ಕೊರೋನಾ’ದ ಹೆಚ್ಚಾಗುತ್ತಿರುವ ಸೋಂಕನ್ನು ಗಮನದಲ್ಲಿಟ್ಟು ಗ್ರೀಷ್ಮ ಋತುವಿನ ಹಿನ್ನೆಲೆಯಲ್ಲಿ ಆಯುರ್ವೇದದ ದೃಷ್ಟಿಯಿಂದ ಮಾಡಬೇಕಾದ ಪ್ರತಿಬಂಧಾತ್ಮಕ ಉಪಾಯ ಮತ್ತು ಪೂರ್ವಸಿದ್ಧತೆ

ನಾಗರಿಕರು ತಮ್ಮ ವಾತ-ಪಿತ್ತ-ಕಫ ಪ್ರಕೃತಿ, ತಮ್ಮ ಪ್ರದೇಶದ ಭೌಗೋಲಿಕ ಹವಾಮಾನ ಮತ್ತು ಕಾಯಿಲೆಯ ತೀವ್ರತೆಯನ್ನು ಗಮನದಲ್ಲಿಟ್ಟು ವೈದ್ಯರ ಮಾರ್ಗದರ್ಶನಕ್ಕನುಸಾರ ಈ ಔಷಧಿಗಳನ್ನು ತೆಗೆದುಕೊಳ್ಳಬೇಕು.

ವೈದ್ಯ ಮೇಘರಾಜ ಪರಾಡಕರ್

೧. ಕೊರೋನಾಗೆ ಸಂಬಂಧಿಸಿ ದಂತೆ ಹೇಳಲಾದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

೨. ಪ್ರತಿದಿನ ರಾತ್ರಿ ಮಲಗುವಾಗ ಎಲ್ಲರೂ ೧ ಚಮಚ ಮೆಂತ್ಯೆ ಕಾಳುಗಳನ್ನು ನೀರಿನೊಂದಿಗೆ ಗುಳಿಗೆಯನ್ನು ನುಂಗುವಂತೆ ನುಂಗಬೇಕು.

೩. ಹುಳಿ, ಉಪ್ಪು, ಖಾರ ಮತ್ತು ಎಣ್ಣೆಅಂಶವುಳ್ಳ ಪದಾರ್ಥಗಳ ಸೇವನೆಯನ್ನು ತಡೆಯಬೇಕು.

೪. ಸದ್ಯ ಕಡು ಬಿಸಿಲು ಇರುವುದರಿಂದ ಕುದಿಸಿ ಆರಿಸಿದ ನೀರನ್ನು ಬಹಳಷ್ಟು ಕುಡಿಯಬೇಕು; ಆದರೆ ಶೀತಕದಲ್ಲಿರುವ (ಫ್ರಿಜ್‌ನಲ್ಲಿನ) ನೀರನ್ನು ಕುಡಿಯಬಾರದು

೫. ಜ್ವರ ಬಂದಿದ್ದರೆ ಹಗುರವಾದ ಆಹಾರವೆಂದು ಅರಳುಗಳ ಹಿಟ್ಟು ಮತ್ತು ಸಕ್ಕರೆ (ನೀರಿನಲ್ಲಿ), ದ್ವಿದಳ ಧಾನ್ಯಗಳ ಸೂಪ್ ಮತ್ತು ತೊವ್ವೆಯನ್ನು ತೆಗೆದುಕೊಳ್ಳಬೇಕು.

೬. ನೀರಡಿಕೆಯನ್ನು ಹೋಗಲಾಡಿಸಲು ಕೋಕಮ್ ಶರಬತ್ತು, ಪಾನಕಗಳು, ಕೊತ್ತಂಬರಿ ಬೀಜದ ನೀರು, ಸುಗಂಧಯುಕ್ತ ಹೂವುಗಳನ್ನು ಹಾಕಿದ ನೀರನ್ನು ಕುಡಿಯಬೇಕು.

