ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಕೊಟೇಶ್ವರದ (ಉಡುಪಿ ಜಿಲ್ಲೆ) ಸನಾತನದ ಸಾಧಕಿ ಶ್ರೀಮತಿ ಲಕ್ಷ್ಮೀದೇವಿ ಪೈ (ವಯಸ್ಸು ೮೨ ವರ್ಷ)

ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಸನಾತನ ಪ್ರಭಾತ ಪತ್ರಿಕೆಯನ್ನು ಓದಿ ಅದರಲ್ಲಿ ಹೇಳಿರುವಂತೆ ಕೃತಿ ಮಾಡುವ ಹಾಗೂ ಭಗವಂತನಲ್ಲಿ ಅಸೀಮಭಕ್ತಿ ಶ್ರದ್ಧೆ ಇರುವ ಉಡುಪಿ ಜಿಲ್ಲೆಯ ಕೊಟೇಶ್ವರದ ಶ್ರೀಮತಿ ಲಕ್ಷ್ಮೀದೇವಿ ಪೈ (ವಯಸ್ಸು ೮೨) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರು ತಿಳಿಸಿದರು.

ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಉಡುಪಿ ಜಿಲ್ಲೆಯ ಹಿತಚಿಂತಕರಾದ ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ (ವಯಸ್ಸು ೮೨ ವರ್ಷ)

ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಸನಾತನದ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಅವರ ಒಂದು ಅನೌಪಚಾರಿಕ ಸತ್ಸಂಗದಲ್ಲಿ ಘೋಷಿಸಿದರು.

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬ ನೇ ವರ್ಧಂತ್ಯುತ್ಸವ

‘ಸೌ ಸೊನಾರ ಕಿ ಎಕ ಲುಹಾರ್‌ ಕಿ !’, ಎಂದು ಹಿಂದಿ ಭಾಷೆಯಲ್ಲಿ ನಾಣ್ನುಡಿ ಇದೆ. ಅದರ ಅರ್ಥ, ‘ಅಕ್ಕಸಾಲಿಗನ ೧೦೦ ಆಘಾತಗಳಿಂದ ಯಾವ ಕೆಲಸವಾಗುವುದಿಲ್ಲವೋ ಅದು ಕಮ್ಮಾರನ ಒಂದು ಆಘಾತದಿಂದ ಆಗುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಿಯಕಾಲಿಕೆಗಳ ಸಂದರ್ಭದಲ್ಲಿ ಇದೆ.

ಪ.ಪೂ. ಭಕ್ತರಾಜ ಮಹಾರಾಜರ ಗುರುಭಕ್ತಿ

ಗುರುಗಳ ಊಟವಾದ ನಂತರ ಅವರ ಎಂಜಲನ್ನು ಬಾಬಾ ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಬಾಬಾರವರು ದಿನನಿತ್ಯ ಬೆಳಗ್ಗೆ ಗುರುಗಳ ಚರಗಳನ್ನು ತೊಳೆದು ಆ ನೀರನ್ನು ‘ತೀರ್ಥ’ವೆಂದು ಸೇವಿಸುತ್ತಿದ್ದರು.

ಸಾಧಕರಿಗೆ ತಾತ್ತ್ವಿಕ ವಿಷಯದೊಂದಿಗೆ ಪ್ರಾಯೋಗಿಕ ಸ್ತರದಲ್ಲಿ ಮಾರ್ಗದರ್ಶನ ನೀಡಿ ಸಾಧನೆಯಲ್ಲಿ ಕೃತಿಶೀಲ ಮಾಡುವ ಮತ್ತು ಮೋಕ್ಷಮಾರ್ಗದತ್ತ ಕೊಂಡೊಯ್ಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥಾಪಿಸಿದ ಅದ್ವಿತೀಯ ‘ಸನಾತನ ಸಂಸ್ಥೆ’ !

ಈಶ್ವರನ ಆರಾಧನೆಯನ್ನು ಮಾಡುವ ಜೀವಗಳಲ್ಲಿ ದೇವತೆಗಳು ಮತ್ತು ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗಬೇಕು ಮತ್ತು ಅವರಿಗೆ ದೇವತೆ ಗಳ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗಬೇಕು’, ಎಂಬುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ವಾರಕ್ಕೊಮ್ಮೆ ಭಕ್ತಿಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ.

ಸಾಧಕರು ಸೇವೆ ಮಾಡುವಾಗ ಪ್ರತಿ ೧-೨ ಗಂಟೆಗಳಿಗೊಮ್ಮೆ ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡುವುದು ಆವಶ್ಯಕ !

