
ಉಡುಪಿ – ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಸನಾತನ ಪ್ರಭಾತ ಪತ್ರಿಕೆಯನ್ನು ಓದಿ ಅದರಲ್ಲಿ ಹೇಳಿರುವಂತೆ ಕೃತಿ ಮಾಡುವ ಹಾಗೂ ಭಗವಂತನಲ್ಲಿ ಅಸೀಮಭಕ್ತಿ ಶ್ರದ್ಧೆ ಇರುವ ಉಡುಪಿ ಜಿಲ್ಲೆಯ ಕೊಟೇಶ್ವರದ ಶ್ರೀಮತಿ ಲಕ್ಷ್ಮೀದೇವಿ ಪೈ (ವಯಸ್ಸು ೮೨) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರು ತಿಳಿಸಿದರು. ಅವರ ನಿವಾಸಸ್ಥಳದಲ್ಲಾದ ಒಂದು ಸತ್ಸಂಗದಲ್ಲಿ ಈ ಘೋಷಣೆ ಮಾಡಲಾಯಿತು. ಆರಂಭದಲ್ಲಿ ಅನೌಪಚಾರಿಕವಾಗಿ ಮಾತನಾಡುತ್ತಾ ಪೂ. ರಮಾನಂದ ಗೌಡ ಇವರು ಶ್ರೀಮತಿ ಲಕ್ಷ್ಮೀದೇವಿ ಪೈ ಇವರ ಪರಿಚಯ ಹಾಗೂ ಗುಣವೈಶಿಷ್ಟ್ಯಗಳನ್ನು ತಿಳಿಸುತ್ತಾ, ‘ಸತತ ಭಗವಂತನ ಅನುಸಂಧಾನದಲ್ಲಿರುವುದು, ಸತತ ನಾಮಜಪಿಸುವುದು, ಕರ್ತೃತ್ವವನ್ನು ಭಗವಂತನಿಗೆ ಒಪ್ಪಿಸುವುದು, ಕುಟುಂಬದವರಿಗೆ ಪ್ರೀತಿಯಿಂದ ಆಧಾರ ನೀಡುವುದು ಪ್ರೇಮಭಾವ ಮುಂತಾದ ದೈವೀ ಗುಣಗಳಿಂದಾಗಿ ಅವರ ಸಾಧನೆಯು ಉತ್ತಮವಾಗಿ ನಡೆಯುತ್ತಿದೆ. ಹಾಗಾಗಿ ಇಂದು ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆಂದು ಘೋಷಿಸಿದರು.
ಇದರಿಂದ ಉಪಸ್ಥಿತರೆಲ್ಲರಿಗೂ ಆನಂದ ಹಾಗೂ ಭಾವಜಾಗೃತಿ ಯಾಯಿತು. ಈ ಭಾವಪೂರ್ಣ ವಾತಾವರಣದಲ್ಲಿ ಶ್ರೀಮತಿ ಶ್ರೀಮತಿ ಲಕ್ಷ್ಮೀ ದೇವಿ ಪೈ ಇವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಮೊಮ್ಮಗನ ಪತ್ನಿ ಹಾಗೂ ಸನಾತನದ ಸೌ. ಮಂಜುಳಾ ಗೌಡ ಹಾಗೂ ಇತರ ಸಾಧಕರು ಉಪಸ್ಥಿತರಿದ್ದರು. ಅನಂತರ ಪೂ. ರಮಾನಂದ ಗೌಡ ಇವರು ಶ್ರೀಮತಿ ಲಕ್ಷ್ಮೀದೇವಿ ಪೈ ಇವರಿಗೆ ಅವರ ಇಷ್ಟದೇವರಾದ ಶ್ರೀಗಣಪತಿಯ ಭಾವಚಿತ್ರ ಹಾಗೂ ಪ್ರಸಾದವನ್ನು ನೀಡಿ ಸತ್ಕರಿಸಿದರು.
ಶ್ರೀಮತಿ ಲಕ್ಷ್ಮೀದೇವಿಯವರು ತಮ್ಮ ಮನೋಗತವನ್ನು ವ್ಯಕ್ತ ಪಡಿಸುತ್ತಾ, ‘ಪ್ರತಿಯೊಂದು ಪ್ರಸಂಗದಲ್ಲಿ ಭಗವಂತನೇ ನಮ್ಮಿಂದ ಎಲ್ಲವನ್ನು ಮಾಡಿಸುತ್ತಿದ್ದಾನೆ ಎಂಬ ದೃಢ ಶ್ರದ್ದೆಯಿದ್ದರೆ ಎಲ್ಲವೂ ಸಾಧ್ಯವಿದೆ’ ಎಂದು ತಿಳಿಸಿದರು. ಅನಂತರ ಅವರ ಕುಟುಂಬದವರು ಅವರ ಗುಣಗಳನ್ನು ತಿಳಿಸಿದರು.