ಗೌಹಾಟಿ (ಅಸ್ಸಾಂ) – ಅಸ್ಸಾಂ ಸರಕಾರವು ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಒಟ್ಟು ೨ ಲಕ್ಷ ೫೦ ಸಾವಿರ ಮೊತ್ತದಷ್ಟು ಸಹಾಯವನ್ನು ಏಕಗಂಟಿನಲ್ಲಿ ನೀಡುವ ಆಯೋಜನೆಯನ್ನು ಆರಂಭಿಸಿದರು. ಯಾವ ಕುಟುಂಬದ ವಾರ್ಷಿಕ ಆದಾಯ ೫ ಲಕ್ಷದ ಒಳಗಿದೆಯೋ, ಅಂತಹ ಕುಟುಂಬದವರಿಗೆ ಈ ಸಹಾಯ ಸಿಗಲಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಇಂತಹ ೧೭೬ ವಿಧವೆಯರಿಗೆ ಪ್ರತಿಯೊಬ್ಬರಿಗೆ ಎರಡುವರೆ ಲಕ್ಷ ರೂಪಾಯಿಯ ಸಹಾಯಧನ ನೀಡಿ ಈ ಆಯೋಜನೆಯನ್ನು ಆರಂಭಿಸಿದರು.
#Assam rolls out scheme to give Rs 2.5 lakh to #COVID19 widowshttps://t.co/EC5mWMMSlY
— Zee News English (@ZeeNewsEnglish) July 11, 2021
ರಾಜ್ಯದಲ್ಲಿ ೮೭೩ ವಿಧವೆಯರಿಗೆ ಈ ಯೋಜನೆಯ ಲಾಭ ಸಿಗುವ ಸಾಧ್ಯತೆಯಿದೆ, ಎಂದು ಒಂದು ಸಮೀಕ್ಷೆಯಲ್ಲಿ ಗಮನಕ್ಕೆ ಬಂದಿದೆ. ಇವರೆಲ್ಲರಿಗೆ ಮುಂದಿನ ವಾರದೊಳಗೆ ಚೆಕ್ ನೀಡಲಾಗುವುದು, ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.