ನಮ್ಮ ಅಕ್ಕಪಕ್ಕದಲ್ಲಿ ಅಥವಾ ಕಟ್ಟಡದಲ್ಲಿ ಕೊರೋನಾ ಪಾಸಿಟಿವ್ ರೋಗಿ ಕಂಡು ಬಂದಲ್ಲಿ ಏನೆಲ್ಲ ಕಾಳಜಿ ವಹಿಸಬೇಕು ?

ಡಾ. ಪಾಂಡುರಂಗ ಮರಾಠೆ

೧. ಕೊರೋನಾ ಪಾಸಿಟಿವ್ ಇರುವ ರೋಗಿಯ ಮನೆಯ ಅಕ್ಕಪಕ್ಕದ ಪರಿಸರದಲ್ಲಿ ಸಂಪರ್ಕ ತಪ್ಪಿಸಬೇಕು.

೨. ಸಂಪರ್ಕ ತಪ್ಪಿಸಲು ಸಾಧ್ಯವಾಗದಿದ್ದಲ್ಲಿ ಪರಿಸರದಲ್ಲಿ ಓಡಾಡುವಾಗ ಅಲ್ಲಿಯ ಗೋಡೆ ಅಥವಾ ರೇಲಿಂಗ್‌ಗಳ ಸ್ಪರ್ಶವಾಗದಂತೆ ಜಾಗೃತೆ ವಹಿಸಬೇಕು.

೩. ಲಿಫ್ಟ್‌ಅನ್ನು ಉಪಯೋಗಿಸಬೇಡಿ.

೪. ಲಿಫ್ಟ್ ಉಪಯೋಗಿಸಲೇ ಬೇಕಾಗಿದ್ದಲ್ಲಿ ಅದರ ಒತ್ತುಗುಂಡಿಯನ್ನು ಒತ್ತಲು ನೇರ ಬೆರಳನ್ನು ಬಳಸದಿರಿ. ಅದಕ್ಕಾಗಿ ರದ್ದಿಯ ಕಾಗದವನ್ನು ಉಪಯೋಗಿಸಿ ಹಾಗೂ ಆ ಕಾಗದವನ್ನು ನಂತರ ಕಸದ ಬುಟ್ಟಿಗೆ ಹಾಕಿರಿ.

೫. ಲಿಫ್ಟ್‌ಅನ್ನು ಉಪಯೋಗಿಸುವಾಗ ಅದರ ಒಳಗಿನ ಗೋಡೆಗೆ ತಮ್ಮ ಸ್ಪರ್ಶವಾಗದಂತೆ ನೋಡಬೇಕು. ಅದೇ ರೀತಿ ನಮ್ಮಲ್ಲಿನ ವಸ್ತುಗಳನ್ನು ಕೆಳಗೆ ಇಡುವುದು ತಡೆಗಟ್ಟಬೇಕು.

೬. ಲಿಫ್ಟ್‌ಅನ್ನು ಉಪಯೋಗಿಸುವಾಗ ಪಂಖಾವನ್ನು ಹಚ್ಚದಿರಿ.

೭. ಕೊರೋನಾ ಪಾಸಿಟಿವ್ ರೋಗಿ ಪತ್ತೆಯಾದ ಪರಿಸರ ದಲ್ಲಿ ಓಡಾಡುವಾಗ ಮಾಸ್ಕ್‌ಅನ್ನು ನಿಯಮಿತವಾಗಿ ಉಪಯೋಗಿಸುವುದು ಅತ್ಯಾವಶ್ಯಕವಿದೆ.

೮. ಮನೆಗೆ ಬಂದನಂತರ ಮೊದಲು ಕೈ-ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು ಹಾಗೂ ನಂತರವೇ ಮನೆಯ ಇತರ ಕಡೆಗಳಲ್ಲಿ ಓಡಾಡಿರಿ.

– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೪.೨೦೨೧)