ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್‌ಗೆ ನ್ಯಾಯ ಸಿಗಲು ಮೆರವಣಿಗೆ !
ಹುಬ್ಬಳ್ಳಿ – ನೇಹಾ ಹಿರೇಮಠ್ ಹತ್ಯೆ ಪ್ರಕರಣ ಒಂದು ರೀತಿಯ ಲವ್ ಜಿಹಾದ್ ಆಗಿದ್ದು, ಮತದ ರಾಜಕಾರಣಕ್ಕಾಗಿ ಕಾಂಗ್ರೆಸ್ ಈ ಸತ್ಯವನ್ನು ನಿರಾಕರಿಸುತ್ತಿದೆ. ಕಾಂಗ್ರೆಸ್ಸಿನ ಕಾರ್ಪೊರೇಟರ್ ಆಗಿರುವ ನೇಹಾ ಅವರ ತಂದೆ ಕೂಡ ಈ ಘಟನೆಯನ್ನು ‘ಲವ್ ಜಿಹಾದ್’ ಎಂದು ಹೇಳಿದ್ದಾರೆ. ಈ ಪ್ರಕರಣದ ಆರೋಪಿ ಫೈಯಾಜ್ ಖೋಂಡುನಾಯಕ್ ನನ್ನು ಗಲ್ಲಿಗೇರಿಸಬೇಕು, ಎಂದು ಹಿಂದೂ ರಾಷ್ಟ್ರ ಸೇನೆಯ ರಾಜ್ಯಾಧ್ಯಕ್ಷ ಶ್ರೀ. ಸಂದೀಪ್ ಗುರೂಜಿ ಆಗ್ರಹಿಸಿದ್ದಾರೆ. ‘ನೇಹಾಗೆ ನ್ಯಾಯ ಸಿಗದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವೆವು’, ಎಂದು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಏಪ್ರಿಲ್ 26 ರಂದು ಹಿಂದೂ ರಾಷ್ಟ್ರ ಸೇನೆ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಮೆರವಣಿಗೆಯನ್ನು ಆಯೋಜಿಸಿದ್ದವು. ಇದಾದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹ
ನೇಹಾ ಹಿರೇಮಠ ಅವರ ಹತ್ಯೆಯ ನಂತರ ಸಂದೀಪ್ ಗುರೂಜಿ ಮತ್ತು ಇತರ ಕೆಲವು ಸಂತರು ಆಕೆಯ ಪೋಷಕರನ್ನು ಭೇಟಿ ಮಾಡಲು ಹುಬ್ಬಳ್ಳಿಗೆ ಬಂದರು. ಈ ವೇಳೆ ಅವರಿಗೆ ಸಾಂತ್ವನ ಹೇಳಿದರು. ನಂತರ ಮೇಲಿನ ಮೆರವಣಿಗೆಯನ್ನು ಆಯೋಜಿಸಲಾಯಿತು. ಇದರೊಂದಿಗೆ ದಾವಣಗೆರೆ ಮತ್ತು ಇತರೆಡೆಗಳಲ್ಲಿ ಇಂತಹ ಮೆರವಣಿಗೆ ಮತ್ತು ಭಾಷಣಗಳನ್ನು ಆಯೋಜಿಸುವ ಮೂಲಕ ಸಂದೀಪ್ ಗುರೂಜಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಹಿಂದೂಗಳ ಸಾಮೂಹಿಕ ಒತ್ತಡದಿಂದಾಗಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಕೇಂದ್ರ ತನಿಖಾ ಇಲಾಖೆಯೊಂದಿಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಂದೀಪ್ ಗುರೂಜಿ ಮತ್ತು ಇತರ ಹಿಂದೂಗಳು ಒತ್ತಾಯಿಸಿದ್ದಾರೆ.