ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ! – ಕೇರಳ ಶಾಸಕ ಪಿ.ಸಿ. ಜಾರ್ಜ್

ಜಾರ್ಜ್ ಅವರು ಕೇರಳ ಜನಪಕ್ಷಂ (ಜಾತ್ಯತೀತ) ಶಾಸಕರಾಗಿದ್ದಾರೆ. ಅವರು ಹಿಂದೂಗಳಲ್ಲ. ಆದರೂ ಅವರಿಗೆ, ‘ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು’ ಎಂದು ಅನಿಸುತ್ತದೆ, ಇದರಿಂದ ಜಾತ್ಯತೀತವಾದಿಗಳು ಈ ಬಗ್ಗೆ ಯೋಚಿಸುವುದು ಅವಶ್ಯಕವಾಗಿದೆ !

ಇಡುಕ್ಕಿ (ಕೇರಳ) – ೨೦೩೦ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೇರಳದ ಆಡಳಿತಾರೂಢ ಡೆಮೊಕ್ರೆಟಿಕ ಫ್ರಂಟ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ವಿರೋಧಿ ಪಕ್ಷಗಳ ಸಂಯುಕ್ತ ಗುಂಪು) ಭಯೋತ್ಪಾದಕರೊಂದಿಗೆ ಕೆಲಸ ಮಾಡುತ್ತಿವೆ. ಈ ಪ್ರಯತ್ನವನ್ನು ತಡೆಗಟ್ಟಬೇಕಾದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಕೇರಳ ಜನಪಕ್ಷಮ್ (ಜಾತ್ಯತೀತ) ಪಕ್ಷದ ಶಾಸಕ ಪಿ.ಸಿ. ಜಾರ್ಜ್ ಇವರು ಇಲ್ಲಿನ ತೋಡುಪುಜಾದಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ. ‘ಫ್ರಾನ್ಸ್‌ಅನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇಂಗ್ಲೆಂಡ್ ಒಂದು ಕ್ರೈಸ್ತ ದೇಶವಾಗಿದೆ; ಆದರೂ ಅಲ್ಲಿ ಮುಸಲ್ಮಾಮರು ದಾಳಿ ನಡೆಸುತ್ತಿದ್ದಾರೆ’, ಎಂದು ಅವರು ಹೇಳಿದರು.

ಲವ್ ಜಿಹಾದ್ ಇದೆ!

ಜಾರ್ಜ್ ತಮ್ಮ ಮಾತನ್ನು ಮುಂದುವರೆಸುತ್ತಾ, ಲವ್ ಜಿಹಾದ್ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳುತ್ತಿದೆ; ಆದರೆ ಲವ್ ಜಿಹಾದ್ ಇದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಲವ್ ಜಿಹಾದ್ ಅನ್ನು ನಾಶಮಾಡುವ ಏಕೈಕ ಮಾರ್ಗವೆಂದರೆ ಶ್ರೇಷ್ಠ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು. ಜಗತ್ತಿನ ಶೇ. ೬೮% ರಷ್ಟು ಹಿಂದೂ ಸಮಾಜವು ಭಾರತದಲ್ಲಿ ವಾಸಿಸುತ್ತಿದೆ. ನಾವು ಜಗತ್ತಿನ ಇತರ ದೇಶಗಳ ಅಂಕಿಅಂಶಗಳನ್ನು ನೋಡಿದರೆ, ಪ್ರತಿ ದೇಶವು ಧರ್ಮಕ್ಕೆ ಮಹತ್ವ ನೀಡುತ್ತದೆ.

ನೋಟಬಂದಿಯಿಂದಾಗಿ ಇಸ್ಲಾಮೀ ರಾಷ್ಟ್ರವನ್ನಾಗಿಸಲು ವಿಳಂಬ !

ಜಾರ್ಜ ತಮ್ಮ ಮಾತನ್ನು ಮುಂದುವರೆಸುತ್ತಾ, ೨೦೧೬ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟಬಂದಿ ಮಾಡಿದ ನಂತರ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದವರಿಗೆ ವಿದೇಶದಿಂದ ಸಿಗುತ್ತಿದ್ದ ಹಣ ನಿಂತಿತು ಆದ್ದರಿಂದ ಅವರಿಗೆ ಕೆಲಸದಲ್ಲಿ ವಿಳಂಬ ಆಗುತ್ತಿದೆ ಎಂದು ಹೇಳಿದರು.

ದೇಶಾದ್ಯಂತ ಧರ್ಮದ ಆಧಾರದ ಮೇಲೆ ವಹಿವಾಟುಗಳು ನಡೆಯುತ್ತವೆ !

ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ಪ್ರಧಾನ ದೇಶವಾಗಿದೆ; ಆದರೆ ಈ ಜಾತ್ಯತೀತ ಸಮಾಜವಾದಿ ದೇಶದಲ್ಲಿ ಜಾತ್ಯತೀತತೆ ವಿಭಿನ್ನವಾಗಿದೆ. ದೇಶಾದ್ಯಂತ ಧರ್ಮದ ಆಧಾರದ ಮೇಲೆ ವ್ಯವಹಾರಗಳು ನಡೆಯುತ್ತಿವೆ. ಇದು ಇತರ ರಾಜ್ಯಗಳ ತುಲನೆಯಲ್ಲಿ ಕೇರಳದಲ್ಲಿ ಬಹಳ ಜಾಸ್ತಿಯಿದೆ.