೭. ಆಡುಸೋಗೆ, ಪಾರಿಜಾತ, ಗುಲಾಬಿ, ಮಲ್ಲಿಗೆ, ಕಕ್ಕೆ (ಸ್ವರ್ಣ ಪುಷ್ಪ) ಹೂವು ಇವುಗಳ ಹೂವುಗಳ ಗುಲಕಂದವನ್ನು ತಯಾರಿಸಿ ದಿನದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ೧-೧ ಚಮಚದಷ್ಟು ಸೇವಿಸಬೇಕು. (೪ ಬಟ್ಟಲು ಹೂವುಗಳು ಮತ್ತು ೧ ಬಟ್ಟಲು ಸಕ್ಕರೆ ಇವುಗಳ ಮಿಶ್ರಣವನ್ನು ಮಿಕ್ಸರ್‌ನಲ್ಲಿ ಹಾಕಬೇಕು. ಅನಂತರ ಅದನ್ನು ಭರಣಿಯಲ್ಲಿ ತುಂಬಿ ೧ ವಾರ ಬಿಸಿಲಿನಲ್ಲಿಡಬೇಕು. ಇದರಿಂದ ಗುಲಕಂದ ತಯಾರಾಗುತ್ತದೆ.) ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವ ಗುಲಾಬಿ ಹೂವಿನ ಗುಲಕಂದವನ್ನು ಖರೀದಿಸಿದರೂ ಅಡಚಣೆ ಇಲ್ಲ.

೮. ಹೆಚ್ಚು ವ್ಯಾಯಾಮ ಮಾಡುವುದು, ಹಾಲು ಹಾಕಿದ ಚಹಾ ಕುಡಿಯುವುದನ್ನು ತಡೆಗಟ್ಟಬೇಕು. (ಹಾಲಿಲ್ಲದ ಚಹಾ ಕುಡಿದರೆ ನಡೆಯುತ್ತದೆ.)

೯. ಚೂಡಾ (ಕರಿದ ಅವಲಕ್ಕಿ), ಕರಿದ ಪದಾರ್ಥಗಳು, ಖಾರ, ಉಪ್ಪು, ಹುಳಿ ಪದಾರ್ಥಗಳನ್ನು ಸೇವಿಸಬಾರದು.

೧೦. ಕೊರೋನಾದ ಬಾಧೆಯಿಂದ ಬಳಲುತ್ತಿರುವವರು ಮತ್ತು ನ್ಯೂಮೋನಿಯಾ ಅಥವಾ ದಣಿವು ಮುಂತಾದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿರುವರು ಸುವರ್ಣ ಮಾಲಿನಿ ವಸಂತದ ೨೦ ಗುಳಿಗೆಗಳನ್ನು ಖರೀದಿಸಬೇಕು. ಮೊದಲ ೫ ದಿನ ಅಥವಾ ಜ್ವರ ಮತ್ತು ದಣಿವು ಹೋಗುವವರೆಗೆ ಪ್ರತಿದಿನ ೧ – ೧ ಗುಳಿಗೆಯನ್ನು ಬೆಳಗ್ಗೆ-ಸಾಯಂಕಾಲ ತೆಗೆದುಕೊಳ್ಳಬೇಕು. ಅನಂತರ ಮುಂದಿನ ೧೦ ದಿನ ಪ್ರತಿದಿನ ೧ ಗುಳಿಗೆಯನ್ನು ಬೆಳಗ್ಗೆ ತೆಗೆದುಕೊಳ್ಳಬೇಕು. ಈ ಗುಳಿಗೆಯಿಂದ ಕೊರೋನಾದಲ್ಲಿ ಲಾಭವಾಗುತ್ತದೆ. ಇದರಿಂದ ದಣಿವು ಅಥವಾ ನ್ಯೂಮೋನಿಯಾ ಆಗಿದ್ದರೆ ಅವುಗಳ ಲಕ್ಷಣಗಳು ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ; ಆದರೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ ಇದ್ದರೆ ಮೇಲಿನ ಗುಳಿಗೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

೧೧. ಯಾರಿಗೆ ಜ್ವರವಿದೆಯೋ ಅಥವಾ ದಣಿವಿದೆ; ಆದರೆ ‘ಕೊರೋನಾದ ಸೋಂಕು ತಾಗಿಲ್ಲ, ಎಂಬ ಪರೀಕ್ಷಾ ವರದಿ ಇದೆಯೋ, ಅಂತಹವರು ಸುವರ್ಣ ಮಾಲಿನಿ ವಸಂತ ೧ ಗುಳಿಗೆಯನ್ನು ೫ ರಿಂದ ೧೦ ದಿನ ಬೆಳಗ್ಗೆ ಒಂದರಂತೆ ತೆಗೆದುಕೊಳ್ಳಬೇಕು. ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.

೧೨. ಸುವರ್ಣ ಮಾಲಿನಿ ವಸಂತ ಈ ಗುಳಿಗೆಗಳು ಬಹಳ ದುಬಾರಿಯಾಗಿರುತ್ತವೆ. ಆದುದರಿಂದ ಅದು ಅವಶ್ಯವಿದ್ದರೆ ಮಾತ್ರ (ಕೊರೋನಾಗೆ ಸಂಬಂಧಿಸಿದ ಲಕ್ಷಣಗಳಿದ್ದರೆ ಮಾತ್ರ) ತೆಗೆದುಕೊಳ್ಳಬೇಕು. ಆರೋಗ್ಯವು ಚೆನ್ನಾಗಿದ್ದರೆ, ಈ ಗುಳಿಗೆಗಳನ್ನು ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ.

