ಕೊರೋನಾ ಮಹಾಮಾರಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮೊಂದಿಗೆ ಕುಟುಂಬದವರ ರಕ್ಷಣೆಯಾಗಲು ‘ಕೊರೋನಾ’ ಬಗೆಗಿನ ಸೂಚನೆಗಳನ್ನು ಸಾಧನೆಯೆಂದು ಪಾಲಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಮಾರ್ಚ್ ೨೦೨೦ ರಿಂದ ೧೧ ಎಪ್ರಿಲ್ ೨೦೨೧ ರ ವರೆಗೆ ಭಾರತದಲ್ಲಿ ೧ ಕೋಟಿ ೩೩ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾದ ಸೋಂಕು ತಗಲಿದೆ. ಇದರಲ್ಲಿ ೧ ಲಕ್ಷ ೬೯ ಸಾವಿರ ಕ್ಕಿಂತಲೂ ಹೆಚ್ಚು ರೋಗಿಗಳು ಮರಣ ಹೊಂದಿದ್ದಾರೆ. ಸದ್ಯ ಕೊರೋನಾದ ಸೋಂಕು ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ರೋಗಿಗಳ ಸಂಖ್ಯೆಯು ಸಹ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಯಲ್ಲಿ ಸಾಕಷ್ಟು ‘ಬೆಡ್’(ಮಂಚ) ಸಿಗದಿರುವುದು, ವೆಂಟಿಲೆಟರ್‌ನ ಸೌಲಭ್ಯವಿರುವ ‘ಬೆಡ್’ ಕಡಿಮೆ ಬೀಳುವುದು, ಇಷ್ಟೇಅಲ್ಲದೇ, ‘ರೆಮಡೆಸಿವಿರ’ ಇಂಜೆಕ್ಶನ್ ಹಾಗೂ ಆಕ್ಸಿಜನ್ ಸಿಲೆಂಡರನ ಕೊರತೆ ಉಂಟಾಗುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸಿದೆ. ಅನೇಕ ಆಸ್ಪತ್ರೆಯ ಹೊರಗಡೆ ತಮ್ಮ ಕುಟುಂಬದ ರೋಗಿಗೆ ಸ್ಥಳ ಸಿಗಲೆಂದು ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ನಾಗರಿಕರ ಬಳಿ ಹಣ ಇದ್ದರೂ ಚಿಕಿತ್ಸೆ ಸಿಗುವುದು ಕಷ್ಟಕರವಾಗಿದೆ.
ಕೊರೋನಾದ ಸೋಂಕು ಹರಡದಿರಲಿ, ಅದೇರೀತಿ ಅದರಿಂದ ಜನರ ರಕ್ಷಣೆಯಾಗಲಿ ಎಂದು ಸರಕಾರ ಹಾಗೂ ಆಡಳಿತವರ್ಗದವರಿಂದ ವಿವಿಧ ಮಾಧ್ಯಮಗಳಿಂದ ಆಗಾಗ ಪ್ರಬೋಧನೆ ಮಾಡಲಾಗುತ್ತಿದೆ; ಆದರೆ ನಾಗರಿಕರು ಈ ಸೂಚನೆಗಳ ಪಾಲಿಸುವುದರಲ್ಲಿ ನಿರ್ಲಕ್ಷ ತೋರಿಸುತ್ತಿದ್ದಾರೆ. ಕೊರೋನಾದ ಸೋಂಕಿನ ಭಯಾನಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಆರೋಗ್ಯದ ದೃಷ್ಟಿಯಿಂದ ಮುತುವರ್ಜಿ ವಹಿಸುವುದು ಇನ್ನೂ ಹೆಚ್ಚು ಮಹತ್ವದ್ದಾಗಿದೆ.

