‘ಆನ್‌ಲೈನ್ ಸತ್ಸಂಗಗಳ ವಾರ್ಷಿಕೋತ್ಸವದ ನಿಮಿತ್ತ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಕೃತಜ್ಞತಾ ಮಹೋತ್ಸವ !

ಬೆಂಗಳೂರು – ಕಳೆದ ವರ್ಷ ಸಂಚಾರ ನಿಷೇಧ (ಲಾಕ್‌ಡೌನ್) ನಂತರ, ಸಮಾಜಕ್ಕೆ ಪ್ರತ್ಯಕ್ಷ ಹೋಗಿ ಧರ್ಮಪ್ರಸಾರವನ್ನು ಮಾಡುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿಂತಿತು. ಕೆಲವು ದಿನಗಳ ನಂತರ ಆನ್‌ಲೈನ್ ಮಾಧ್ಯಮಗಳ ಮೂಲಕ ಧರ್ಮಕಾರ್ಯವನ್ನು ಪುನರಾರಂಭಿಸಲಾಯಿತು. ಈ ಆನ್‌ಲೈನ್ ಧರ್ಮಪ್ರಚಾರದಲ್ಲಿ ಭಾವಸತ್ಸಂಗ, ಧರ್ಮಸಂವಾದ ಮತ್ತು ಬಾಲಸಂಸ್ಕಾರವರ್ಗ ಈ ಉಪಕ್ರಮಗಳು ಒಳಗೊಂಡಿದೆ. ಈ ಉಪಕ್ರಮಗಳಿಗೆ ಜಿಜ್ಞಾಸುಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಸತ್ಸಂಗಗಳನ್ನು ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ಮೂಲಕ ಧರ್ಮಶಾಸ್ತ್ರವು ಲಕ್ಷಾಂತರ ಜಿಜ್ಞಾಸುಗಳ ವರೆಗೆ ತಲುಪಿತು. ಸಾವಿರಾರು ಜಿಜ್ಞಾಸುಗಳು ಅದರಂತೆ ಆಚರಣೆ ಮಾಡಿ ಅನುಭೂತಿ ಪಡೆದರು. ಏಪ್ರಿಲ್ ೩ ರಂದು ಈ ಮಾಲಿಕೆಗಳಿಗೆ ಒಂದು ವರ್ಷ ಪೂರ್ಣವಾಯಿತು. ಈ ನಿಮಿತ್ತ ಏಪ್ರಿಲ್ ೩ ರಂದು ಆನ್‌ಲೈನ್ ‘ಕೃತಜ್ಞತಾ ಮಹೋತ್ಸವವನ್ನು ಆಯೋಜಿಸಲಾಯಿತು.

(ಈ ಕುರಿತಾದ ಸವಿಸ್ತಾರ ವಾರ್ತೆಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.)