ಕೊರೊನಾವನ್ನು ನಿಯಂತ್ರಿಸಲು ಕರ್ನಾಟಕದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದುವಾರ ಧನ್ವಂತರಿ ಹೋಮ !

ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಜನರ ಕಲ್ಯಾಣಕ್ಕಾಗಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಪ್ರಾರಂಭಿಸಲಾಗಿದೆ. ಮೇ ೫ ರಿಂದ ಮೇ ೧೧ ರವರೆಗೆ ಪೂಜೆ, ಹೋಮ-ಹವನ ನಡೆಯಲಿದೆ. ರೋಗ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ ಮತ್ತು ಕ್ರಿಮಿಹರ ಸೂಕ್ತವನ್ನು ಜಪ ಸಹಿತ ಹೋಮ-ಹವನ ನಡೆಸಲಾಗುತ್ತಿದೆ.

ಒಂದೇಒಂದು ಹಾಸಿಗೆ ಖಾಲಿಯಿಲ್ಲದಿದ್ದ ಸ್ಥಿತಿಯಿಂದ ಈಗ ಒಂದೇ ದಿನದಲ್ಲಿ ೩ ಸಾವಿರ ೨೧೦ ಹಾಸಿಗೆಗಳು ಖಾಲಿಯಾಗಿವೆ !

‘ಇಷ್ಟು ದೊಡ್ಡ ಪ್ರಮಾಣದಲ್ಲಿ ಹಗರಣವು ನಡೆಯುತ್ತಿದ್ದಾಗ ಆಡಳಿತವು ಏನು ಮಾಡುತ್ತಿತ್ತು?’ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುತ್ತಿರಬಹುದು ! ಸರಕಾರವು ಈಗ ಇದರ ಬಗ್ಗೆ ತನಿಖೆ ನಡೆಸಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಂದ ಲಂಚ ಪಡೆದು ಹಾಸಿಗೆ(ಬೆಡ್) ನೀಡಲಾಗುತ್ತಿದೆ ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆರೋಪ

ರಾಜ್ಯಾಡಳಿತವು ಬೆಂಗಳೂರಿನಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ಒದಗಿಸಲು ಲಂಚ ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಸೂರ್ಯ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಹೊರಗಿನ ದಲ್ಲಾಳಿಗಳು, ಕೊವಿಡ್ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಮುಖ್ಯಸ್ಥರು ಈ ಹಗರಣವನ್ನು ನಡೆಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್‍ನಲ್ಲಿ ಒಂದೇ ಸಮುದಾಯದ ಜನರು ಏಕೆ ? – ತೇಜಸ್ವೀ ಸೂರ್ಯ ಅವರ ಪ್ರಶ್ನೆ

ಇಲ್ಲಿಯ ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್‍ನಲ್ಲಿ ಮುಸಲ್ಮಾನ ಸದಸ್ಯರನ್ನೇ ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರು ಟೀಕಿಸಿದ್ದಾರೆ. ಈ ಸಮಯದಲ್ಲಿ ಅವರು ‘ಕೋವಿಡ್ ವಾರ್ ರೂಮ್’ಗೆ ನೇಮಕಗೊಂಡ ೧೭ ಜನರ ಹೆಸರನ್ನು ಓದಿದರು.

ಬೆಂಗಳೂರಿನ ಸ್ಮಶಾನದ ಹೊರಗೆ ‘ಹೌಸ್ ಫುಲ್’ ಫಲಕ !

ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಇತ್ಯಾದಿಗಳು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !

ಚಾಮರಾಜನಗರದಲ್ಲಿ ಆಮ್ಲಜನಕದ ವಿತರಣೆಯ ವಿಳಂಬದಿಂದಾಗಿ ಆಸ್ಪತ್ರೆಯಲ್ಲಿ ೨೪ ಕೊರೋನಾ ಪೀಡಿತ ರೋಗಿಗಳ ಸಾವು !

ರಾಜ್ಯದ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ೨೪ ಕೊರೋನಾ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ೨೫೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೈಸೂರಿನಿಂದ ಚಾಮರಾಜನಗರಕ್ಕೆ ಕಳುಹಿಸಲಾಗಿದೆ.

ಆಹಾರ ಧಾನ್ಯಗಳ ಪೂರೈಕೆಯ ವಿಳಂಬದ ಬಗ್ಗೆ ಪ್ರಶ್ನಿಸಿದ ರೈತನಿಗೆ ‘ಹೋಗಿ ಸಾಯಿರಿ’ ಎಂದು ಉದ್ಧಟತನದಿಂದ ಉತ್ತರಿಸಿದ ಕರ್ನಾಟಕದ ಸಚಿವ !

ಇಂತಹ ಉದ್ಧಟತನದ ಉತ್ತರವನ್ನು ನೀಡುವುದು ಇದು ಪರಾಕಾಷ್ಠೆಯ ಸಂವೇದನಾಶೂನ್ಯತೆಯಾಗಿದೆ. ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರಕಾರವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !

ಅಂತ್ಯ ಸಂಸ್ಕಾರಕ್ಕಾಗಿ ಸಾಲ ಮಾಡಿ ಸ್ಮಶಾನಭೂಮಿಯ ಸಿಬ್ಬಂದಿಗೆ ಲಂಚ ಕೊಟ್ಟ ಮಹಿಳೆ

ಬೀದಿ ಬೀದಿ ವ್ಯಾಪಾರ ಮಾಡುವ ರಾಧಮ್ಮ ಹೆಸರಿನ ಮಹಿಳೆ ಬಡ್ಡಿ ಸಹಿತ ಸಾಲ ತಂದು ಆಯಂಬುಲೆನ್ಸ್‌ಗೆ ೫ ಸಾವಿರ ಹಾಗೂ ಚಿತಾಗಾರ ಸಿಬ್ಬಂದಿಗೆ ೩ ಸಾವಿರ ನೀಡಿ ಮೃತ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ ದಾರುಣ ಘಟನೆಯು ಶುಕ್ರವಾರ ಯಲಹಂಕದ ಮೇಡಿ ಚಿತಾಗಾರದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಾಗುತ್ತಿದೆ ಎಂದು ದೂರು ನೀಡಿದ್ದಕ್ಕಾಗಿ ಸೈನಿಕನಿಗೆ ಥಳಿತ

ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿರುವ ಸೈನಿಕ ಶ್ರೀನಿವಾಸ ಅವರನ್ನು ಶ್ರೀನಿವಾಸಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ಸಿಬ್ಬಂದಿಗಳು ಹೊಡೆದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಪೊಲೀಸರ ಸಮ್ಮುಖದಲ್ಲಿ ಈ ಹಲ್ಲೆಯು ನಡೆದಿದೆ.

ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ತೆರಳಿ ಸೋಂಕಿತರ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪಿಪಿಇ ಕಿಟ್ ಧರಿಸಿಕೊಂಡು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ.