗಲು ಅಡಚಣೆ ಬಂದಿತು. ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಥವಾ ಹೆಚ್ಚು ಕುಶಲ ವೈದ್ಯಕೀಯ ಉಪಚಾರವನ್ನು ಪಡೆಯಲು ಬೇರೆಡೆ ಸಾಗಿಸಲು, ಮುಂತಾದವುಗಳಿಗಾಗಿ ತುರ್ತುರೋಗಿವಾಹಕಗಳು ಕೂಡಲೇ ಮತ್ತು ಸಹಜವಾಗಿ ಲಭ್ಯವಾಗುವುದು ಅನಿವಾರ್ಯವಾಗಿರುತ್ತದೆ.
ಇಂತಹ ಆಪತ್ಕಾಲದ ಸ್ಥಿತಿಯ ಬಗ್ಗೆ ವಿಚಾರ ಮಾಡಿದರೆ ಸನಾತನದ ವಿವಿಧ ಆಶ್ರಮಗಳಿಗೆ ತುರ್ತಾಗಿ ೩ ತುರ್ತು ರೋಗಿವಾಹಕಗಳ ಆವಶ್ಯಕತೆಯಿದೆ. ವೈದ್ಯಕೀಯ ಸೌಲಭ್ಯ ಮತ್ತು ಇತರ ತಾಂತ್ರಿಕ ಅಂಶಗಳ ಬಗ್ಗೆ ವಿಚಾರ ಮಾಡಿದರೆ ‘ಫೋರ್ಸ್ (FORCE) ಈ ಕಂಪನಿಯ ‘ಬೆಸಿಕ್ ಲೈಫ್ ಸಪೋರ್ಟ್ ಟೈಪ್ ಸಿ (Basic Life Support Type C) ಈ ೩ ತುರ್ತುರೋಗಿವಾಹಕ (ಅಂಬ್ಯುಲೆನ್ಸ್) ಗಳನ್ನು ಖರೀದಿಸುವುದಿದೆ. ಈ ಒಂದು ತುರ್ತುರೋಗಿವಾಹಕದ ಅಂದಾಜು ಬೆಲೆ ೨೩ ಲಕ್ಷ ರೂಪಾಯಿಗಳಷ್ಟಿದೆ. ಸುಸ್ಥಿತಿಯಲ್ಲಿನ ತುರ್ತುರೋಗಿವಾಹಕ ಇದ್ದರೆ ಮತ್ತು ಅದನ್ನು ಅರ್ಪಣೆ ಸ್ವರೂಪದಲ್ಲಿ ನೀಡುವುದಿದ್ದರೆ ಆ ಬಗ್ಗೆಯೂ ತಿಳಿಸಬೇಕು.
ತುರ್ತುರೋಗಿವಾಹಕಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ಇದಕ್ಕಾಗಿ ಧನಾದೇಶವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ ಈ ಹೆಸರಿನಲ್ಲಿ ಬರೆಯಬೇಕು.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೩೦.೮.೨೦೨೧)