ಸಾಧಕರಿಗೆ ತಾತ್ತ್ವಿಕ ವಿಷಯದೊಂದಿಗೆ ಪ್ರಾಯೋಗಿಕ ಸ್ತರದಲ್ಲಿ ಮಾರ್ಗದರ್ಶನ ನೀಡಿ ಸಾಧನೆಯಲ್ಲಿ ಕೃತಿಶೀಲ ಮಾಡುವ ಮತ್ತು ಮೋಕ್ಷಮಾರ್ಗದತ್ತ ಕೊಂಡೊಯ್ಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥಾಪಿಸಿದ ಅದ್ವಿತೀಯ ‘ಸನಾತನ ಸಂಸ್ಥೆ’ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಅಧ್ಯಾತ್ಮದಲ್ಲಿ ಕೃತಿಗೆ ಶೇ. ೯೮ ರಷ್ಟು ಮಹತ್ವವಿದ್ದು ತಾತ್ತ್ವಿಕ ಭಾಗಕ್ಕೆ ಕೇವಲ ಶೇ. ೨ ರಷ್ಟೇ ಮಹತ್ವವಿದೆ. ‘ಸನಾತನ ಸಂಸ್ಥೆ’ಯು ‘ಅಧ್ಯಾತ್ಮ, ಸಮಾಜಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮ’ ಈ ಎಲ್ಲ ವಿಷಯಗಳ ಬಗ್ಗೆ ಕೇವಲ ತಾತ್ತ್ವಿಕ ಸ್ತರದ ಮಾಹಿತಿ ನೀಡದೇ ‘ಇವುಗಳಲ್ಲಿನ ಅಂಶಗಳನ್ನು ಕೃತಿಯಲ್ಲಿ ತರುವುದು ಹೇಗೆ ? ಎಂಬ ಬಗ್ಗೆ ನಿಖರವಾಗಿ ಮಾರ್ಗದರ್ಶನ ಮಾಡುವ ಏಕೈಕ ಸಂಸ್ಥೆಯಾಗಿದೆ. ಸಂಸ್ಥೆಯು ವಿವಿಧ ಮಾಧ್ಯಮಗಳಿಂದ ಮತ್ತು ವಿವಿಧ ರೀತಿಯಲ್ಲಿ ಸಾಧಕರ ಜೊತೆಗೆ ಜಿಜ್ಞಾಸು ಮತ್ತು ಧರ್ಮಪ್ರೇಮಿಗಳನ್ನು ಕೃತಿಶೀಲ ಮಾಡಲು ಪ್ರೇರೇಪಿಸುತ್ತಿದೆ ಮತ್ತು ಕೃತಿಯಿಂದ ದೊರಕುವ ಆನಂದವನ್ನೂ ಅನುಭವಿಸಲು ಕಲಿಸುತ್ತಿದೆ. ಸನಾತನ ಸಂಸ್ಥೆಯು ಕಲಿಸಿದ ‘ಅಷ್ಟಾಂಗ ಸಾಧನೆ’ಗನುಸಾರ ಸಾಧನೆಯನ್ನು ಮಾಡಿದರೆ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಶೀಘ್ರಗತಿಯಲ್ಲಿ ಆಗತೊಡಗುತ್ತದೆ. ಸನಾತನ ಸಂಸ್ಥೆಯು ತಾತ್ತ್ವಿಕ ವಿಷಯದೊಂದಿಗೆ ಪ್ರಾಯೋಗಿಕ ಮಟ್ಟದಲ್ಲಿ ಮಾರ್ಗದರ್ಶನ ನೀಡಿ ಸಾಧಕರು, ಹಾಗೆಯೇ ಸಂತರ ನಿರ್ಮಿತಿಯ ಪ್ರಕ್ರಿಯೆಯನ್ನು ಅವಿರತವಾಗಿ ನಡೆಸುತ್ತಿದೆ.

