ನನ್ನ ಮತಕ್ಷೇತ್ರದ ೪೭ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ ! – ಶಾಸಕ ಪಿ.ಸಿ. ಜಾರ್ಜ್

ಹಿಂದುತ್ವನಿಷ್ಠರಲ್ಲದ ಒಂದು ಪಕ್ಷದ ಶಾಸಕರು ಲವ್ ಜಿಹಾದ್ ಬಗ್ಗೆ ದೃಢವಾಗಿ ಹೇಳುತ್ತಿದ್ದಾರೆ, ಇದನ್ನು ತಥಾಕಥಿತ ಜಾತ್ಯತೀತವಾದಿಗಳ ಗಮನಕ್ಕೆ ಬರುತ್ತಿದೆಯೇನು ?

ಶಾಸಕ ಪಿ.ಸಿ. ಜಾರ್ಜ್

ತಿರುವನಂತಪುರಮ್ (ಕೇರಳ) – ನನ್ನ ಮತಕ್ಷೇತ್ರದ ೪೭ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ೧೨ ಹಿಂದೂಗಳು ಮತ್ತು ೩೫ ಕ್ರೈಸ್ತರಿದ್ದಾರೆ. ಅವರನ್ನು ಇಸ್ಲಾಂನಲ್ಲಿ ಮತಾಂತರಿಸಲಾಗಿದೆಯೇ ಅಥವಾ ಎಲ್ಲಿ ಕರೆದುಕೊಂಡು ಹೋಗಲಾಗಿದೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ. ನಾನು ಲವ್ ಜಿಹಾದ್‌ಗಾಗಿ ಧರ್ಮವನ್ನು ದೂಷಿಸುವುದಿಲ್ಲ; ಆದರೆ, ದೇಶದಲ್ಲಿ ಮತಾಂಧರು ಇದ್ದಾರೆ ಎಂದು ಕೇರಳ ಜನಪಕ್ಷಮ್ (ಜಾತ್ಯತೀತ) ಪಕ್ಷದ ಶಾಸಕ ಪಿ.ಸಿ. ಜಾರ್ಜ್ ಇವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಜಿಹಾದಿ ಭಯೋತ್ಪಾದಕರಿಂದ ದೇಶವನ್ನು ರಕ್ಷಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದರು.

ಪಿ.ಸಿ. ಜಾರ್ಜ್ ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಲವ್ ಜಿಹಾದ್ ಅನ್ನು ಬಹಳ ಸಮಯದಿಂದ ತುಂಬಾ ಹತ್ತಿರದಿಂದ ನೋಡುತ್ತಿದ್ದೇನೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಎರಾಟುಪೇಟ ಕ್ಷೇತ್ರದಲ್ಲಾಗಿದೆ. ಬಲಿಯಾದ ಹುಡುಗಿಯರು ದೂರು ನೀಡುವುದಿಲ್ಲ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಈ ಹುಡುಗಿಯರ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿವೆ; ಎಂದು ಹೇಳಿದರು.