ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸುವ ಪೀಳಿಗೆ ! ಕು. ಶ್ರೀಲಕ್ಷ್ಮೀ ವಿಜಯ ರೇವಣಕರ ಈ ಪೀಳಿಗೆಯಲ್ಲಿ ಒಬ್ಬಳು !

೧. ಶಾಂತ ಮತ್ತು ಸ್ಥಿರ ಸ್ವಭಾವ
‘ಶ್ರೀಲಕ್ಷ್ಮಿಯು ಚಿಕ್ಕಂದಿನಿಂದಲೇ ಶಾಂತ ಮತ್ತು ಸ್ಥಿರ ಸ್ವಭಾವದವ ಳಾಗಿದ್ದಾಳೆ. ಅವಳು ಪ್ರತಿಯೊಂದು ಪ್ರಸಂಗದಲ್ಲಿ ಸಕಾರಾತ್ಮಕವಾಗಿರುತ್ತಾಳೆ. ಅವಳಿಗೆ ಯಾವುದಾದರೂ ವಸ್ತುವನ್ನು ಕೊಟ್ಟರೆ, ಅವಳು ಸಕಾರಾತ್ಮಕತೆಯಿಂದ ಅದನ್ನು ಸ್ವೀಕರಿಸುತ್ತಾಳೆ.
೨. ಇತರರೊಂದಿಗೆ ಹೊಂದಿಕೊಳ್ಳುವುದು
ಶ್ರೀಲಕ್ಷ್ಮಿಯು ಎಲ್ಲರೊಂದಿಗೂ ಸಹಜವಾಗಿ ಹೊಂದಿಕೊಳ್ಳುತ್ತಾಳೆ. ನಮ್ಮ ಮನೆಯಲ್ಲಿ ಅವಳ ವಯಸ್ಸಿನವರು ಯಾರೂ ಇಲ್ಲ, ಆದರೂ ಅವಳು ತುಂಬಾ ಆನಂದದಿಂದಿರುತ್ತಾಳೆ.

೩. ಪ್ರೇಮಭಾವ
ಅ. ಶ್ರೀಲಕ್ಷ್ಮಿಯು ಸಾಕುಪ್ರಾಣಿಗಳನ್ನು ಇಷ್ಟಪಡುತ್ತಾಳೆ. ನಮ್ಮ ಮನೆಯಲ್ಲಿ ಹಸುಗಳು ಮತ್ತು ಬೆಕ್ಕುಗಳಿವೆ. ಅವುಗಳೊಂದಿಗೆ ಅವಳು ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ. ಆ ಪ್ರಾಣಿಗಳಿಗೂ ಶ್ರೀಲಕ್ಷ್ಮಿಯ ಒಳ್ಳೆಯ ರೂಢಿಯಾಗಿದೆ.
ಆ. ಶ್ರೀಲಕ್ಷ್ಮಿಯು ಮನೆಯಲ್ಲಿ ಅಜ್ಜ-ಅಜ್ಜಿಯವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾಳೆ. ಅವಳು ಅವರೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ. ಅವಳಲ್ಲಿ ಸಾಧಕರ ಬಗ್ಗೆ ತುಂಬಾ ಪ್ರೀತಿಯಿದೆ. ಮನೆಗೆ ಯಾರಾದರೂ ಸಾಧಕರು ಬಂದರೆ ಅವಳು ಅವರ ಜೊತೆಯಲ್ಲಿರುತ್ತಾಳೆ ಮತ್ತು ‘ಸಾಧಕರು ನಮ್ಮ ಮನೆಯಲ್ಲಿರಬೇಕು’, ಎಂದು ಅವಳ ಒತ್ತಾಯವಿರುತ್ತದೆ.
೪. ವ್ಯಷ್ಟಿ ಸಾಧನೆಯ ಪ್ರಯತ್ನ
ಶ್ರೀಲಕ್ಷ್ಮಿಯು ಚಿಕ್ಕಂದಿನಿಂದಲೇ ಪ್ರತಿದಿನ ೧೦ ರಿಂದ ೩೦ ನಿಮಿಷಗಳ ವರೆಗೆ ನಾಮಸ್ಮರಣೆ ಮಾಡುತ್ತಾಳೆ. ಈಗ ಅವಳು ಪ್ರತಿದಿನ ೪೫ ನಿಮಿಷಗಳ ವರೆಗೆ ನಾಮಸ್ಮರಣೆಯನ್ನು ಮಾಡುತ್ತಾಳೆ, ಹಾಗೆಯೇ ನಾಮಜಪಾದಿ ಉಪಾಯಗಳನ್ನೂ ನಿಯಮಿತವಾಗಿ ಮಾಡುತ್ತಾಳೆ.
೫. ಸೇವೆಯ ಆಸಕ್ತಿ
ಶ್ರೀಲಕ್ಷ್ಮಿಯು ಶಿವಮೊಗ್ಗ ಕೇಂದ್ರದಲ್ಲಿ ಸಾಧಕರೊಂದಿಗೆ ಗ್ರಂಥಪ್ರದರ್ಶನದ ಸೇವೆಗಾಗಿ ಹೋಗುತ್ತಾಳೆ. ಅಲ್ಲಿ ಅವಳು ಉತ್ತಮ ರೀತಿಯಲ್ಲಿ ಸೇವೆಯನ್ನು ಮಾಡುತ್ತಾಳೆ.
೬. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗೆಗಿನ ಭಾವ
ಶ್ರೀಲಕ್ಷ್ಮಿಯಲ್ಲಿ ಪ.ಪೂ. ಗುರುದೇವರ ಬಗ್ಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ) ತುಂಬಾ ಭಾವವಿದೆ. ಅವಳು ಪ್ರತಿದಿನ ರಾತ್ರಿ ಮಲಗುವಾಗ ತನ್ನ ತಲೆದಿಂಬಿನ ಹತ್ತಿರ ಪ.ಪೂ. ಗುರುದೇವರ ಮತ್ತು ಪ.ಪೂ. ಬಾಬಾ (ಪ.ಪೂ. ಭಕ್ತರಾಜ ಮಹಾರಾಜ) ಇವರ ಛಾಯಾಚಿತ್ರಗಳು ಮತ್ತು ‘ಸನಾತನ ಪ್ರಭಾತ’ ಈ ನಿಯತಕಾಲಿಕೆಯನ್ನು ಇಟ್ಟು ಮಲಗುತ್ತಾಳೆ.
೭. ಶ್ರೀಲಕ್ಷ್ಮಿಯಲ್ಲಿನ ಸ್ವಭಾವದೋಷಗಳು
ಆಲಸ್ಯತನ, ಬೇಜವಾಬ್ದಾರಿತನ ಮತ್ತು ಕೇಳುವ ವೃತ್ತಿ ಇಲ್ಲದಿರುವುದು.’ – ಶ್ರೀ. ವಿಜಯ ರೇವಣಕರ (ಕು. ಶ್ರೀಲಕ್ಷ್ಮಿಯ ತಂದೆ, ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೪೫ ವರ್ಷ), ಶಿವಮೊಗ್ಗ. (೨೫.೫.೨೦೨೪)