ಸಮಾಜಕ್ಕೆ ಅಧ್ಯಾತ್ಮವನ್ನು ಕಲಿಸಲು ಸನಾತನ ಸಂಸ್ಥೆಯ ವತಿಯಿಂದ ವಿವಿಧ ರೀತಿಯ ಉಪಕ್ರಮಗಳನ್ನು ಆಯೋಜಿಸ ಲಾಗುತ್ತದೆ. ೬ ರಿಂದ ೧೦ ವರ್ಷಗಳ ವಯೋಗುಂಪಿನ ಮಕ್ಕಳ ಮೇಲೆ ಧರ್ಮಸಂಸ್ಕಾರವಾಗಬೇಕು ಮತ್ತು ಅವರಲ್ಲಿ ಉತ್ತಮ ಅಭ್ಯಾಸಗಳು ಬೆಳೆಯಬೇಕು ಎಂಬುದಕ್ಕಾಗಿ ‘ಬಾಲಸಂಸ್ಕಾರವರ್ಗ’ ಮತ್ತು ೧೧ ರಿಂದ ೧೪ ವರ್ಷ ವಯೋಗುಂಪಿನ ಕಿಶೋರವಯಸ್ಸಿನ ಮಕ್ಕಳಿಗೆ ಧರ್ಮಾಚರಣೆ ಮತ್ತು ರಾಷ್ಟ್ರಭಕ್ತಿ ಯನ್ನು ಕಲಿಸಲು ‘ಸುಸಂಸ್ಕಾರವರ್ಗ’ಗಳನ್ನು ಆಯೋಜಿಸ ಲಾಗುತ್ತದೆ. ೧೫ ರಿಂದ ೨೨ ವರ್ಷ ವಯೋಗುಂಪಿನ ಯುವಕರಲ್ಲಿ ಆತ್ಮಬಲ ಹೆಚ್ಚಿಸಲು ‘ಯುವ ಸಾಧನಾ ಸತ್ಸಂಗ’ ಮತ್ತು ‘ವ್ಯಕ್ತಿತ್ವ ವಿಕಾಸ ಕಾರ್ಯಾಗಾರ’ವನ್ನು ಆಯೋಜಿಸ ಲಾಗುತ್ತದೆ. ಸಾಧನೆಯನ್ನು ಆರಂಭಿಸಲು ಬಯಸುವ ಎಲ್ಲ ವಯೋಗುಂಪಿನ ಜಿಜ್ಞಾಸುಗಳಿಗೆ ಯೋಗ್ಯ ಸಾಧನೆಯನ್ನು ಕಲಿಸುವುದು ಮತ್ತು ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡುವವರಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾಯೋಗಿಕ ಮಟ್ಟದ ಮಾರ್ಗದರ್ಶನ ಮಾಡುವುದು, ಇವುಗಳಿ ಗಾಗಿ ‘ಸಾಧನಾ ಸತ್ಸಂಗ’ ಮತ್ತು ‘ಸಾಧನಾ ಶಿಬಿರ’ಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೇ ಪ್ರಾಥಮಿಕ ಹಂತದಲ್ಲಿರುವ ಸಾಧಕರು ಮತ್ತು ಭಕ್ತಿಯೋಗಕ್ಕನುಸಾರ ಸಾಧನೆಯನ್ನು ಮಾಡುವವರಿಗೆ ಭಕ್ತಿ ಸಾಧನೆಯನ್ನು ಕಲಿಸಲು ‘ಭಕ್ತಿಸತ್ಸಂಗ’ವನ್ನು ಆಯೋಜಿಸಲಾಗುತ್ತದೆ.

ಈ ಸತ್ಸಂಗಗಳ ಮಾಧ್ಯಮದಿಂದ ‘ವಾಸ್ತವದಲ್ಲಿ ಅಧ್ಯಾತ್ಮಿಕ ಜೀವನವನ್ನು ಹೇಗೆ ನಡೆಸಬೇಕು ? ಮತ್ತು ಪ್ರತಿಯೊಂದು ವಿಷಯದ ಅಧ್ಯಾತ್ಮೀಕರಣ ಹೇಗೆ ಮಾಡಬೇಕು ?’, ಎಂಬುದರ ಯೋಗ್ಯ ಮಾರ್ಗದರ್ಶನ ದೊರೆತರೆ ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ.

