
ಉಡುಪಿ – ‘ತಮ್ಮ ೭ ವಯಸ್ಸಿನಿಂದಲೇ ತಂದೆ ಯವರು ಕಲಿಸಿದ ಮಾರುತಿಯ ಉಪಾಸನೆಯಿಂದ ಸಮಾಜದ ಹಾಗೂ ಕುಟುಂಬದ ಉದ್ಧಾರಕ್ಕಾಗಿ ನಿರಂತರವಾಗಿ ಶ್ರಮಿಸಿದ ಉಡುಪಿ ಜಿಲ್ಲೆಯ ಹಿತಚಿಂತಕರಾದ ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಸನಾತನದ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಅವರ ಒಂದು ಅನೌಪಚಾರಿಕ ಸತ್ಸಂಗದಲ್ಲಿ ಘೋಷಿಸಿದರು. ಈ ಭಾವಪೂರ್ಣ ವಾತಾವರಣದಲ್ಲಿ ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಸನಾತನದ ಸೌ. ಮಂಜುಳಾ ಗೌಡ ಹಾಗೂ ಇತರ ಸಾಧಕರು ಉಪಸ್ಥಿತರಿದ್ದರು. ಇಳಿವಯಸ್ಸಿನಲ್ಲಿಯೂ ಸತತ ಚಟುವಟಿಕೆ, ನಿರಂತರ ಅನುಸಂಧಾನ, ಪರೋಪಕಾರದ ಗುಣ, ಕರ್ತೃತ್ವವನ್ನು ಈಶ್ವರನ ಚರಣಗಳಿಗೆ ಒಪ್ಪಿಸುವುದು, ನಿರ್ಭಯತ್ವ ಮುಂತಾದ ದೈವೀ ಗುಣಗಳು ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರಲ್ಲಿದೆ ಎಂದು ಪೂ. ರಮಾನಂದ ಗೌಡ ಇವರು ಈ ಸಂದರ್ಭದಲ್ಲಿ ತಿಳಿಸಿದರು.
ಅನಂತರ ತಮ್ಮ ಮನೋಗತವನ್ನು ಶ್ರೀಮತಿ ಸರೋಜಿನಿ ಅವರು ವ್ಯಕ್ತಪಡಿಸಿದರು. ಆಗ ಅವರು, ಎಲ್ಲವನ್ನೂ ದೇವರಿಗೆ ಹೇಳಿಕೊಳ್ಳುವುದರಿಂದ ನನಗೆ ಯಾವುದೇ ಭಯ ಇಲ್ಲ. ಎಲ್ಲ ಸಮಯಗಳಲ್ಲಿ ಅವನೇ ಕಾಪಾಡುತ್ತಾನೆ ಎಂಬ ಶ್ರದ್ಧೆಯಿದೆ. ಇದನ್ನು ನಾನು ಜೀವನದ ಅನೇಕ ಕಠಿಣ ಪ್ರಸಂಗಗಳಲ್ಲಿ ಅವರ ಕೃಪೆಯ ಅನುಭೂತಿಯನ್ನು ಪಡೆದಿದ್ದೇನೆ ಮತ್ತು ಎಲ್ಲವನ್ನೂ ದೇವರಿಗೆ ಹೇಳಿಕೊಳ್ಳುತ್ತೇನೆ ಎಂದು ಹೇಳಿದರು. ಅವರ ಮಗನ ನಮಗೆ ನಮ್ಮ ಅಮ್ಮನವರೇ ಸ್ಫೂರ್ತಿ, ಅವರು ಹೇಳಿಕೊಟ್ಟಂತೆ ನಾವು ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.