ಪಾಟಲೀಪುತ್ರ (ಬಿಹಾರ) ದ ದೊಡ್ಡ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಮ್ಲಜನಕದ ಬದಲು ಬಿಸ್ಲೇರಿ ನೀರನ್ನು ನೀಡಲಾಗುತ್ತಿದೆ !

ವಿಶ್ವದಲ್ಲಿ ಭಾರತದ ಮಾನ ಹರಾಜು ಹಾಕುವ ಆರೋಗ್ಯ ವ್ಯವಸ್ಥೆ ! ಅಂತಹ ವ್ಯವಸ್ಥೆಯಿಂದ ತಮ್ಮ ಜೀವದ ರಕ್ಷಣೆಯಾಗುವುದು ಎಂದು ನಿರೀಕ್ಷಿಸುವ ಬದಲು, ಭಾರತೀಯರು ಈಗ ದೇವರಿಗೆ ಮೊರೆ ಹೋಗುವುದು ಹೆಚ್ಚು ಸೂಕ್ತವಾಗಿದೆ ! ಹೇಗೂ, ಈ ಪರಿಸ್ಥಿತಿಯನ್ನು ನೋಡಿ ಗುಜರಾತ ಉಚ್ಚ ನ್ಯಾಯಾಲಯವಂತೂ ‘ದೇವರೇ ಗತಿ’ ಎಂದು ಇರಲು ಸಲಹೆ ನೀಡಿದೆ !

ಪಾಟಲಿಪುತ್ರ (ಬಿಹಾರ) – ನಗರದ ಎರಡನೇ ಅತಿದೊಡ್ಡ ಆಸ್ಪತ್ರೆಯಾದ ಎನ್.ಎಂ.ಸಿ.ಎಚ್.ನಲ್ಲಿ ಅನೇಕ ಕೊರೋನಾ ರೋಗಿಗಳು ಸಾಯುತ್ತಿದ್ದಾರೆ. ಆಸ್ಪತ್ರೆಯ ಹೊರಗೆ ಆಂಬುಲೆನ್ಸ್‍ಗಳು ಸಾಲುಗಟ್ಟಿ ನಿಂತಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಇದ್ದುದರಿಂದ ಅನೇಕ ರೋಗಿಗಳು ಆಂಬ್ಯುಲೆನ್ಸ್‍ಗಳಲ್ಲಿಯೇ ಸಾಯುತ್ತಿದ್ದಾರೆ. ಇದರಿಂದ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಆಸ್ಪತ್ರೆಯ ಪರಿಸ್ಥಿತಿ ಕೂಡ ಭೀಕರವಾಗಿದೆ. ಆಮ್ಲಜನಕದ ಸಾಕಷ್ಟು ಪೂರೈಕೆ ಸಿಗದೇ ಇದ್ದರಿಂದ ರೋಗಿಯ ದೇಹಕ್ಕೆ ಬಿಸ್ಲೆರಿ ನೀರನ್ನು ನೀಡಲಾಗುತ್ತಿದೆ. ರೋಗಿಗಳನ್ನು ಪರೀಕ್ಷಿಸಲು ವೈದ್ಯರು ಸಹ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲದ ಕಾರಣ, ಹೆಚ್ಚಿನ ಸಂಖ್ಯೆಯ ರೋಗಿಗಳು ಹೊರಗೆ ಕಾಯುತ್ತಿದ್ದಾರೆ. ರೋಗಿಗಳ ಸಂಬಂಧಿಕರು ಗಂಟೆಗಟ್ಟಲೆ ಹೊರಗೆ ಕಾಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತವರ್ಗದವರಿಂದ ಪ್ರತಿಕ್ರಿಯೆ ಸಿಗದೇ ಇದ್ದರಿಂದ ಅನೇಕರು ರೋಗಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇದೆ.

ಏಪ್ರಿಲ್ ೧೩ ರಂದು ಆರೋಗ್ಯ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅದೇ ಸಮಯದಲ್ಲಿ, ಆಂಬ್ಯುಲೆನ್ಸ್‍ನಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗದೇ ಅವರು ಆಸ್ಪತ್ರೆಯ ಹೊರಗೆ ಸಾವನ್ನಪ್ಪಿದರು.