‘ಸದ್ಯದ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅನೇಕ ಸಾಧಕರ ಮೇಲೆ ಮೇಲಿಂದ ಮೇಲೆ ಕಪ್ಪು ಆವರಣ (ತೊಂದರೆದಾಯಕ ಶಕ್ತಿಯ ಆವರಣ) ಬರುತ್ತದೆ. ಸಾಧಕರು ನಿರಂತರ ಸೇವೆ ಅಥವಾ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡುವುದರಿಂದ ಅವರ ಆಧ್ಯಾತ್ಮಿಕ ಉಪಾಯ ಮತ್ತು ವ್ಯಷ್ಟಿ ಸಾಧನೆಯ ಪ್ರಯತ್ನ ಸರಿಯಾಗಿ ಆಗುವುದಿಲ್ಲ.

ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ ‘ಸೌ. ಸುಪ್ರಿಯಾ ಮಾಥುರ ಇವರಲ್ಲಾದ ಬದಲಾವಣೆಯು ಸಾಧಕರಿಗೆ ಅರಿವಾಗುವುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದ ಸಂಭಾಷಣೆ

ಕೆಲವು ಸಾಧಕರಿಗೆ ವರದಿ ಸತ್ಸಂಗದಲ್ಲಿ ಒತ್ತಡವಾಗುತ್ತದೆ ಅಥವಾ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನಾ ಪ್ರಕ್ರಿಯೆಯ ಒತ್ತಡವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನವನ್ನು ಪಡೆಯುವ ಸಾಧಕಿ ನೀಡಿದ ಜ್ಞಾನಮಯ ಉತ್ತರ !

ಸಾಧಕನಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದಾಗ, ಅವನಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಈಶ್ವರನಿಗೆ ಅಪೇಕ್ಷಿತವಾದ ಪ್ರಯತ್ನವಾಗತೊಡಗುತ್ತದೆ. ಅನಂತರ ಅವನ ಮೇಲೆ ಶ್ರೀ ಗುರುಗಳ ಕೃಪೆಯಾಗಿ ಅವನಿಗೆ ಪುನಃ ಸೂಕ್ಷ್ಮ ಜ್ಞಾನವು ಪ್ರಾಪ್ತವಾಗತೊಡಗುತ್ತದೆ.’

ಪ್ರೇಮಭಾವ ಮತ್ತು ಗುರುಗಳ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಶಿವಮೊಗ್ಗದ ಕು. ಶ್ರೀಲಕ್ಷ್ಮೀ ವಿಜಯ ರೇವಣಕರ (ವಯಸ್ಸು ೧೩ ವರ್ಷ) !

ಶ್ರೀಲಕ್ಷ್ಮಿಯು ಚಿಕ್ಕಂದಿನಿಂದಲೇ ಪ್ರತಿದಿನ ೧೦ ರಿಂದ ೩೦ ನಿಮಿಷಗಳ ವರೆಗೆ ನಾಮಸ್ಮರಣೆ ಮಾಡುತ್ತಾಳೆ. ಈಗ ಅವಳು ಪ್ರತಿದಿನ ೪೫ ನಿಮಿಷಗಳ ವರೆಗೆ ನಾಮಸ್ಮರಣೆಯನ್ನು ಮಾಡುತ್ತಾಳೆ, ಹಾಗೆಯೇ ನಾಮಜಪಾದಿ ಉಪಾಯಗಳನ್ನೂ ನಿಯಮಿತವಾಗಿ ಮಾಡುತ್ತಾಳೆ.

ರಾತ್ರಿ ಮಲಗುವ ಮೊದಲು ಆಧ್ಯಾತ್ಮಿಕ ಉಪಾಯವನ್ನು ಅವಶ್ಯ ಮಾಡಬೇಕು !

ರಾತ್ರಿ ಮಲಗುವ ಮೊದಲು ಆವರಣ ತೆಗೆಯದಿದ್ದರೆ ರಾತ್ರಿಯಿಡಿ ಆವರಣಯುಕ್ತ ಇದ್ದರೆ ಕೆಟ್ಟ ಶಕ್ತಿಗಳ ದಾಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮೊದಲು ೧೦ ನಿಮಿಷಗಳ ಕಾಲ ಉಪ್ಪು ನೀರಿನ ಉಪಾಯ ಮಾಡಬೇಕು.