ಭಾರತೀಯರ ನೈತಿಕತೆ ಎಷ್ಟು ಕುಸಿದಿದೆ ಎಂಬುದನ್ನು ತೋರಿಸುವ ಮಾನಗೆಟ್ಟ ಘಟನೆ ! ಇಂತಹವರನ್ನು ಬಂಧಿಸಿ ಜೀವಾವಧಿ ಕಾರಾಗೃಂಹ ವಾಸದ ಶಿಕ್ಷೆಯನ್ನು ವಿಧಿಸಬೇಕು !
ಬೆಂಗಳೂರು : ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿಲ್ಲ, ಬದಲಾಗಿ ಆಂಬ್ಯುಲೆನ್ಸ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ ವಿದ್ಯುತ್ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕಳೆದ ವಾರದಿಂದ ಕೊರೋನಾದಿಂದ ಸಾವಿನ ಸಂಖ್ಯೆ ಏರಿಕೆಯಾಗಿದೆ. ಆದ್ದರಿಂದ, ಕಳೆದ ೨ ದಿನಗಳಿಂದ ಸ್ಮಶಾನದ ಮುಂದೆ ಶವ ಸಾಗಿಸುವ ವಾಹನಗಳು ಸಾಲುಗಟ್ಟಿ ನಿಂತಿವೆ. ಇದನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಆಂಬುಲೆನ್ಸ್‌ಗಳು ಮತ್ತು ಪುರಸಭೆಯ ಕೆಲವು ನೌಕರರು ತಕ್ಷಣ ಅಂತ್ಯಸಂಸ್ಕಾರ ಮಾಡುತ್ತೇವೆಂದು ಜನರಿಂದ ೩೫ ಸಾವಿರದಿಂದ ೪೦ ಸಾವಿರ ರೂಪಾಯಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ, ಹಣ ಕೊಡದೇ ಇದ್ದಲ್ಲಿ ಅಂತ್ಯಕ್ರಿಯೆಗಾಗಿ ಒಂದು ದಿನ ಕಾಯಬೇಕಾಗಿದೆ ಎಂಬುದು ಚಿತ್ರಣವು ಕಂಡು ಬರುತ್ತಿದೆ. ಇದಕ್ಕೆ ನಾಗರಿಕರಿಂದ ವಿರೋಧವೂ ಆಗುತ್ತಿದೆ.
ಸೋಮನಹಳ್ಳಿಯಲ್ಲಿನ ಮೃತಪಟ್ಟರ ಸಂಬಂಧಿಕರು ಇದರ ಬಗ್ಗೆ, ಅಂತ್ಯಕ್ರಿಯೆಯ ಹೆಸರಿನಲ್ಲಿ ದರೋಡೆ ಮಾಡಲಾಗುತ್ತಿದೆ. ಆಂಬ್ಯುಲೆನ್ಸ್‌ಗೆ ೧೩ ಸಾವಿರ ರೂಪಾಯಿ, ಪೂಜೆಯ ಹೆಸರಿನಲ್ಲಿ ೧೦ ಸಾವಿರ ರೂಪಾಯಿ, ವಿದ್ಯುತ್ ಚಿತಾಗಾರಕ್ಕೆ ೬ ಸಾವಿರದ ೫೦೦ ರೂಪಾಯಿ, ಸಂಬಂಧಿಕರಿಗೆ ಪಿ.ಪಿ.ಐ ಕಿಟ್ ನೀಡಲು ೧ ಸಾವಿರ ರೂಪಾಯಿ ಮತ್ತು ಕಾರ್ಮಿಕರಿಗೆ ೫ ಸಾವಿರ ರೂಪಾಯಿ ಹೀಗೆ ಪ್ಯಾಕೇಜ ನಿರ್ಧರಿಸಲಾಗಿದೆ. ಇದರಲ್ಲಿ ೫೦೦ ರೂಪಾಯಿ ಕಡಿಮೆ ನೀಡಿದ್ದರಿಂದ ನನಗೆ ತೊಂದರೆ ನೀಡಲಾಯಿತು. ನಾನು ಸಾಲ ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಿದೆ. ಪೂಜೆ ಮಾಡುವಾಗ ಒಂದು ಹೂವು ಅಥವಾ ಊದಿನಕಡ್ಡಿಯೂ ಇರಲಿಲ್ಲ, ಆದರೂ ೧೦ ಸಾವಿರ ರೂಪಾಯಿ ತೆಗೆದುಕೊಂಡರು. ಇಲ್ಲಿ ಸತ್ತವರ ನೆತ್ತಿಯ ಬೆಣ್ಣೆ ತಿನ್ನುವ ವರ್ತನೆ ನಡೆಯುತ್ತಿದೆ ಎಂದು ಹೇಳಿದರು.
ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವೆವು! – ಮಹಾನಗರ ಪಾಲಿಕೆ
ಪುರಸಭೆಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ ಇವರ, ಕೊರೋನಾದಂತಹ ಪರಿಸ್ಥಿತಿಯಲ್ಲಿ, ಸತ್ತವರ ಸಂಬಂಧಿಕರ ಲೂಟಿಗೈಯ್ಯುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು. ಶವಗಳನ್ನು ಸಾಗಿಸಲು ಖಾಸಗಿ ಆಂಬುಲೆನ್ಸ್‌ಗಳು ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. (ಇದು ನಡೆಯುತ್ತಿರುವಾಗ, ಪುರಸಭೆಯ ಅಧಿಕಾರಿಗಳಿಗೆ ಹೇಗೆ ತಿಳಿಯಲಿಲ್ಲ ಅಥವಾ ಅವರೂ ಕೂಡ ಅದರಲ್ಲಿ ಭಾಗಿಯಾಗಿದ್ದಾರೆಯೇ ? – ಸಂಪಾದಕ)