ಕುಂಭಮೇಳ ಸಾಂಕೇತಿಕವಾಗಿರಲಿ !

  • ಹರಿದ್ವಾರದ ಕುಂಭಮೇಳದ ವಿಷಯದಲ್ಲಿ ಸಾಧು-ಸಂತರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮನವಿ

  • ಸ್ವಾಮಿ ಅವಧೇಶಾನಂದ ಗಿರಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ

ನವ ದೆಹಲಿ : ಹರಿದ್ವಾರದ ಮಹಾಕುಂಭ ಮೇಳದಲ್ಲಿ ಹೆಚ್ಚುತ್ತಿರುವ ಕೊರೋನದ ಸಾಂಕ್ರಾಮಿಕವನ್ನು ನೋಡುತ್ತಾ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅವರು ಈ ಬಗ್ಗೆ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಈ ವಿಷಯದ ಮಾಹಿತಿಯನ್ನು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಟ್ವೀಟ್‌ನಲ್ಲಿ, ‘ನಾನು ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವಧೇಶಾನಂದ ಗಿರಿಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿ ತಿಳಿದುಕೊಂಡಿದ್ದೇನೆ. ಎಲ್ಲಾ ಸಂತರು ಆಡಳಿತದೊಂದಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ಇದಕ್ಕಾಗಿ ಸಂತರಿಗೆ ಧನ್ಯವಾದ ಅರ್ಪಿಸಿದ್ದೇನೆ. ೨ ಪವಿತ್ರ ಸ್ನಾನ ಆಗಿದೆ. ಈಗ ಕೊರೋನಾ ಬಿಕ್ಕಟ್ಟಿನಿಂದಾಗಿ, ಕುಂಭಮೇಳವನ್ನು ಸಾಂಕೇತಿಕವಾಗಿಡಲು ನಾನು ಮನವಿ ಮಾಡಿದ್ದೇನೆ. ಇದು ಬಿಕ್ಕಟ್ಟಿನ ವಿರುದ್ಧದ ಹೋರಾಟವನ್ನು ಬಲವನ್ನು ನೀಡಲಿದೆ.’ ಎಂದು ಹೇಳಿದ್ದಾರೆ.

೭೦ ಕ್ಕೂ ಹೆಚ್ಚು ಸಾಧುಗಳಿಗೆ ಕೊರೋನಾದ ಸೋಂಕು

ಇದುವರೆಗೆ ಕುಂಭಮೇಳದಲ್ಲಿ ಭಾಗವಹಿಸಿದ ೭೦ ಸನ್ಯಾಸಿಗಳಿಗೆ ಕೊರೋನಾದ ಸೋಂಕು ತಗಲಿದೆ. ಹೆಚ್ಚಿನ ಸಂಖ್ಯೆಯ ಸಾಧುಗಳನ್ನು ಪರೀಕ್ಷಿಸಲಾಗುತ್ತಿದೆ. ನಿರಂಜನಿ ಅಖಾಡದ ೧೭ ಸಾಧುಗಳು ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ ೧೭ ರಂದು ಕುಂಭಮೇಳವನ್ನು ಕೊನೆಗೊಳಿಸುವಂತೆ ಈ ಅಖಾಡವು ಮನವಿ ಮಾಡಿದೆ. ಅಖಿಲ ಭಾರತ ಪಂಚ ನಿರ್ವಾಣಿ ಅಖಾಡ ಮಹಾಮಂಡಲೇಶ್ವರ ಕಪಿಲ ದೇವದಾಸ (ವಯಸ್ಸು ೬೫) ಕೊರೋನಾದಿಂದ ನಿಧನರಾಗಿದ್ದಾರೆ.

ಸ್ವಾಮಿ ಅವಧೇಶಾನಂದರಿಂದಲೂ ಮನವಿ

ಪ್ರಧಾನಿ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ, ಜುನಾ ಆಖಾಡದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು ಟ್ವೀಟ್ ಮಾಡುತ್ತಾ, “ನಾವು ಗೌರವಾನ್ವಿತ ಪ್ರಧಾನ ಮಂತ್ರಿಯ ಮನವಿಯನ್ನು ಗೌರವಿಸುತ್ತೇವೆ. ಸ್ವಂತ ಮತ್ತು ಇತರರ ಜೀವನವನ್ನು ರಕ್ಷಿಸುವುದು ಒಂದು ದೊಡ್ಡ ಪುಣ್ಯವಾಗಿದೆ. ನನ್ನ ಧರ್ಮ ಪಾರಾಯಣ ಜನತೆಗೆ ನಾನು ಕರೆ ನೀಡುವುದೇನೆಂದರೆ, ಕೊರೋನಾದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಗಣಿಸಿ ನಿಯಮಗಳನ್ನು ಪಾಲಿಸಿರಿ.’ ಎಂದು ಹೇಳಿದ್ದಾರೆ.