ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನವನ್ನು ಪಡೆಯುವ ಸಾಧಕಿ ನೀಡಿದ ಜ್ಞಾನಮಯ ಉತ್ತರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪ್ರಶ್ನೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಜ್ಞಾನವನ್ನು ಪಡೆಯುವ ಕೆಲವು ಸಾಧಕರಿಗೆ ಈಗ ಸೂಕ್ಷ್ಮದಿಂದ ಜ್ಞಾನ ಪ್ರಾಪ್ತವಾಗುವ ಪ್ರಮಾಣ ಕಡಿಮೆಯಾಗಿದೆ ಮತ್ತು ಕೆಲವರಿಗೆ ಸೂಕ್ಷ್ಮ ಜ್ಞಾನ ಪ್ರಾಪ್ತವಾಗುತ್ತಿಲ್ಲ. ಇದಕ್ಕೆ ಕಾರಣವೇನು ? (೪.೯.೨೦೨೪)

ಉತ್ತರ :

೧.ಸಾಧಕರಿಗೆ ಸೂಕ್ಷ್ಮದಿಂದ ಜ್ಞಾನ ಪ್ರಾಪ್ತವಾಗುವ ಪ್ರಮಾಣ ಕಡಿಮೆಯಾಗುವುದು ಅಥವಾ ಪ್ರಾಪ್ತವಾಗದಿರುವುದು’ ಇದರ ಹಿಂದೆ ವಿವಿಧ ಘಟಕಗಳು, ಅವುಗಳ ಮಹತ್ವ ಮತ್ತು ಅವುಗಳ ಜ್ಞಾನ ಪ್ರಾಪ್ತಿಯ ಮೇಲಾಗುವ ಸೂಕ್ಷ್ಮ ಪರಿಣಾಮ ! 

ಸುಶ್ರೀ (ಕು.) ಮಧುರಾ ಭೋಸಲೆ

ಸಾಧಕನಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದಾಗ, ಅವನಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಈಶ್ವರನಿಗೆ ಅಪೇಕ್ಷಿತವಾದ ಪ್ರಯತ್ನವಾಗತೊಡಗುತ್ತದೆ. ಅನಂತರ ಅವನ ಮೇಲೆ ಶ್ರೀ ಗುರುಗಳ ಕೃಪೆಯಾಗಿ ಅವನಿಗೆ ಪುನಃ ಸೂಕ್ಷ್ಮ ಜ್ಞಾನವು ಪ್ರಾಪ್ತವಾಗತೊಡಗುತ್ತದೆ.’

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೪೧ ವರ್ಷಗಳು), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಪಡೆದ ದಿನಾಂಕ ಮತ್ತು ಬೆರಳಚ್ಚು ಮಾಡಿದ ಸಮಯ ೧೬.೯.೨೦೨೪ ಮಧ್ಯಾಹ್ನ ೨ ರಿಂದ ೨.೧೦)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.