ಕೊರೋನಾದ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದ ಗುಜರಾತ ಉಚ್ಚ ನ್ಯಾಯಾಲಯ!

ಕೊರೋನಾಗೆ ಸಂಬಂಧಿಸಿದಂತೆ ಸರಕಾರವು ಮಾಡಿದ ಪರಿಹಾರೋಪಾಯಗಳ ದಾವೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ, ಎಂದು ಕಠೋರ ಮಾತುಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಕರೋನಾ ಪರಿಸ್ಥಿತಿಯ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದೆ.

ಕೊರೊನಾ ಮಹಾಮಾರಿಯ ಸ್ಥಿತಿಯು ಗಂಭೀರವಾಗುತ್ತಿರುವಾಗ ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳಂತಹ ಸ್ಥಳಗಳಲ್ಲಿ ಅನುಭವಿಸಿದ ಕಹಿ ಅನುಭವಗಳನ್ನು ತಿಳಿಸಿರಿ!

ಸದ್ಯ ಕೊರೋನಾ ಮಹಾಮಾರಿಯ ರೋಗಿಗಳ ಸಂಖ್ಯೆಯಲ್ಲಿ ವೇಗವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಸರಕಾರಿ, ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಭರ್ತಿಯಾಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಯಾವ ರೋಗಿಗಳು ಪರೀಕ್ಷೆ ಅಥವಾ ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಹೋಗುತ್ತಿರುವರೋ ಅವರಿಗೆ ಅನೇಕ ಕಹಿ ಅನುಭವಗಳೂ ಬರುತ್ತಿವೆ

ನಮ್ಮ ಅಕ್ಕಪಕ್ಕದಲ್ಲಿ ಅಥವಾ ಕಟ್ಟಡದಲ್ಲಿ ಕೊರೋನಾ ಪಾಸಿಟಿವ್ ರೋಗಿ ಕಂಡು ಬಂದಲ್ಲಿ ಏನೆಲ್ಲ ಕಾಳಜಿ ವಹಿಸಬೇಕು ?

ಲಿಫ್ಟ್‌ಅನ್ನು ಉಪಯೋಗಿಸಬೇಡಿ. ಲಿಫ್ಟ್ ಉಪಯೋಗಿಸಲೇ ಬೇಕಾಗಿದ್ದಲ್ಲಿ ಅದರ ಒತ್ತುಗುಂಡಿಯನ್ನು ಒತ್ತಲು ನೇರ ಬೆರಳನ್ನು ಬಳಸದಿರಿ. ಅದಕ್ಕಾಗಿ ರದ್ದಿಯ ಕಾಗದವನ್ನು ಉಪಯೋಗಿಸಿ ಹಾಗೂ ಆ ಕಾಗದವನ್ನು ನಂತರ ಕಸದ ಬುಟ್ಟಿಗೆ ಹಾಕಿರಿ.

ಕೊರೋನಾ ರೋಗಾಣು ವಿರುದ್ಧ ನಮ್ಮಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಧ್ಯಾತ್ಮಿಕ ಬಲ ಸಿಗಬೇಕೆಂದು ದೇವರು ಸೂಚಿಸಿದ ನಾಮಜಪ !

ಸದ್ಯ ಜಗತ್ತಿನಾದ್ಯಂತ ಕೊರೋನಾ ರೋಗಾಣುವಿನ ಹಾವಳಿ ಹರಡುತ್ತಿರುವುದರಿಂದ ರಾಷ್ಟ್ರದ ಮೇಲೆ ಬಂದಿರುವ ಸಂಕಟದ ಬಗ್ಗೆ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಬಲವು ಹೆಚ್ಚಾಗಲು ಯಾವ ನಾಮಜಪ ಮಾಡಬೇಕು, ಎಂದು ನಾನು ಜಿಜ್ಞಾಸೆಯಿಂದ ದೇವರಿಗೆ ‘ಕೊರೋನಾ ರೋಗಾಣುವಿನ ಪ್ರಭಾವವು ಸ್ವತಃ ನಮ್ಮ ಮೇಲೆ ಆಗದಿರಲಿ ಅಥವಾ ಆಗಿದ್ದಲ್ಲಿ ಅದನ್ನು ನಾಶ ಮಾಡಲು ಯಾವ ದೇವತಾತತ್ತ್ವದ ಆವಶ್ಯಕತೆ ಇದೆ ?’, ಎಂದು ಕೇಳಿದೆ.

ಕೊರೋನಾ ಮಹಾಮಾರಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮೊಂದಿಗೆ ಕುಟುಂಬದವರ ರಕ್ಷಣೆಯಾಗಲು ‘ಕೊರೋನಾ’ ಬಗೆಗಿನ ಸೂಚನೆಗಳನ್ನು ಸಾಧನೆಯೆಂದು ಪಾಲಿಸಿ !

