ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ ಇವರಿಂದ  ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯವು ಈ ಯುದ್ಧಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲಿಯವರೆಗೆ ಶುದ್ಧ ಧರ್ಮಬೀಜ ಪೃಥ್ವಿಯ ಮೇಲೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವತಾರಗಳು ಕಾರ್ಯನಿರತವಾಗಿರುತ್ತವೆ. ಹೇಗೆ ‘ಶ್ರೀರಾಮ ಮತ್ತು ರಾಮಾಯಣ, ಹೇಗೆ ‘ಶ್ರೀಕೃಷ್ಣ ಮತ್ತು ಗೀತಾ-ಭಾಗವತ, ಹಾಗೆಯೇ, ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಗ್ರಂಥಗಳಾಗಿವೆ.

ಆಪತ್ಕಾಲವು ಅಶಾಶ್ವತ, ಆದರೆ ‘ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ರೂಪದಲ್ಲಿ ಕಾರ್ಯನಿರತವಾಗಿರುವ ಗುರುತತ್ತ್ವವೇ ಶಾಶ್ವತ !

ಕೆಲವೊಮ್ಮೆ ಒಬ್ಬರೇ ಸಾಧಕರಿಗೆ ತೊಂದರೆಯಾಗುವ ಮೊದಲೇ ಮೂರೂ ಗುರುಗಳು ಅವರನ್ನು ಜಾಗರೂಕಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಮನಸ್ಸಿನಲ್ಲಿ ಆ ಸಾಧಕರ ನೆನಪಾಗಿ ಅವರು ಆ ಸಾಧಕನಿಗೆ ಇಂತಹ ಸ್ಥಳದಲ್ಲಿ ಸೇವೆಗೆ ಹೋಗುವಾಗ ಜಾಗರೂಕ ಇರಲು ಮತ್ತು ಎಲ್ಲ ನಾಮಜಪಾದಿ ಉಪಾಯ ಮಾಡಲು ಸೂಚಿಸಿದಂತಹ ಅನೇಕ ಪ್ರಸಂಗಗಳು ನೋಡಲು ಸಿಕ್ಕಿದವು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !

ಶ್ರೀ ಗುರುಗಳ ಜನ್ಮೋತ್ಸವವು ಸ್ಥೂಲದಲ್ಲಿ ಆಚರಿಸುವ ಮೊದಲು ಅದು ಶಿಷ್ಯನ ಮನಸ್ಸಿನಲ್ಲಿ ಆಚರಣೆಯಾಗುತ್ತಿರುತ್ತದೆ. ಶಿಷ್ಯನ ಮನಸ್ಸು ಆ ಆನಂದದಲ್ಲಿ ಮುಳುಗುತ್ತಿರುತ್ತದೆ. ಅವನಿಗೆ ಏನಾದರೂ ಮಾಡಿ ‘ನಾವು ಈ ಆನಂದವನ್ನು ವ್ಯಕ್ತಪಡಿಸಬೇಕು’, ಎಂದೆನಿಸುತ್ತದೆ. ಅವನ ಮನಸ್ಸಿನಲ್ಲಿ ತುಂಬಿಕೊಂಡ ಈ ಆನಂದವು ಮುಂದೆ ಈ ‘ಉತ್ಸವದ’ ರೂಪವನ್ನು ಧಾರಣೆ ಮಾಡುತ್ತದೆ.

ಏಕಮೇವಾದ್ವಿತೀಯ ಗ್ರಂಥಗಳ ಲೇಖನದ ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಲ್ಲಿಯವರೆಗೆ ಜಗತ್ತಿನಲ್ಲಿ ಕೆಲವು ಸಂತರ ‘ಅಧ್ಯಾತ್ಮ’ದ ಬಗೆಗಿನ ಕೆಲವು ಗ್ರಂಥಗಳು ಕೆಲವು ಭಾಷೆಗಳಲ್ಲಿ ಮಾತ್ರ ಪ್ರಕಟಗೊಂಡಿವೆ. ತದ್ವಿರುದ್ಧ ಕೇವಲ ೨೦ ವರ್ಷಗಳಲ್ಲಿ (ಏಪ್ರಿಲ್ ೨೦೨೧ ರ ವರೆಗೆ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಂದ ವಿವಿಧ ವಿಷಯಗಳ ೩೩೭ ಗ್ರಂಥಗಳು ಪ್ರಕಟವಾಗಿವೆ.

