ನಿರಂಜನಿ ಅಖಾಡದ ವತಿಯಿಂದ ಹರಿದ್ವಾರದಲ್ಲಿ ಕುಂಭಮೇಳದ ಮುಕ್ತಾಯದ ಘೋಷಣೆ
ಹರಿದ್ವಾರ (ಉತ್ತರಾಖಂಡ) – ಹೆಚ್ಚಾಗುತ್ತಿರುವ ಕೊರೋನಾದ ಸೋಂಕಿನ ಕಾರಣವನ್ನು ನೀಡುತ್ತಾ ಕುಂಭ ಮೇಳದಲ್ಲಿ ಭಾಗವಹಿಸಿದ ನಿರಂಜನಿ ಅಖಾಡದ ಸಚಿವ ಮಹಂತ ರವೀಂದ್ರ ಪುರಿ ಅವರು ಕುಂಭಮೇಳದ ಮುಕ್ತಾಯವನ್ನು ಘೋಷಿಸಿದ್ದಾರೆ. ಕುಂಭಮೇಳವು ಏಪ್ರಿಲ್ ೧೭ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದರು. ಹೊರಗಿನಿಂದ ಬಂದ ಎಲ್ಲ ಸಂತರು ಮತ್ತು ಮಹಾಂತರು ಎಲ್ಲರಿಗೂ ಮರಳುವಂತೆ ಕೋರಲಾಗಿದೆ. ಕುಂಭಮೇಳವು ಏಪ್ರಿಲ್ ೧೭ ರವರೆಗೆ ಖಾಲಿಯಾಗುತ್ತದೆ.
ಕೊರೋನಾ ಕರಿಛಾಯೆಯಿಂದ ಮಹಾಕುಂಭ ಮೇಳಕ್ಕೆ ಬ್ರೇಕ್?: ಧಾರ್ಮಿಕ ಕಾರ್ಯ ನಿಲ್ಲಿಸುವುದಾಗಿ ಘೋಷಿಸಿದ ನಿರಂಜನಿ ಅಖಾಡಾ https://t.co/JI1ugT9z4E via @KannadaPrabha #Covid19 #India #MahakumbhaMela #Dehradun
— kannadaprabha (@KannadaPrabha) April 16, 2021
೧. ಮಹಂತ ರವೀಂದ್ರ ಪುರಿ ಅವರು, ಮಹಾಕುಂಭ ಮೇಳದ ಪವಿತ್ರ ಸ್ನಾನ ಏಪ್ರಿಲ್ ೨೭ ರಂದು ನಡೆಯಲಿದೆ. ಇದು ಈ ಮಹಾಕುಂಭ ಮೇಳದ ಕೊನೆಯ ಪವಿತ್ರ ಸ್ನಾನವಾಗಿರುತ್ತದೆ. ಕೊರೋನಾದ ಹಿನ್ನೆಲೆಯಲ್ಲಿ, ಏಪ್ರಿಲ್ ೨೭ ರಂದು ಪವಿತ್ರ ಸ್ನಾನವನ್ನು ಸಾಂಕೇತಿಕ ರೀತಿಯಲ್ಲಿ ಮಾತ್ರ ನಡೆಸಲಾಗುವುದು. ಇದರೊಂದಿಗೆ ಮಹಾಕುಂಭ ಸ್ನಾನದ ಶಾಶ್ವತ ಸಂಪ್ರದಾಯ ಮುಂದುವರಿಯುತ್ತದೆ ಎಂದು ಹೇಳಿದರು.
೨. ಕುಂಭಮೇಳದಲ್ಲಿ ಮೂವತ್ತು ಸಾಧುಗಳಿಗೆ ಕರೋನಾ ಸೋಂಕು ತಗುಲಿರುವುದು ಕಂಡುಬಂದಿದೆ. ಗಂಭೀರ ಸ್ಥಿತಿಯಲ್ಲಿರುವ ಸಾಧುಗಳನ್ನು ಋಷಿಕೇಶದಲ್ಲಿರುವ ಏಮ್ಸ್‍ನಲ್ಲಿ ದಾಖಲಿಸಲಾಗುತ್ತಿದೆ. ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಎಸ್. ಕೆ. ಜಾ ಇವರು ಮಾಹಿತಿಯನ್ನು ನೀಡಿದ್ದಾರೆ.