೧೩. ಯಾವ ಕಂಪನಿಯ ಗುಳಿಗೆಗಳು ಅತಿ ಕಡಿಮೆ ಬೆಲೆಯುಳ್ಳದ್ದಾಗಿದೆಯೋ ಅದನ್ನು ತೆಗೆದುಕೊಳ್ಳಬೇಕು. ಎಲ್ಲವುಗಳ ಗುಣ ಮಟ್ಟವು ಒಂದೇ ರೀತಿ ಇರುತ್ತದೆ. ಕಂಪನಿಯ ಹೆಸರಿಗನುಸಾರ ಬೆಲೆಯು ಹೆಚ್ಚು ಕಡಿಮೆ ಇರುತ್ತದೆ.

೧೪. ಸುವರ್ಣ ಮಾಲಿನಿ ವಸಂತ ಇದಕ್ಕೆ ಸುವರ್ಣ ವಸಂತ (ಬಸಂತ) ಮಾಲತಿ ಅಥವಾ ಸ್ವರ್ಣ ವಸಂತ ಮಾಲತಿ ಎಂದೂ ಕರೆಯುತ್ತಾರೆ.

೧೫. ಸಾಧ್ಯವಿದ್ದರೆ ‘ಪಲ್ಸ್ ಆಕ್ಸಿಮೀಟರ್ (pulse oxymeter) ಖರೀದಿಸಬೇಕು ಮತ್ತು ಕೊರೋನಾಗೆ ಸಂಬಂಧಿಸಿದ ಲಕ್ಷಣಗಳಿದ್ದರೆ ನಿಯಮಿತವಾಗಿ ಪ್ರಾಣವಾಯುವಿನ ಮಟ್ಟವನ್ನು (oxygen level) ತಪಾಸಣೆ ಮಾಡಬೇಕು. ಪ್ರಾಣವಾಯುವಿನ ಮಟ್ಟವು (oxygen level) ೯೪ ಕ್ಕಿಂತ ಕಡಿಮೆ ಇದ್ದರೆ ಡಾಕ್ಟರರ ಸಲಹೆಯನ್ನು ಪಡೆಯಬೇಕು.

೧೬. ಎಲ್ಲರೂ ಪ್ರತಿದಿನ ದಿನದಲ್ಲಿ ೫ – ೫ ನಿಮಿಷಗಳಂತೆ ಮೂರು ಬಾರಿ ದೀರ್ಘ ಶ್ವಾಸವನ್ನು ತೆಗೆದುಕೊಳ್ಳಬೇಕು. ಶ್ವಾಸವನ್ನು ತೆಗೆದುಕೊಳ್ಳುವಾಗ ಹೆಚ್ಚೆಚ್ಚು ಹವೆಯನ್ನು ಫುಫ್ಫುಸಗಳಲ್ಲಿ ಸೆಳೆದು ಕೊಳ್ಳಬೇಕು. ಈ ಹವೆಯನ್ನು ಸಾಧ್ಯವಿದ್ದಷ್ಟು ಸಮಯ ಒಳಗೆ ಹಿಡಿದಿಡಬೇಕು. (ಅಂದರೆ ಕುಂಭಕ ಮಾಡಬೇಕು.) ಮತ್ತು ನಂತರ ಅದನ್ನು ನಿಧಾನವಾಗಿ ಬಿಡಬೇಕು. ಹೀಗೆ ಮಾಡಿದರೆ ಫುಫ್ಫುಸಗಳ ಕ್ಷಮತೆಯು ಹೆಚ್ಚಾಗುತ್ತದೆ. ಕೊರೋನಾದಲ್ಲಿ ಫುಫ್ಫುಸಗಳು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಹೀಗೆ ಮಾಡುವುದರಿಂದ ಫುಫ್ಫುಸಗಳು ಗಟ್ಟಿಯಾಗುವ ಪ್ರಮಾಣವು ಕಡಿಮೆಯಾಗುತ್ತದೆ.

೧೭. ಹಸಿವೆ ಇದ್ದಷ್ಟೇ ತಿನ್ನಬೇಕು. ಅತಿ ಹೆಚ್ಚು ತಿನ್ನಬಾರದು.

– ವೈದ್ಯ ಮೇಘರಾಜ ಪರಾಡಕರ (೬.೪.೨೦೨೧)