ಆಡಳಿತವರ್ಗದವರಿಂದಲೇ ನೀಡಲಾದ ಸಂಖ್ಯೆಯನ್ನು ಸಂಪರ್ಕಿಸಿದ ನಂತರವೂ ಯಾವುದೇ ಪ್ರತಿಕ್ರಿಯೆ ಸಿಗದ ಪರಿಣಾಮ !
|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಒಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ಕೊರೋನಾ ಪೀಡಿತ ಹೆಂಡತಿಗೆ ಚಿಕಿತ್ಸೆ ಸಿಗಲು ಆಡಳಿತವನ್ನು ಸಂಪರ್ಕಿಸಿದ್ದರು. ಆಡಳಿತವರ್ಗದವರು ನೀಡಿದ ಸಂಖ್ಯೆಯನ್ನು ಸಂಪರ್ಕಿಸಿದ ನಂತರವೂ ಅವರಿಗೆ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ನಿವೃತ್ತ ನ್ಯಾಯಾಧೀಶರು ಬರೆದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.
"She died due to negligence of Govt, no one was there to tend to the body:" Former District Judge pens open letter after wife dies of Covid-19
reports @Areebuddin14 https://t.co/5bWwjzCa9o
— Bar & Bench (@barandbench) April 15, 2021
ನಗರದ ಗೋಮಾತಿನಗರದಲ್ಲಿ ವಾಸಿಸುತ್ತಿರುವ ೬೭ ವರ್ಷದ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಮೇಶ ಚಂದ್ರಾ ಅವರು ಪತ್ರದಲ್ಲಿ, ‘ನಾನು ಏಪ್ರಿಲ್ ೧೪ ರಂದು ಬೆಳಿಗ್ಗೆ ೭ ಗಂಟೆಯಿಂದ ಆಡಳಿತವು ನೀಡಿದ ಸಂಖ್ಯೆಗೆ ಸಂಪರ್ಕಿಸುತ್ತಿದ್ದೆ; ಆದರೆ ಯಾರೂ ಕೂಡ ಔಷಧಿ ನೀಡಲು ಮನೆಗೆ ಬರಲಿಲ್ಲ ಅಥವಾ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆಯನ್ನು ಮಾಡಲಿಲ್ಲ. ಇದರಿಂದ ನನ್ನ ಪತ್ನಿ ಮಧು ಚಂದ್ರ ಇವರು ನಿಧನರಾದರು. ಸಧ್ಯ ಆಕೆಯ ದೇಹವನ್ನು ಸಾಗಿಸಲು ಯಾರೂ ಇಲ್ಲ. ದಯವಿಟ್ಟು ಸಹಾಯ ಮಾಡಿ.’ ಎಂದು ಬರೆದಿದ್ದಾರೆ.