ನನ್ನ ಜೀವಕ್ಕೂ ಅಪಾಯ; ರಕ್ಷಣೆ ನೀಡಿ ! – ನೇಹಾಳ ತಂದೆಯ ಬೇಡಿಕೆ

ಹುಬ್ಬಳ್ಳಿ – ನನ್ನ ಜೀವಕ್ಕೆ ಅಪಾಯ ಇದೆ. ನನ್ನ ಜೊತೆಗೆ ನನ್ನ ಕುಟುಂಬಕ್ಕೆ ಸರಕಾರ ರಕ್ಷಣೆ ಪೂರೈಸಬೇಕೆಂದು, ಜಿಹಾದಿಗಳಿಂದ ಹತ್ಯೆ ಆಗಿರುವ ನೇಹ ಹಿರೇಮಠ ಈಕೆಯ ತಂದೆ ನಿರಂಜನ್ ಹಿರೇಮಠ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಆಗ್ರಹಿಸಿದರು.

ಶ್ರೀ. ಹಿರೇಮಠ ಮಾತು ಮುಂದುವರೆಸುತ್ತಾ, ನೇಹಾಳ ಹತ್ಯೆ ಇದು ರಾಷ್ಟ್ರೀಯ ಮಟ್ಟದಲ್ಲಿನ ವಾರ್ತೆ ಆಗಿರುವುದರಿಂದ ಅನೇಕ ಜನರು ಸಾಂತ್ವನ ಹೇಳುವುದಕ್ಕೆ ಮನೆಗೆ ಬರುತ್ತಾರೆ. ಇದರಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿದ್ದಾರೆ. ಇಂತಹ ವ್ಯಕ್ತಿಗಳಿಂದ ನನ್ನ ಜೀವಕ್ಕೆ ಅಪಾಯ ಇದೆ. ನೇಹಾಳ ಹತ್ಯೆ ಮಾಡುವ ಮೊದಲು ಆರೋಪಿ ಫಯಾಜ್ ಇವನು ಅವನ ಸ್ನೇಹಿತರ ಜೊತೆಗೆ ನಮ್ಮ ಮನೆಯ ಸುತ್ತಲೂ ತಿರುಗುತ್ತಿದ್ದನು. ನೇಹಾಗೆ ಫೋನ್ ಮಾಡಿ ಆಕೆಗೆ ಜೀವ ಬೆದರಿಕೆ ನೀಡಿದ್ದನು. ಈ ಹಿಂದೆ ಅವನು ಆಕೆಯ ಅಪಹರಣ ಮಾಡುವ ಪ್ರಯತ್ನ ಕೂಡ ಮಾಡಿದ್ದನು. ಇದು ಒಂದು ಸುನಿಯೋಜಿತ ಕೃತ್ಯವಾಗಿದೆ ಎಂದು ಹೇಳಿದರು.