ಕರ್ನಾಟಕ ಸರಕಾರದಿಂದ ದುರ್ಬಲ ವರ್ಗದವರಿಗೆ ಸಹಾಯವೆಂದು ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ವಿತರಣೆ !

ಕರುಗಳ ವಿತರಣೆಯೊಂದಿಗೆ ಸ್ವಲ್ಪ ಕಾಲದ ತನಕ ಅವುಗಳ ಮೇವಿನ ಬಗ್ಗೆಯೂ ಅನುಕೂಲ ಮಾಡಿಕೊಡುವುದು ಅಗತ್ಯವಿದೆ. ಇಲ್ಲದಿದ್ದರೆ ದುರ್ಬಲ ವರ್ಗದವರು ಆಹಾರಕ್ಕಾಗಿ ಹೋರಾಡಬೇಕಾಗುತ್ತದೆ !

ಬೆಂಗಳೂರು – ಹುತಾತ್ಮ, ಸೈನಿಕರ ಪತ್ನಿ, ದೇವದಾಸಿ, ಶವಾಗಾರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿಧವೆಯರು ಮುಂತಾದ ದುರ್ಬಲದವರಿಗೆ ಹಣಕಾಸಿನ ನೆರವು ಎಂದು ‘ಅಮೃತ ಸಿರಿ’ ಯೋಜನೆಯಡಿ ಉತ್ತಮ ತಳಿಗಳ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು, ಎಂಬ ಮಾಹಿತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ಪ್ರಭು ಚವ್ಹಾಣ ಇವರು ನೀಡಿದರು.

ಚವ್ಹಾಣ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಾರುಕಟ್ಟೆ ಬೆಲೆಯ ಶೇಕಡಾ ೨೫ ಕ್ಕೆ ಕರುಗಳನ್ನು ವಿತರಿಸಲಾಗುವುದು ದೇಶೀಯ ತಳಿಯ ಹಸುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ. ಸಂತಾನೋತ್ಪತ್ತಿ ಕೇಂದ್ರದಲ್ಲಿ ಅಗತ್ಯವಿರುವಷ್ಟು ಕರುಗಳನ್ನು ಇಟ್ಟುಕೊಂಡು ಉಳಿದ ಕರುಗಳನ್ನು ನೀಡಲಾಗುವುದು. ಈ ಉದ್ದೇಶಕ್ಕಾಗಿ ಹಳ್ಳಿಕಾರ, ಅಮೃತ ಮಹಲ, ಮಲೆನಾಡ ಗಿಡ್ಡ, ಖಿಲಾರಿ ಮತ್ತು ಕೃಷ್ಣಾವಳಿ ಜಾತಿಯ ಹಸುಗಳ ಕರುಗಳನ್ನು ಈ ಉದ್ದೇಶಕ್ಕಾಗಿ ಇಡಲಾಗುವುದು. ರಾಜ್ಯದಲ್ಲಿ ೧೯ ಸಂತಾನೋತ್ಪತ್ತಿ ಕೇಂದ್ರಗಳಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಲ್ಲಿ ೯೨೭ ಹಸುಗಳನ್ನು ನೀಡಲಾಗುವುದು. ತಾಲ್ಲೂಕು ಪ್ರಾಣಿ ವಿತರಣಾ ಸಮಿತಿ ಪರವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.