ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು ಕುಂಭಮೇಳಕ್ಕೆ ಮಾತ್ರ ಬರುತ್ತದೆಯೇ ? – ಶ್ರೀ ಪರಮೇಶ್ವರವದಾಸ ಮಹಾರಾಜರು, ಸಿದ್ಧಪೀಠ ಶಿವ ಸಾಯಿ ಶನಿಧಾಮ ಆಶ್ರಮ, ನೋಯ್ಡಾ

ಶ್ರೀ ಪರಮೇಶ್ವರದಾಸ ಮಹಾರಾಜ (ಬಲಬದಿ) ಅವರಿಗೆ ‘ಕುಂಭಮಹಿಮಾ ವಿಶೇಷಾಂಕ’ ನೀಡುತ್ತಿವ ಶ್ರೀ. ಸುನಿಲ ಘನವಟ

ಹರಿದ್ವಾರ, ಏಪ್ರಿಲ್ ೧೮ (ವರದಿ.) : ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು. ಅನೇಕ ಅಡಚಣೆಗಳ ನಂತರ ಕುಂಭಮೇಳ ನಡೆಯಿತು; ಆದರೆ ಭಕ್ತರು ಕುಂಭಮೇಳಕ್ಕೆ ಬರಲು ಹಲವು ತೊಂದರೆಗಳು ಎದುರಾಗುತ್ತಿವೆ. ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ, ಎಂದು ನೋಯ್ಡಾದ ಸಿದ್ಧಪೀಠ ಶಿವ ಸಾಯಿ ಶನಿಧಮ ಆಶ್ರಮದ ಶ್ರೀ ಪರಮೇಶ್ವರವರದಾಸ ಮಹಾರಾಜ ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ ಖಂಡತುಂಡವಾಗಿ ಪ್ರಶ್ನೆಯನ್ನು ಎತ್ತಿದರು. ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ನಡೆಯುತ್ತಿರುವ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯದ ಸಂಘಟಕ ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರದಾಸ ಮಹಾರಾಜ ಅವರನ್ನು ಭೇಟಿಯಾದಾಗ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಹಂತ ಜಗದೀಶ್ವರದಾಸ ಮಹಾರಾಜ ಅವರನ್ನೂ ಕೂಡಾ ಭೇಟಿಯಾದರು. ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರವರದಾಸ ಮಹಾರಾಜ ಮತ್ತು ಮಹಂತ ಜಗದೀಶ್ವರದಾಸ ಮಹಾರಾಜ ಇವರನ್ನು ‘ಸನಾತನ ಧರ್ಮಶಿಕ್ಷಣ ಹಾಗೂ ಹಿಂದೂ ರಾಷ್ಟ್ರ ಜಾಗೃತಿ ಕೇಂದ್ರ’ಕ್ಕೆ ಭೇಟಿ ನೀಡಲು ಆಮಂತ್ರಿಸಿದ್ದಾರೆ.