ಕರ್ನಾಟಕದ ಓರ್ವ ಸಂತರು ಹೇಳಿದ ಮಾರ್ಗದರ್ಶಕ ಅಂಶಗಳು

ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಜಗನ್ಮಾತೆ ಇವರು ಜಗತ್ತಿನ ರಕ್ಷಣೆಯನ್ನು ಮಾಡುತ್ತಾರೆ. ‘ಜನರು ಧರ್ಮದ ಮಾರ್ಗದಿಂದ ಸಾಗಬೇಕು (ಧರ್ಮಪಾಲನೆ ಮಾಡಬೇಕು), ಅದಕ್ಕಾಗಿ ಶ್ರೀವಿಷ್ಣುವು ಮಾರ್ಗದರ್ಶನ ಮಾಡುತ್ತಿದ್ದು ಅವನು ಜನರ ಪಾಲನೆ-ಪೋಷಣೆ ಮಾಡುತ್ತಾನೆ. ಈ ಕಾರ್ಯದಲ್ಲಿ ಶ್ರೀಗುರುಗಳು ಮತ್ತು ಜಗನ್ಮಾತೆ ಇವರು ತತ್ಪರರಾಗಿದ್ದಾರೆ.

ಸಪ್ತರ್ಷಿಗಳ ಆಜ್ಞೆಯಿಂದ ಅಕ್ಷಯ ತದಿಗೆಯ ಶುಭದಿನದಂದು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜದ ಸ್ಥಾಪನೆ ಮತ್ತು ಧ್ವಜಾರೋಹಣ !

ಅಕ್ಷಯ ತದಿಗೆಯು ಅವಿನಾಶೀ ತತ್ತ್ವದ ಪ್ರತೀಕವಾಗಿದೆ. ಈ ಶುಭದಿನದಂದು (೧೪.೫.೨೦೨೧ ರಂದು) ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ (ಗೋವಾ) ಆಶ್ರಮ ದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಚೈತನ್ಯಮಯ ವಾತಾವರಣದಲ್ಲಿ ಶಾಸ್ತ್ರೋಕ್ತವಾಗಿ ಧರ್ಮಧ್ವಜದ ಪೂಜೆಯನ್ನು ಮಾಡಲಾಯಿತು.

ವಡಾಳಾ ಮಹಾದೇವ (ನಗರ ಜಿಲ್ಲೆ) ಇಲ್ಲಿಯ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮಿ ಇವರ ಉತ್ತರಾಧಿಕಾರಿ ಪ.ಪೂ. ಭಾಸ್ಕರಕಾಕಾ ಇವರಿಂದ ದೇಹತ್ಯಾಗ !

ವಡಾಳಾ ಮಹಾದೇವ ಇಲ್ಲಿನ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಮೇ ೧೪ ರಂದು ಬೆಳಗ್ಗೆ ೬.೩೦ ಕ್ಕೆ ಶ್ರೀರಾಮಪುರದಲ್ಲಿನ ಗುರುದೇವ ಡಾ. ಕಾಟೆಸ್ವಾಮಿ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ೬೧ ವರ್ಷ ವಯಸ್ಸಾಗಿತ್ತು.

ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರ ದೇಹತ್ಯಾಗ

ನಮ್ರತೆ, ನಿರಪೇಕ್ಷ ಪ್ರೀತಿ ಇವುಗಳಂತಹ ದೈವೀ ಗುಣಗಳಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿರುವ, ಹಾಗೆಯೇ ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರು ಮೇ ೧೧ ರಂದು ರಾತ್ರಿ ೧.೩೮ ಗಂಟೆಗೆ ದೇಹತ್ಯಾಗ ಮಾಡಿದರು.

ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !

ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ನೀನು ನಮ್ಮಿಂದ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿರುವೆ. ಈ ಕಾರ್ಯವು ಆದಷ್ಟು ಬೇಗನೆ ಪೂರ್ಣವಾಗಲು ನನ್ನನ್ನು ಮತ್ತು ಇತರ ಎಲ್ಲ ಸಾಧಕರನ್ನು ರೋಗಮುಕ್ತರನ್ನಾಗಿ ಮಾಡಿ ನಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ನೀಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

ಸಂತರು ಮತ್ತು ಅವರ ಸಾಧನೆಯ ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಭಕ್ತಿ ಹೆಚ್ಚಾದ ನಂತರ ನಮ್ಮನ್ನು ಅದರಿಂದ ದೂರ ಮಾಡಲು ದೇವರು ನಮ್ಮನ್ನು ಶ್ರೀಮಂತಿಕೆಯಲ್ಲಿ ಮುಳುಗಿಸುತ್ತಾನೆ, ಇಲ್ಲದಿದ್ದರೆ ಬಡತನದಲ್ಲಿ ಮುಳುಗಿಸುತ್ತಾನೆ, ಕೆಲವೊಮ್ಮೆ ಸಂಕಟ ಮತ್ತು ದುಃಖಗಳ ಆಳವಾದ ನದಿಯಲ್ಲಿ ಮುಳುಗಿಸುತ್ತಾನೆ. ಯಾರು ದೇವರ ಮಾರ್ಗವನ್ನು ಹಿಡಿಯುವರೋ, ಅವರನ್ನು ದೇವರು ಸಂಸಾರದ ಸುಖದಲ್ಲಿ ಸಿಲುಕಲು ಬಿಡುವುದಿಲ್ಲ.