
ಹೇ ಗುರುದೇವಾ, ನಿಮ್ಮ ಮಾರ್ಗದರ್ಶನದಿಂದ ಕಳೆದ ೨೬ ವರ್ಷಗಳಿಂದ ನಾವು ಸಮಾಜಕ್ಕೆ ದಿಶೆ ನೀಡುವ ಕಾರ್ಯ ಮಾಡಲು ಸಾಧ್ಯವಾಯಿತು. ಹಿಂದೂಗಳ ಮೇಲಿನ ಅನ್ಯಾಯ ಮತ್ತು ಆಘಾತಗಳನ್ನು ಖಂಡತುಂಡವಾಗಿ ಮಂಡಿಸುವ ಧೈರ್ಯ ನಮ್ಮಲ್ಲಿ ನಿರ್ಮಾಣ ಮಾಡಿದ್ದೀರಿ. ಈ ಕಾರ್ಯದಲ್ಲಿ ಅಳಿಲುಸೇವೆ ಮಾಡುವ ಅವಕಾಶ ನೀಡಿದ್ದೀರಿ. ಅದಕ್ಕಾಗಿ ಕೃತಜ್ಞತೆಗಳು ! – ನಿಯತಕಾಲಿಕೆಯ ಸೇವೆ ಮಾಡುವ ಎಲ್ಲ ಸಾಧಕರು
ಸನಾತನ ಪ್ರಭಾತ ನಿಯತಕಾಲಿಕೆಗಳ ಫಲಶೃತಿ
‘ಸೌ ಸೊನಾರ ಕಿ ಎಕ ಲುಹಾರ್ ಕಿ !’, ಎಂದು ಹಿಂದಿ ಭಾಷೆಯಲ್ಲಿ ನಾಣ್ನುಡಿ ಇದೆ. ಅದರ ಅರ್ಥ, ‘ಅಕ್ಕಸಾಲಿಗನ ೧೦೦ ಆಘಾತಗಳಿಂದ ಯಾವ ಕೆಲಸವಾಗುವುದಿಲ್ಲವೋ ಅದು ಕಮ್ಮಾರನ ಒಂದು ಆಘಾತದಿಂದ ಆಗುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಿಯಕಾಲಿಕೆಗಳ ಸಂದರ್ಭದಲ್ಲಿ ಇದೆ. ‘ಸನಾತನ ಪ್ರಭಾತ’ದ ಕೆಲವು ಸಾವಿರ ವಾಚಕರು ಯಾರು ರಾಷ್ಟ್ರ-ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಅದನ್ನು ಲಕ್ಷಗಟ್ಟಲೆ ವಾಚಕರಿರುವ ದಿನಪತ್ರಿಕೆಯ ವಾಚಕರು ಮಾಡಲಾರರು !
– (ಪರಾತ್ಪರ ಗುರು) ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