ಯೋಗಿ ಆದಿತ್ಯನಾಥರ ಕಠಿಣ ಪರಿಶ್ರಮದಿಂದಾಗಿ ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯ ! – ಪ್ರಧಾನಿ ಮೋದಿಯವರಿಂದ ಮೆಚ್ಚುಗೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದ್ದರಿಂದ ಇಂದು ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆ, ಎಂಬ ಪದಗಳಲ್ಲಿ ಪ್ರಧಾನಿ ಮೋದಿಯವರು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಶ್ಲಾಘಿಸಿದ್ದಾರೆ.

ಕೊರೊನಾ ಕಾಲಾವಧಿಯಲ್ಲಿ ಕಾವಡ ಯಾತ್ರೆಗೆ ಅನುಮತಿ ಏಕೆ ?

ಈ ವರ್ಷ ಜುಲೈ ೨೫ ರಿಂದ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ ಪ್ರಾರಂಭವಾಗಲಿದೆ. ಕೆಲವು ಷರತ್ತುಗಳೊಂದಿಗೆ ಅದಕ್ಕೆ ಸರಕಾರವು ಅನುಮತಿಸಿದೆ. ಉತ್ತರಪ್ರದೇಶ ಸರಕಾರದ ಅನುಮತಿಯ ನಂತರ, ಅನುಮತಿ ನಿರಾಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಉತ್ತರಾಖಂಡ ಸರಕಾರವು ಹೇಳಿದೆ.

ಕರ್ನಾಟಕ ಸರಕಾರದಿಂದ ದುರ್ಬಲ ವರ್ಗದವರಿಗೆ ಸಹಾಯವೆಂದು ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ವಿತರಣೆ !

ಹುತಾತ್ಮ, ಸೈನಿಕರ ಪತ್ನಿ, ದೇವದಾಸಿ, ಶವಾಗಾರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿಧವೆಯರು ಮುಂತಾದ ದುರ್ಬಲದವರಿಗೆ ಹಣಕಾಸಿನ ನೆರವು ಎಂದು ‘ಅಮೃತ ಸಿರಿ’ ಯೋಜನೆಯಡಿ ಉತ್ತಮ ತಳಿಗಳ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು, ಎಂಬ ಮಾಹಿತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ಪ್ರಭು ಚವ್ಹಾಣ ಇವರು ನೀಡಿದರು.

ಅಸ್ಸಾಂ ಸರಕಾರದಿಂದ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಎರಡುವರೆ ಲಕ್ಷ ರೂಪಾಯಿಯ ಸಹಾಯ !

ಅಸ್ಸಾಂ ಸರಕಾರವು ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಒಟ್ಟು ೨ ಲಕ್ಷ ೫೦ ಸಾವಿರ ಮೊತ್ತದಷ್ಟು ಸಹಾಯವನ್ನು ಏಕಗಂಟಿನಲ್ಲಿ ನೀಡುವ ಆಯೋಜನೆಯನ್ನು ಆರಂಭಿಸಿದರು. ಯಾವ ಕುಟುಂಬದ ವಾರ್ಷಿಕ ಆದಾಯ ೫ ಲಕ್ಷದ ಒಳಗಿದೆಯೋ, ಅಂತಹ ಕುಟುಂಬದವರಿಗೆ ಈ ಸಹಾಯ ಸಿಗಲಿದೆ.

ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.

ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.

ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ.

ಎದ್ದು ಕಾಣಬೇಕಾಗಿರುವುದು ನೀವಲ್ಲ, ನಿಮ್ಮ ಕೆಲಸ – ನೂತನ ಸಚಿವರಿಗೆ ಮೋದಿ ಕಿವಿಮಾತು

ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.

ಉಯಿಘರ್ ಮುಸಲ್ಮಾನರ ವಿರುದ್ಧ ಚೀನಾದಿಂದಾಗುತ್ತಿರುವ ದಮನಕ್ಕೆ ಪಾಕಿಸ್ತಾನದ ಬೆಂಬಲ !

ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.