ಕಳೆದ ೮ ವರ್ಷಗಳಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಭಕ್ತಿಸತ್ಸಂಗ, ಅದರದ್ದೇ ಒಂದು ಉದಾಹರಣೆಯಾಗಿದೆ. ಈ ಭಕ್ತಿಸತ್ಸಂಗ ಕೇವಲ ಕೇಳುವ ಸತ್ಸಂಗವಾಗಿರದೇ ಅದು ಸಾಧಕರಿಗೆ ಆಧ್ಯಾತ್ಮಿಕ, ಹಾಗೆಯೇ ಭಕ್ತಿಯ ಊರ್ಜೆಯನ್ನು ಪ್ರದಾನಿಸಿ ನಿಜವಾದ ಪ್ರಯತ್ನಗಳನ್ನು ಮಾಡಲು ಪ್ರೇರೇಪಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚೈತನ್ಯಮಯ ಮತ್ತು ಭಕ್ತಿಯಿಂದ ಕೂಡಿದ ಇಂತಹ ವಾಣಿಯಿಂದ ಎಲ್ಲೆಡೆಯ ಸಾಧಕರಲ್ಲಿ ಭಾವಭಕ್ತಿಯು ಹೆಚ್ಚಾಗುತ್ತಿದೆ. ಸಾಧಕರು ಕೃತಿಯ ಸ್ತರದಲ್ಲಿ ಪ್ರಯತ್ನಿಸಿದುದರಿಂದ ಅವರಲ್ಲಿ ವೈಯಕ್ತಿಕ, ಕೌಟುಂಬಿಕ, ಹಾಗೆಯೇ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆ ಈ ಸ್ತರಗಳಲ್ಲಿ ಅಮೂಲಾಗ್ರ ಪರಿವರ್ತನೆಯಾಗುತ್ತಿದೆ. ಚಿಕ್ಕ ಚಿಕ್ಕ ಕೃತಿಗಳಿಗೆ ಭಾವದ ಪ್ರಯತ್ನಗಳನ್ನು ಜೋಡಿಸುವ ಕಾರಣ ಸಾಧಕರ ಸಂಪೂರ್ಣ ಜೀವನ ಭಾವಮಯವಾಗತೊಡಗಿದೆ ಮತ್ತು ‘ಭಾವ ಇದ್ದಲ್ಲಿ ದೇವ’ ಈ ಉಕ್ತಿಗನುಸಾರ ಅವರಿಗೆ ಅನೇಕ ಉಚ್ಚ ಅನುಭೂತಿಗಳು ಬರುತ್ತಿವೆ. ಇದರಿಂದ ಅನೇಕ ಸಾಧಕರ ಸಾಧನೆಯಲ್ಲಿ ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತಿದೆ.

ಜಿಜ್ಞಾಸುಗಳೇ, ಸನಾತನವು ಹೇಳುತ್ತಿರುವ ಕಾಲಾನುಸಾರ ಸಾಧನೆಯ ಲಾಭ ಪಡೆದುಕೊಳ್ಳಿ ಮತ್ತು ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚೈತನ್ಯಮಯ ವಾಣಿಯಲ್ಲಿ ಕೆಲವು ವಿಶೇಷ ಭಕ್ತಿಸತ್ಸಂಗಗಳು Sanatan.org ನಲ್ಲಿ ಲಭ್ಯ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಈಶ್ವರನ ಆರಾಧನೆಯನ್ನು ಮಾಡುವ ಜೀವಗಳಲ್ಲಿ ದೇವತೆಗಳು ಮತ್ತು ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗಬೇಕು ಮತ್ತು ಅವರಿಗೆ ದೇವತೆ ಗಳ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗಬೇಕು’, ಎಂಬುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ವಾರಕ್ಕೊಮ್ಮೆ ಭಕ್ತಿಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ. ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚೈತನ್ಯಮಯ ವಾಣಿಯಲ್ಲಿನ ಈ ಭಕ್ತಿಸತ್ಸಂಗಗಳಿಂದಾಗಿ ಸಾಧನೆ ಮಾಡುವ ಪ್ರೇರಣೆ ದೊರಕಿ ಅಂತರಂಗದಲ್ಲಿ ಭಕ್ತಿಯ ಸಂಸ್ಕಾರ ಆಳದಲ್ಲಿ ಬೇರೂರತೊಡಗು ತ್ತವೆ. ಈ ಸತ್ಸಂಗವನ್ನು ಕೇಳುವವರಿಗೆ ತಮ್ಮಲ್ಲಿ ಭಾವ ಜಾಗೃತವಾದ ಬಗ್ಗೆ ಅನುಭೂತಿ ಬರುತ್ತದೆ. ಕಳೆದ ೨-೩ ವರ್ಷಗಳಿಂದ ಹಬ್ಬ, ಉತ್ಸವಗಳ ಬಗ್ಗೆ ತೆಗೆದುಕೊಂಡ ಕೆಲವು ವಿಶೇಷ ಭಕ್ತಿಸತ್ಸಂಗಗಳು ಸನಾತನದ ಜಾಲತಾಣದಲ್ಲಿ ಜಿಜ್ಞಾಸುಗಳಿಗಾಗಿ ಲಭ್ಯ ಇವೆ. ಈ ಸತ್ಸಂಗಗಳನ್ನು ಕೇಳಿ ಈಶ್ವರನ ಬಗ್ಗೆ ಭಕ್ತಿಯನ್ನು ಹೆಚ್ಚಿಸಲು ಜಿಜ್ಞಾಸುಗಳು ಇದರ ಲಾಭ ಪಡೆಯಬಹುದು.

ಸತ್ಸಂಗವನ್ನು ಕೇಳುವುದಕ್ಕಾಗಿ ಲಿಂಕ್‌ – https://www.sanatan.org/hindi/audio-gallery