ಕೊರೋನಾ ರೋಗಾಣು ವಿರುದ್ಧ ನಮ್ಮಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಧ್ಯಾತ್ಮಿಕ ಬಲ ಸಿಗಬೇಕೆಂದು ದೇವರು ಸೂಚಿಸಿದ ನಾಮಜಪ !

ಸದ್ಗುರು (ಡಾ.) ಮುಕುಲ ಗಾಡಗೀಳ

ಸದ್ಯ ಜಗತ್ತಿನಾದ್ಯಂತ ಕೊರೋನಾ ರೋಗಾಣುವಿನ ಹಾವಳಿ ಇದೆ. ‘ಕೌಶಿಕಪದ್ಧತಿ’ ಗ್ರಂಥದಲ್ಲಿ ‘ಅತಿವೃಷ್ಟಿಃ ಅನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ | ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಈತಯಃ ಸ್ಮೃತಾಃ ||’

(ಅರ್ಥ : ‘ಧರ್ಮಾಚರಣೆ ಮಾಡದೇ ಇದ್ದುದರಿಂದ ಅತೀವೃಷ್ಟಿ, ಅನಾವೃಷ್ಟಿ (ಬರಗಾಲ), ಮಿಡತೆ, ಇಲಿಯ ತೊಂದರೆ, ಗಿಳಿಯ ಉಪದ್ರವ, ತಮ್ಮ ತಮ್ಮಲ್ಲೇ ಹೋರಾಟ ಹಾಗೂ ಶತ್ರುಗಳ ದಾಳಿಯಂತಹ ಸಂಕಟಗಳು (ರಾಷ್ಟ್ರದ ಮೇಲೆ) ಬರುತ್ತಿರುತ್ತವೆ’)

ಸದ್ಯ ಜಗತ್ತಿನಾದ್ಯಂತ ಕೊರೋನಾ ರೋಗಾಣುವಿನ ಹಾವಳಿ ಹರಡುತ್ತಿರುವುದರಿಂದ ರಾಷ್ಟ್ರದ ಮೇಲೆ ಬಂದಿರುವ ಸಂಕಟದ ಬಗ್ಗೆ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಬಲವು ಹೆಚ್ಚಾಗಲು ಯಾವ ನಾಮಜಪ ಮಾಡಬೇಕು, ಎಂದು ನಾನು ಜಿಜ್ಞಾಸೆಯಿಂದ ದೇವರಿಗೆ ‘ಕೊರೋನಾ ರೋಗಾಣುವಿನ ಪ್ರಭಾವವು ಸ್ವತಃ ನಮ್ಮ ಮೇಲೆ ಆಗದಿರಲಿ ಅಥವಾ ಆಗಿದ್ದಲ್ಲಿ ಅದನ್ನು ನಾಶ ಮಾಡಲು ಯಾವ ದೇವತಾತತ್ತ್ವದ ಆವಶ್ಯಕತೆ ಇದೆ ?’, ಎಂದು ಕೇಳಿದೆ. ಆಗ ನನ್ನ ಮನಸ್ಸಿನಲ್ಲಿ ಉತ್ತರ ಸಿಕ್ಕಿತು, ‘ದೇವಿ, ದತ್ತ ಹಾಗೂ ಶಿವ ಈ ಮೂರು ತತ್ತ್ವಗಳ ಆವಶ್ಯಕತೆ ಇದೆ.’ ಕೊರೋನಾ ರೋಗಾಣುಗಳ ವಿರುದ್ಧ ತಮ್ಮಲ್ಲಿ ನಿರೋಧಕ ಕ್ಷಮತೆಯು ನಿರ್ಮಾಣವಾಗಲು ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಬಲ ಹೆಚ್ಚಾಗಲೆಂದು ದೇವರು ಸೂಚಿಸಿದ ಈ ಮೂರು ದೇವತಾತತ್ತ್ವಗಳ ಪ್ರಮಾಣಕ್ಕನುಸಾರ ಮುಂದಿನ ನಾಮಜಪ ಸಿದ್ಧವಾಯಿತು – ‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾ ದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾ ದೇವ್ಯೈ ನಮಃ – ಶ್ರೀ ದುರ್ಗಾ ದೇವ್ಯೈ ನಮಃ – ಶ್ರೀ ದುರ್ಗಾ ದೇವ್ಯೈ ನಮಃ – ಓಂ ನಮಃ ಶಿವಾಯ |’ ಈ ನಾಮಜಪ ಸಹಜವಾಗಿ ಗಮನಕ್ಕೆ ಬರಲು ಅದನ್ನು ಈ ರೀತಿಯಾಗಿ ವಿಂಗಡಿಸಬಹುದು – ‘ಶ್ರೀ ದುರ್ಗಾದೇವ್ಯೈ ನಮಃ |’ ೩ ಸಲ, ‘ಶ್ರೀ ಗುರುದೇವ ದತ್ತ |’ ೧ ಸಲ, ‘ಶ್ರೀ ದುರ್ಗಾದೇವ್ಯೈ ನಮಃ |’೩ ಸಲ ಹಾಗೂ ‘ಓಂ ನಮಃ ಶಿವಾಯ’ ೧ ಸಲ ‘ಈ ನಾಮಜಪದಿಂದ ಕಿಬ್ಬೊಟ್ಟೆಯ ಮೇಲೆ ಪರಿಣಾಮವಾಗುತ್ತದೆ’, ಎಂಬುದು ಗಮನಕ್ಕೆ ಬಂದಿತು. ಈ ನಾಮಜಪ ೧೦೮ ಸಲ (೧ ಮಾಲೆ) ಮಾಡಲು ೩೦ ರಿಂದ ೩೫ ನಿಮಿಷ ತಗಲುತ್ತದೆ. ‘ಕೊರೋನಾ ರೋಗಾಣುವಿನ ಪ್ರಭಾವವು ಜಗತ್ತಿನಾದ್ಯಂತ ಇರುವವರೆಗೆ ಪ್ರತಿಬಂಧಕ ಉಪಾಯವೆಂದು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ತಮ್ಮ ಆಧ್ಯಾತ್ಮಿಕ ಬಲ ಹೆಚ್ಚಾಗಲು ಈ ನಾಮಜಪವನ್ನು ಪ್ರತಿದಿನ ಅರ್ಧ ಗಂಟೆ (೧ ಮಾಲೆ) ಮಾಡಬೇಕು ಹಾಗೂ ಕೆಲವರಿಗೆ ಕೊರೋನಾ ರೋಗಾಣು ಸೋಂಕು ತಗಲಿರುವುದರ ಕೆಲವು ಲಕ್ಷಣಗಳು ಕಂಡು ಬಂದರೆ ಆಧ್ಯಾತ್ಮಿಕ ಬಲ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಲು ಅವರು ಈ ನಾಮಜಪವನ್ನು ಪ್ರತಿದಿನ ೩ ಗಂಟೆ (೬ ಮಾಲೆ) ಮಾಡಬೇಕು’, ಎಂದು ದೇವರು ಸೂಚಿಸಿದರು.’ – (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೩.೨೦೨೦)