ಕೊರೋನಾವನ್ನು ತಡೆಯಲು ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ಮಾಡಲು ಆದೇಶ ನೀಡುವೆವು! – ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಘೋಷಣೆ

  • ಅನೇಕ ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ನಡೆಸಲಾಗುತ್ತಿದೆ. ಸರಕಾರವು ಸರಕಾರಿ ಮಟ್ಟದಲ್ಲಿ ನಾಗರಿಕರಿಗೆ ಹಾಗೂ ಎಲ್ಲಿ ಸಾಧ್ಯವೋ ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಹೋತ್ರ ಮಾಡುವಂತೆ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಒಂದುವೇಳೆ ಯಡಿಯೂರಪ್ಪ ಇಂತಹ ಆದೇಶವನ್ನು ನೀಡಿದರೆ, ಬಿಜೆಪಿ ಆಡಳಿತದ ಪ್ರತಿಯೊಂದು ರಾಜ್ಯವು ಇವರ ಆದರ್ಶವನ್ನು ಇಟ್ಟುಕೊಂಡು ಇಂತಹ ಆದೇಶವನ್ನು ನೀಡಬೇಕು !
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಳಗಾವಿ (ಕರ್ನಾಟಕ) – ಕೊರೋನಾ ತಡೆಗಟ್ಟಲು ಸಂಪೂರ್ಣ ರಾಜ್ಯಾದ್ಯಂತ ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರ ಮಾಡುವಂತೆ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ನಗರದ ಹುಕ್ಕೇರಿ ಹಿರೆಮಠದಲ್ಲಿ ಜಿಲ್ಲೆಯ ೮೦ ಕ್ಕೂ ಹೆಚ್ಚು ಮಠಾಧೀಶರು ಆಯೋಜಿಸಿದ್ದ ಅಗ್ನಿಹೋತ್ರ, ಧನ್ವಂತರಿ ಮತ್ತು ಸುದರ್ಶನ ಹೋಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಈ ವಿಚಾರವನ್ನು ವ್ಯಕ್ತಪಡಿಸಿದರು. ಆ ಸಮಯದಲ್ಲಿ ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಲಾಗಿತ್ತು. ಈ ಕುರಿತು ಮುಖ್ಯಮಂತ್ರಿಯವರು ಮೇಲಿನ ಘೋಷಣೆ ಮಾಡಿದ್ದಾರೆ.

ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ,

೧. ಅಗ್ನಿಹೋತ್ರದಿಂದ ಕೊರೋನಾ ದೂರವಿರಿಸಬಹುದು. ಅದಕ್ಕಾಗಿ ದೇವಾಲಯಗಳಲ್ಲಿ ಮತ್ತು ಮಠಗಳಲ್ಲಿ ಅಗ್ನಿಹೋತ್ರವನ್ನು ನಡೆಸಲು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸೂಚನೆಗಳನ್ನು ನೀಡಬೇಕು. ಎಲ್ಲಾ ಮಠಾಧೀಶರು ಎಲ್ಲ ಜನರನ್ನು ಕರೋನಾದಿಂದ ಮುಕ್ತಗೊಳಿಸಲು ಆಶೀರ್ವದಿಸಬೇಕು.

೨. ಪ್ರತಿನಿತ್ಯ ಸೂರ್ಯೋದಯ, ಹಾಗೂ ಸೂರ್ಯಾಸ್ತದಲ್ಲಿ ಅಗ್ನಿಹೋತ್ರ ಮಾಡುವುದರಿಂದ ಸೂಕ್ಷ್ಮಜೀವಿಗಳು ನಾಶವಾಗುತ್ತದೆ, ಜೊತೆಗೆ ೧ ಕಿ.ಮೀ. ಅಷ್ಟು ದೂರದ ವಾತಾವರಣ ಶುದ್ಧವಾಗುತ್ತದೆ.

೩. ಅಗ್ನಿಹೋತ್ರಕ್ಕೆ ಪಿರಮಿಡ್ ಆಕಾರದ ತಾಮ್ರದ ಪಾತ್ರೆ, ಅಖಂಡ ಮತ್ತು ಪಾಲಿಶ್ ಮಾಡದ ಅಕ್ಕಿ(ಅಕ್ಷತೆ), ಹಸುವಿನ ಶುದ್ಧ ತುಪ್ಪ ಬೇಕಾಗುತ್ತದೆ. ಇದನ್ನು ದಹಿಸಿದನಂತರ ಉತ್ಪತ್ತಿಯಾಗುವ ಹೊಗೆಯಿಂದ ವ್ಯಕ್ತಿಯ ಅಕ್ಕ ಪಕ್ಕ ಹಾಗೂ ಮೇಲೆ ಕೆಳಗೆ ೧೦ ಅಡಿಗಳಷ್ಟು ಋಣಾತ್ಮಕ ಅಂಶ ಹಾಗೂ ಸೂಕ್ಷ್ಮಜಂತುಗಳು ಇದ್ದಲ್ಲಿ ಅದನ್ನು ನಾಶಮಾಡುವ ಶಕ್ತಿ ಅಗ್ನಿಹೋತ್ರಕ್ಕೆ ಇದೆ. ಈ ಅಗ್ನಿಹೋತ್ರವನ್ನು ರಾಜ್ಯಾದ್ಯಂತ ಮಾಡುವುದರಿಂದ ಕೊರೋನಾದಂತಹ ಮಹಾಮಾರಿಯನ್ನು ತಡೆಯಬಹುದು. ‘ದೇಶಾದ್ಯಂತ ಕೊರೋನಾವನ್ನು ನಿಯಂತ್ರಿಸಲು ಅಗ್ನಿಹೋತ್ರ ಮಾಡಬೇಕು’, ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವ ಕಾರ್ಯವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ.