ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ, ಉತ್ತರಾಖಂಡ ಸರಕಾರ ಮತ್ತು ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್
ನವ ದೆಹಲಿ : ಕಾವಡ ಯಾತ್ರೆಗೆ ಉತ್ತರಪ್ರದೇಶ ಸರಕಾರದ ಅನುಮತಿಯನ್ನು ನೀಡಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸ್ವತಃ ಹಸ್ತಕ್ಷೇಪ ಮಾಡುತ್ತಾ ಕೇಂದ್ರ, ಉತ್ತರಾಖಂಡ ಮತ್ತು ಉತ್ತರಪ್ರದೇಶಗಳಿಗೆ ನೋಟಿಸ್ ಕಳುಹಿಸಿ ಈ ಬಗ್ಗೆ ಉತ್ತರವನ್ನು ಕೇಳಿದೆ. ಮುಂದಿನ ವಿಚಾರಣೆ ಜುಲೈ ೧೬ ರಂದು ನಡೆಯಲಿದೆ. ನ್ಯಾಯಮೂರ್ತಿ ರೋಹಿಂಟನ್ ನರಿಮನ ಇವರ ನೇತೃತ್ವದ ನ್ಯಾಯಪೀಠವು ಈ ನೋಟಿಸ್ ನೀಡಿದೆ. ವಿಶೇಷವೆಂದರೆ ಬಿಜೆಪಿ ಆಡಳಿತದಲ್ಲಿರುವ ಉತ್ತರಾಖಂಡ ಸರಕಾರವು ಕಾವಡ ಯಾತ್ರೆಯನ್ನು ನಿಷೇಧಿಸಲು ನಿರ್ಧರಿಸಿದೆ. ಕಳೆದ ವರ್ಷವೂ ಉತ್ತರಾಖಂಡ ಸರಕಾರವು ಕಾವಡ ಯಾತ್ರೆ ನಿಷೇಧಿಸಿತ್ತು.
‘Citizens perplexed’: SC notice to UP govt for allowing Kanwar yatra https://t.co/4YkvDnTmAc
— The Times Of India (@timesofindia) July 14, 2021
೧. ಈ ವರ್ಷ ಜುಲೈ ೨೫ ರಿಂದ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ ಪ್ರಾರಂಭವಾಗಲಿದೆ. ಕೆಲವು ಷರತ್ತುಗಳೊಂದಿಗೆ ಅದಕ್ಕೆ ಸರಕಾರವು ಅನುಮತಿಸಿದೆ. ಉತ್ತರಪ್ರದೇಶ ಸರಕಾರದ ಅನುಮತಿಯ ನಂತರ, ಅನುಮತಿ ನಿರಾಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಉತ್ತರಾಖಂಡ ಸರಕಾರವು ಹೇಳಿದೆ. ‘ಕಾವಡ ಯಾತ್ರೆಯು ಅನೇಕ ರಾಜ್ಯಗಳೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಈ ರಾಜ್ಯಗಳೊಂದಿಗೆ ಚರ್ಚಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ ಧಾಮಿ ಹೇಳಿದ್ದಾರೆ.
೨. ನ್ಯಾಯಾಲಯವು, ನಮಗೆ ವರ್ತಮಾನಪತ್ರಿಕೆಗಳಿಂದ ಗಮನಕ್ಕೆ ಬಂದುದೇನೆಂದರೆ ಉತ್ತರಪ್ರದೇಶವು ಕಾವಡ ಯಾತ್ರೆಗೆ ಅನುಮತಿ ನೀಡಿದೆ, ಹಾಗೂ ಉತ್ತರಾಖಂಡ ಸರಕಾರವು ಮೊದಲಾದ ಅನುಭವಗಳ ಆಧಾರದ ಮೇಲೆ ಅನುಮತಿಯನ್ನು ನಿರಾಕರಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಆಯಾ ರಾಜ್ಯಗಳ ನಿಲುವೇನು ಎಂದು ? ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಭಾರತದ ನಾಗರಿಕರು ತೊಂದರೆಗೀಡಾಗಿದ್ದಾರೆ. ಏನು ನಡೆಯುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ಅದೇ ಸಮಯದಲ್ಲಿ, ದೇಶದ ಪ್ರಧಾನಿಯವರು ‘ಕೊರೊನಾದ ಬಗ್ಗೆ ಸ್ವಲ್ಪ ಅಸಡ್ಡೆ ತೋರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ನಾವು ಕೇಂದ್ರ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳಿಗೂ ನೋಟಿಸ್ ನೀಡುತ್ತಿದ್ದೇವೆ, ಎಂದು ಹೇಳಿದೆ