|
ಹುಬ್ಬಳ್ಳಿ – ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫೈಯಾಜ್ ಒಬ್ಬನೇ ಆರೋಪಿಯಾಗಿರದೆ ಆತನಿಗೆ ಸಹಾಯ ಮಾಡಿದ ಒಟ್ಟು 8 ಜನರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿದ್ದಾನೆ. ಆದರೆ, ಫೈಯಾಜ್ ಬಂಧನ ಬಿಟ್ಟರೆ ಪೊಲೀಸರು ಬೇರೇನೂ ಮಾಡಿಲ್ಲ ಎಂದು ನೇಹಾ ತಂದೆ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಆಗಿರುವ ನಿರಂಜನ್ ಹಿರೇಮಠ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಮ್ಮಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನವನ್ನೂ ಮಾಡಿಲ್ಲ. ಈ ಪ್ರಕರಣವನ್ನು ಕೇಂದ್ರ ತನಿಖಾ ಇಲಾಖೆಗೆ ಒಪ್ಪಿಸಬೇಕು. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. “ನನ್ನ ಪ್ರಾಣ ಹೋದರೂ ಪರವಾಗಿಲ್ಲ. ನನ್ನ ಮಗಳ ಜೀವವನ್ನು ತೆಗೆದವರಿಗೆ ಶಿಕ್ಷೆ ಆಗುವ ತನಕ ನಾನು ವಚನ ಬದ್ಧನಾಗಿದ್ದೇನೆ, ”ಎಂದು ಅವರು ಹೇಳಿದರು.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ “ಫೈಯಾಜ್‌ಗೆ ಕಠಿಣ ಶಿಕ್ಷೆಯಾದರೆ ಮಾತ್ರ ನೇಹಾ ಆತ್ಮಕ್ಕೆ ಶಾಂತಿ ಸಿಗುತ್ತದೆ, ಇಲ್ಲದಿದ್ದರೆ ನಾನೇ ಕಾನೂನು ಕೈಗೆತ್ತಿಕೊಂಡು ನನ್ನ ಮಗಳಿಗೆ ನ್ಯಾಯ ಕೊಡಿಸಬೇಕಾಗುತ್ತದೆ” ಎಂದು ಹೇಳಿದರು. ಮತಾಂತರವನ್ನು ವಿರೋಧಿಸಿದ್ದಕ್ಕೆ ನನ್ನ ಮಗಳನ್ನು ಕೊಲೆ ಮಾಡಲಾಗಿದೆ; ಆದರೆ ನನ್ನ ಮಗಳಿಗೆ ನ್ಯಾಯ ಸಿಗುತ್ತದೆ ಎಂಬುದು ಖಚಿತವಾಗಿಲ್ಲ. ಪೊಲೀಸರು ಯಾರದೋ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಆರೋಪಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ತನಿಖೆಯನ್ನು ಸಿಬಿಐಗೆ ವಹಿಸದಿದ್ದರೆ ನಾನೇ ಕಾನೂನನ್ನು ಕೈಗೆ ತೆಗೆದುಕೊಂಡು ನನ್ನ ಮಗಳಿಗೆ ನ್ಯಾಯ ಕೊಡಿಸಬೇಕಾಗುತ್ತದೆ ಎಂದು ಹಿರೇಮಠ್ ಹೇಳಿದರು.
ಸಂಪಾದಕೀಯ ನಿಲುವುಎಲ್ಲಿಯವರೆಗೆ ಸ್ವಂತ ಕುಟುಂಬಕ್ಕೆ ಆಘಾತ ಆಗುವುದಿಲ್ಲವೋ, ಅಲ್ಲಿಯವರೆಗೆ ಹಿಂದೂಗಳು ‘ನನಗೇಕೆ ಇತರರ ಉಸಾಬರಿ’ ಎಂಬ ಮನೋಭಾವದಲ್ಲಿ ಇರುತ್ತಾರೆ. ಹೆಚ್ಚಿನ ಹಿಂದೂಗಳು ಲವ್ ಜಿಹಾದ್, ಮತಾಂತರ, ‘ಗಜ್ವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣ ಮಾಡುವುದು) ನಂತಹ ಪಿತೂರಿಗಳ ಬಗ್ಗೆ ಮೌನವಾಗಿದ್ದಾರೆ. ಕಾಂಗ್ರೆಸ್ ಕಾರ್ಪೋರೇಟರ್ ಉದಾಹರಣೆಯಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ ! |