‘ಸನಾತನ ಪ್ರಭಾತ’ ನಿಯತಕಾಲಿಕೆಯಿಂದಲೂ ಆರೋಗ್ಯದ ದೃಷ್ಟಿಯಿಂದ ಏನೆಲ್ಲ ಕಾಳಜಿ ವಹಿಸಬೇಕು, ಅದಕ್ಕಾಗಿ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಈ ವೈದ್ಯಕೀಯ ಶಾಖೆಗಳಿಗನುಸಾರ ಅಗತ್ಯವಿರುವ ಸೂಚನೆಗಳನ್ನು ಈ ಹಿಂದೆ ಮುದ್ರಿಸಲಾಗಿದೆ. ಅದಕ್ಕನುಸಾರ ಕೊರೋನಾದ ಮಹಾಮಾರಿಯಿಂದ ರಕ್ಷಣೆಯಾಗಲು ವೈದ್ಯಕೀಯ ಸೂಚನೆಗಳ, ಉದಾ. ಮಾಸ್ಕ್‌ಅನ್ನು ಧರಿಸುವುದು, ಇಬ್ಬರು ವ್ಯಕ್ತಿಗಳ ನಡುವೆ ೬ ಅಡಿ ಅಂತರ ಕಾಪಾಡುವುದು, ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು ಅಥವಾ ಸ್ಯಾನಿಟೈಸರ್‌ನಿಂದ ನಿರ್ಜಂತು ಮಾಡುವುದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವುದು, ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಈ ಸಂಕಟವನ್ನು ಎದುರಿಸಲು ಮನೋಬಲ ಹಾಗೂ ಆತ್ಮಬಲ ಹೆಚ್ಚಿಸಬೇಕೆಂದು ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸ್ವಯಂಸೂಚನೆಗಳನ್ನು ಹೇಗೆ ಕೊಡಬೇಕು ?, ಇದರ ಉದಾಹರಣೆ ಸಹಿತ ಮಾಹಿತಿಯನ್ನು ಈ ಮೊದಲು ‘ಸನಾತನ ಪ್ರಭಾತ’ನ ಮಾಧ್ಯಮದಿಂದ ನೀಡಲಾಗಿತ್ತು. ಇದರಿಂದ ಸಾಧಕರ ಸಹಿತ ಹಿತಚಿಂತಕರು, ವಾಚಕರಿಗೆ ಇದರ ಲಾಭವಾಗಿರುವುದು ಗಮನಕ್ಕೆ ಬಂದಿದೆ. ಜೊತೆಗೆ ಆತ್ಮಬಲ ಹೆಚ್ಚಿಸಲು ‘ದುರ್ಗಾ-ದತ್ತ-ಶಿವ’ ಈ ನಾಮಜಪವನ್ನು ಮಾಡಬೇಕು ಹಾಗೂ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿದ ೩ ಮಂತ್ರಗಳಲ್ಲಿ ಯಾವುದಾದರೊಂದು ಮಂತ್ರವನ್ನು ೨೧ ಸಲ ಹೇಳಬೇಕು, ತಮ್ಮ ಸುತ್ತಲು ರಕ್ಷಣಾ ಕವಚ ನಿರ್ಮಾಣವಾಗಲು ಆಗಾಗ ಪ್ರಾರ್ಥನೆಯನ್ನು ಮಾಡಬೇಕು.

ಜನ್ಮ-ಮೃತ್ಯು ಇದು ಪ್ರಾರಬ್ಧನುಸಾರ ನಿಶ್ಚಿತವಾಗಿರುತ್ತದೆ, ಅದೇರೀತಿ ಸಂತರು ಹಾಗೂ ಭವಿಷ್ಯಕಾರರು ಹೇಳಿದ ಭವಿಷ್ಯಕ್ಕನುಸಾರ ಆಪತ್ಕಾಲದಲ್ಲಿ ವಿವಿಧ ವಿಪತ್ತುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವಹಾನಿಯಾಗಲಿದೆ. ಹೀಗಿದ್ದರೂ ನಮ್ಮ ಯೋಗ್ಯವಾದ ಕ್ರಿಯಾಮಾಣವನ್ನು ಉಪಯೋಗಿಸುವುದು ಈಶ್ವರನಿಗೆ ಅಪೇಕ್ಷಿತವಿದೆ. ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟು
ಕೊಂಡು ಆಪತ್ಕಾಲದ ಬಗ್ಗೆ ಆಗಾಗ ನೀಡಿದ ಸೂಚನೆಗಳನ್ನು ಪಾಲಿಸುವುದು ಸಾಧನೆಯೇ ಆಗಿದೆ. ಆಪತ್ಕಾಲದ ನಂತರ ಈಶ್ವರೀ ರಾಜ್ಯ ಅಂದರೆ ರಾಮರಾಜ್ಯ ಬರಲಿದೆ, ಎಂದೂ ಸಂತರು ಭರವಸೆ ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆಪತ್ಕಾಲದಿಂದ ಪಾರಾಗಿ ರಾಮರಾಜ್ಯದ ಪ್ರಜೆಯಾಗಲು ಅರ್ಹರಾಗಲು ಸಾಧನೆ ಎಂದು ಈ ಮೇಲಿನ ಸೂಚನೆಗಳನ್ನು ಪಾಲಿಸುವಂತಾಗಬೇಕೆಂದು ಈಶ್ವರನ ಚರಣಗಳಲ್ಲಿ ಶರಣಾಗಿ ಪ್ರಯತ್ನವನ್ನು ಮಾಡೋಣ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೪.೨೦೨೧)