
‘ಸದ್ಯದ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಬಹಳ ಹೆಚ್ಚಾಗಿದೆ. ಆದುದರಿಂದ ಹೆಚ್ಚಿನ ಸಾಧಕರ ಮೇಲೆ ದಿನವಿಡೀ ನಡುನಡುವೆ ಕಪ್ಪು (ತೊಂದರೆದಾಯಕ) ಆವರಣ ಬರುತ್ತಿರುತ್ತದೆ. ಸಾಧಕರು ನಡುನಡುವೆ ಅದನ್ನು ತೆಗೆಯುತ್ತಿರಬೇಕು. ರಾತ್ರಿ ಮಲಗುವ ಮೊದಲು ಆವರಣ ತೆಗೆಯದಿದ್ದರೆ ರಾತ್ರಿಯಿಡಿ ಆವರಣಯುಕ್ತ ಇದ್ದರೆ ಕೆಟ್ಟ ಶಕ್ತಿಗಳ ದಾಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮೊದಲು ೧೦ ನಿಮಿಷಗಳ ಕಾಲ ಉಪ್ಪು ನೀರಿನ ಉಪಾಯ ಮಾಡಬೇಕು. ವಿಪರೀತ ಆಯಾಸದಿಂದ ಉಪ್ಪುನೀರಿನಲ್ಲಿ ಕಾಲು ಮುಳುಗಿಸಿಡಲು ಸಾಧ್ಯವಾಗದಿದ್ದರೆ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಎರಡೂ ಕೈಯ ಮುಷ್ಠಿಯಲ್ಲಿ ಉಪ್ಪು ತೆಗೆದುಕೊಂಡು ಉಪಾಯ ಮಾಡಿದರೂ ನಡೆಯುತ್ತದೆ. ಈ ಪದ್ಧತಿ ಮುಂದಿನಂತಿದೆ
೧. ಎರಡೂ ಕೈಗಳಲ್ಲಿ ಸಹಜವಾಗಿ ಹಿಡಿಯುವಷ್ಟು ಕಲ್ಲುಪ್ಪನ್ನು ತೆಗೆದುಕೊಳ್ಳಬೇಕು
೨. ಪ್ರಾರ್ಥನೆ ಮಾಡಿ ೧೦ ನಿಮಿಷ ಭಾವಪೂರ್ಣ ನಾಮಜಪ ಮಾಡಬೇಕು. ಈ ಸಮಯದಲ್ಲಿ ಸೂಕ್ಷ್ಮದಿಂದ (ಮನಸ್ಸಿನಿಂದ) ಆವರಣ ಸಹ ತೆಗೆಯಬಹುದು.
೩. ಅನಂತರ ಕಲ್ಲುಪ್ಪನ್ನು ಬೇಸಿನ್‌ದಲ್ಲಿ ವಿಸರ್ಜಿಸಬೇಕು ಮತ್ತು ಎರಡೂ ಕೈಗಳನ್ನು ತೊಳೆದುಕೊಳ್ಳಬೇಕು ಮಲಗುವ ಮೊದಲು ಸ್ವಲ್ಪ ಸಮಯ ನಾಮಜಪಿಸಿದರೆ ರಾತ್ರಿಯಿಡಿ ಅದು ನಡೆಯು ತ್ತದೆ. ಇದರಿಂದ ರಾತ್ರಿಯಿಡಿ ರಕ್ಷಣಾ ಕವಚವು ಲಭಿಸಲು ಸಾಧ್ಯವಾಗುತ್ತದೆ.
– ಪೂ. ಸಂದೀಪ ಆಳಶಿ (೨೦.೧೧.೨೦೨೪)
|
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. *ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು