ಕೊರೊನಾ ಮಹಾಮಾರಿಯ ಸ್ಥಿತಿಯು ಗಂಭೀರವಾಗುತ್ತಿರುವಾಗ ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳಂತಹ ಸ್ಥಳಗಳಲ್ಲಿ ಅನುಭವಿಸಿದ ಕಹಿ ಅನುಭವಗಳನ್ನು ತಿಳಿಸಿರಿ!

ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು ಮತ್ತು ಹಿತಚಿಂತಕರಲ್ಲಿ ಸವಿನಯ ವಿನಂತಿ !

ಸದ್ಯ ಕೊರೋನಾ ಮಹಾಮಾರಿಯ ರೋಗಿಗಳ ಸಂಖ್ಯೆಯಲ್ಲಿ ವೇಗವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಸರಕಾರಿ, ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಭರ್ತಿಯಾಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಯಾವ ರೋಗಿಗಳು ಪರೀಕ್ಷೆ ಅಥವಾ ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಹೋಗುತ್ತಿರುವರೋ ಅವರಿಗೆ ಅನೇಕ ಕಹಿ ಅನುಭವಗಳೂ ಬರುತ್ತಿವೆ, ಉದಾ. ಪರೀಕ್ಷೆಗಾಗಿ ಮಾದರಿಯನ್ನು ತೆಗೆದುಕೊಳ್ಳುವಾಗ ಅದನ್ನು ಯೋಗ್ಯ ಪ್ರಮಾಣದಲ್ಲಿ ತೆಗೆದುಕೊಳ್ಳದಿರು ವುದರಿಂದ ರೋಗಿಗಳಿಗೆ ಪುನಃ ಮಾದರಿಯನ್ನು ನೀಡಲು ಓಡಾಡಬೇಕಾಗುವುದು, ಪರೀಕ್ಷಾ ವರದಿಗಳನ್ನು ಸೂಕ್ತ ಸಮಯಕ್ಕೆ ಕೊಡದಿರುವುದು, ಪರೀಕ್ಷಾ ವರದಿಯಲ್ಲಿ ಪೂರ್ತಿ ವಿವರಗಳನ್ನು ಕೊಡದಿರುವುದು, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಲಭ್ಯವಿಲ್ಲವೆಂದು ಹೇಳಿ ರೋಗಿಯನ್ನು ಚಿಕಿತ್ಸೆಗಾಗಿ ಭರ್ತಿ ಮಾಡಿಕೊಳ್ಳಲು ನಿರಾಕರಿಸುವುದು; ಆದರೆ ಗಣ್ಯವ್ಯಕ್ತಿಯು ದೂರವಾಣಿ ಕರೆ ಮಾಡಿದಾಗ ರೋಗಿಗೆ ಪ್ರವೇಶ ನೀಡಿ ವೆಂಟಿಲೇಟರ್ ಮೇಲೆ ಇಡುವುದು, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುವ ಇಂಜೆಕ್ಶನ್‌ಗಳು ಲಭ್ಯವಿಲ್ಲದಿರುವುದು, ಹಾಗಾಗಿ ಹೊರಗಡೆಯಿಂದ ಸಾವಿರಾರು ರೂಪಾಯಿಗಳ ಇಂಜಕ್ಶನ್ ಖರೀದಿಸಿ ತರಲು ಹೇಳುವುದು, ವರದಿ ದೊರಕಿಲ್ಲವೆಂಬ ಕಾರಣ ಹೇಳಿ ಮೃತದೇಹವನ್ನು ಸಂಬಂಧಿಕರ ವಶಕ್ಕೆ ಕೊಡದಿರುವುದು ಇತ್ಯಾದಿ. ತಮಗೂ ಇಂತಹ ವಿಧದ ಕಹಿ ಅನುಭವಗಳು ಬಂದಿದ್ದರೆ ಆರೋಗ್ಯ ಸಹಾಯ ಸಮಿತಿಗೆ ಮುಂದಿನ ವಿಳಾಸಕ್ಕೆ ತಕ್ಷಣ ತಿಳಿಸಿರಿ.

ಆರೋಗ್ಯ ಸಹಾಯ ಸಮಿತಿ

ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಆರೋಗ್ಯ ಸಹಾಯ ಸಮಿತಿ, ‘ಮಧುಸ್ಮೃತಿ’, ಸತ್ಯನಾರಾಯಣ ದೇವಸ್ಥಾನದ ಹತ್ತಿರ, ಫೋಂಡಾ, ಗೋವಾ – ೪೦೩೪೦೧.
ಸಂಪರ್ಕ ಸಂಖ್ಯೆ : ೭೦೫೮೮೮೫೬೧೦
ವಿ-ಅಂಚೆ ವಿಳಾಸ : [email protected]