‘ಮಾರ್ಚ್ ೨೦೨೦ ರಿಂದ ೧೧ ಎಪ್ರಿಲ್ ೨೦೨೧ ರ ವರೆಗೆ ಭಾರತದಲ್ಲಿ ೧ ಕೋಟಿ ೩೩ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾದ ಸೋಂಕು ತಗಲಿದೆ. ಇದರಲ್ಲಿ ೧ ಲಕ್ಷ ೬೯ ಸಾವಿರ ಕ್ಕಿಂತಲೂ ಹೆಚ್ಚು ರೋಗಿಗಳು ಮರಣ ಹೊಂದಿದ್ದಾರೆ. ಸದ್ಯ ಕೊರೋನಾದ ಸೋಂಕು ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ.

ಕೊರೋನಾ’ದ ಹೆಚ್ಚಾಗುತ್ತಿರುವ ಸೋಂಕನ್ನು ಗಮನದಲ್ಲಿಟ್ಟು ಗ್ರೀಷ್ಮ ಋತುವಿನ ಹಿನ್ನೆಲೆಯಲ್ಲಿ ಆಯುರ್ವೇದದ ದೃಷ್ಟಿಯಿಂದ ಮಾಡಬೇಕಾದ ಪ್ರತಿಬಂಧಾತ್ಮಕ ಉಪಾಯ ಮತ್ತು ಪೂರ್ವಸಿದ್ಧತೆ

ಕೊರೋನಾದ ಬಾಧೆಯಿಂದ ಬಳಲುತ್ತಿರುವವರು ಮತ್ತು ನ್ಯೂಮೋನಿಯಾ ಅಥವಾ ದಣಿವು ಮುಂತಾದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿರುವರು ಸುವರ್ಣ ಮಾಲಿನಿ ವಸಂತದ ೨೦ ಗುಳಿಗೆಗಳನ್ನು ಖರೀದಿಸಬೇಕು. ಮೊದಲ ೫ ದಿನ ಅಥವಾ ಜ್ವರ ಮತ್ತು ದಣಿವು ಹೋಗುವವರೆಗೆ ಪ್ರತಿದಿನ ೧ – ೧ ಗುಳಿಗೆಯನ್ನು ಬೆಳಗ್ಗೆ-ಸಾಯಂಕಾಲ ತೆಗೆದುಕೊಳ್ಳಬೇಕು.

‘ಆನ್‌ಲೈನ್ ಸತ್ಸಂಗಗಳ ವಾರ್ಷಿಕೋತ್ಸವದ ನಿಮಿತ್ತ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಕೃತಜ್ಞತಾ ಮಹೋತ್ಸವ !

ಕಳೆದ ವರ್ಷ ಸಂಚಾರ ನಿಷೇಧ (ಲಾಕ್‌ಡೌನ್) ನಂತರ, ಸಮಾಜಕ್ಕೆ ಪ್ರತ್ಯಕ್ಷ ಹೋಗಿ ಧರ್ಮಪ್ರಸಾರವನ್ನು ಮಾಡುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿಂತಿತು. ಕೆಲವು ದಿನಗಳ ನಂತರ ಆನ್‌ಲೈನ್ ಮಾಧ್ಯಮಗಳ ಮೂಲಕ ಧರ್ಮಕಾರ್ಯವನ್ನು ಪುನರಾರಂಭಿಸಲಾಯಿತು.

ಯುಗಾದಿ ಹಬ್ಬ

ಜ್ಯೋತಿಷ್ಯಶಾಸ್ತ್ರಾನುಸಾರ ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ-ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವ ವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ.

ಮೈಸೂರಿನಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದುದರಿಂದ ಗೀತೆಯ ೩ ಸಾವಿರ ಪ್ರತಿಗಳು ಸುಟ್ಟುಕರಕಲು

ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಹಚ್ಚಿದ್ದ ಬೆಂಕಿಯಲ್ಲಿ ಭಗವದ್ಗೀತೆಯ ೩ ಸಾವಿರ ಪ್ರತಿಗಳು ಮತ್ತು ಕುರಾನ್ ಮತ್ತು ಬೈಬಲ್‍ನ ೧ ಸಾವಿರ ಪ್ರತಿಗಳು ನಾಶವಾದವು. ಈ ಗ್ರಂಥಾಲಯವು ಸೈಯದ್ ಇಸಾಕ್ ಎಂಬ ವ್ಯಕ್ತಿಗೆ ಸೇರಿದೆ. ಇಲ್ಲಿ ಒಟ್ಟು ೧೧ ಸಾವಿರ ಪುಸ್ತಕಗಳು ಇದ್ದವು.

ಚಬಡಾ (ರಾಜಸ್ಥಾನ)ದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮತಾಂಧರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ಚಬಡಾ ಪ್ರದೇಶದ ಧರನಾವದಾ ಚೌಕ್‍ನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮತಾಂಧರು ಹಿಂಸಾಚಾರವನ್ನು ನಡೆಸಿದ್ದಾರೆ. ಇದರಲ್ಲಿ ಅನೇಕ ಅಂಗಡಿಗಳನ್ನು ಸುಡುವುದರೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಪರಿಣಾಮವಾಗಿ ಪೊಲೀಸರು ಲಾಠಿಚಾರ್ಜ ಮಾಡಿದರು, ಅದೇರೀತಿ ಸೆಕ್ಷನ್ ೧೪೪ ಜಾರಿಗೊಳಿಸಿದರು.