ಶ್ರೀರಾಮನವಮಿ ದಿನದಂದು ಮನೆಯಲ್ಲಿಯೇ ಇದ್ದು ಪೂಜೆ-ಅರ್ಚನೆ ಮಾಡಿ ! – ಕೊರೋನಾದ ಹಿನ್ನೆಲೆಯಲ್ಲಿ ಅಯೋಧ್ಯೆಯ ಸಾಧು-ಸಂತರಿಂದ ಮನವಿ

ಅಯೋಧ್ಯೆ (ಉತ್ತರ ಪ್ರದೇಶ) : ಹೆಚ್ಚುತ್ತಿರುವ ಕೊರೋನಾದ ಸೋಂಕಿನ ಹಿನ್ನೆಲೆಯಲ್ಲಿ, ಇಲ್ಲಿಯ ಸಾಧು ಹಾಗೂ ಸಂತರು ಶ್ರೀರಾಮನವಮಿ ದಿನದಂದು ಅಯೋಧ್ಯೆಗೆ ಬರುವ ಬದಲು ಮನೆಯಲ್ಲಿಯೇ ಇದ್ದು ಪೂಜೆ ಮತ್ತು ಅರ್ಚನೆ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ಸಾಧು ಮತ್ತು ಸಂತರನ್ನು ಭೇಟಿಯಾಗಿ ಕೊರೋನಾ ವಿಷಯದಲ್ಲಿ ಸಹಕರಿಸುವಂತೆ ವಿನಂತಿಸಿದ ನಂತರ ಈ ಮೇಲಿನ ಮನವಿಯನ್ನು ಮಾಡಲಾಯಿತು.