ಯೋಗಿ ಆದಿತ್ಯನಾಥರ ಕಠಿಣ ಪರಿಶ್ರಮದಿಂದಾಗಿ ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯ ! – ಪ್ರಧಾನಿ ಮೋದಿಯವರಿಂದ ಮೆಚ್ಚುಗೆ

( ಎಡದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ )

ವಾರಾಣಸಿ (ಉತ್ತರಪ್ರದೇಶ) – ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದ್ದರಿಂದ ಇಂದು ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆ, ಎಂಬ ಪದಗಳಲ್ಲಿ ಪ್ರಧಾನಿ ಮೋದಿಯವರು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಜುಲೈ ೧೫ ರಂದು ವಾರಾಣಸಿಯ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ ಅವರು ಅನೇಕ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದರು, ನಂತರ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ೨೦೧೭ಕ್ಕಿಂತ ಮೊದಲೇ ಕೇಂದ್ರ ಸರಕಾರದಿಂದ ಉತ್ತರಪ್ರದೇಶಕ್ಕಾಗಿ ಹಣ ಕಳುಹಿಸಲಾಗುತ್ತಿತ್ತು; ಆದರೆ ಆಗ ಲಕ್ಷ್ಮಣಪುರಿಯಲ್ಲಿ ಅದಕ್ಕೆ ಅಡಚಣೆಗಳು ಬರುತ್ತಿದ್ದವು. ಇಂದು ಯೋಗಿಜಿಯವರ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅವರು ಸ್ವತಃ ಪ್ರತಿಯೊಂದು ಜಿಲ್ಲೆಗೆ ಹೋಗುತ್ತಾರೆ ಮತ್ತು ಅಲ್ಲಿಯ ವಿಕಾಸ ಕಾಮಗಾರಿಯ ಪಗ್ರತಿಯ ಬಗ್ಗೆ ಗಮನ ಹರಿಸುತ್ತಾರೆ. ಇದರಿಂದಾಗಿಯೇ ಉತ್ತರಪ್ರದೇಶದಲ್ಲಿ ಬದಲಾವಣೆ ಆಗುತ್ತಿರುವುದು ಕಂಡು ಬರುತ್ತಿದೆ.

೨. ಮಾಫಿಯಾ ಆಡಳಿತ ಮತ್ತು ಮೂರ್ಖ ಭಯೋತ್ಪಾದನೆಗೆ ಇಂದು ಕಾನೂನಿನ ಪೆಟ್ಟು ಬೀಳುತ್ತಿದೆ. ಈಗ ಅಪರಾಧಿಗಳಿಗೂ ತಾವು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಉತ್ತರಪ್ರದೇಶ ಸರಕಾರವು ಇಂದು ಭ್ರಷ್ಟಾಚಾರ ಮತ್ತು ಹುಕುಮಶಾಹಿಯಿಂದ ಮುಕ್ತವಾಗಿದೆ.

೩. ಜಗತ್ತಿನ ಅನೇಕ ದೇಶಗಳಿಗಿಂತ ಉತ್ತರಪ್ರದೇಶದಲ್ಲಿ ಜನಸಂಖ್ಯೆಯು ಹೆಚ್ಚು ಇದೆ. ಆದರೂ ಅಲ್ಲಿಯ ಸರಕಾರ ಮತ್ತು ನಾಗರಿಕರು ಕೊರೊನಾದ ಎರಡನೇ ಅಲೆಯ ವಿರುದ್ಧ ಹೋರಾಡಿದ್ದಾರೆ ಎಂದು ಹೇಳಿದರು.