Loksabha Elections 2024 : ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕಾಗಿ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು !

ಬೆಂಗಳೂರು – ಬೆಂಗಳೂರಿನ ದಕ್ಷಿಣ ಮತದಾನ ಕ್ಷೇತ್ರದ ಭಾಜಪದ ಅಭ್ಯರ್ಥಿ ಹಾಗೂ ಪ್ರಖರ ಹಿಂದುತ್ವನಿಷ್ಠ ತೇಜಸ್ವೀ ಸೂರ್ಯ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ‘ಅವರು ಧರ್ಮದ ಆಧಾರದಲ್ಲಿ ಮತ ಕೇಳುತ್ತಿದ್ದಾರೆ’, ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗದ ಕರ್ನಾಟಕ ರಾಜ್ಯ ಅಧ್ಯಕ್ಷರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಧರ್ಮದ ಆಧಾರದಲ್ಲಿ ಮತ ಯಾಚನೆಗೆ ಸೂರ್ಯ ಯತ್ನಿಸಿದ್ದಾರೆ. ಅವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ 30ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ !

ಮೇ 26, ರಂದು ಬೆಂಗಳೂರಿನಲ್ಲಿ ಮತದಾನವಾಗಿದ್ದೂ, ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ನಂತರ ಮಾತನಾಡಿದ ಸೂರ್ಯ ಇವರು, ಈ ವರ್ಷ ಕಾಂಗ್ರೆಸ್ 30 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಿರಾಸೆಯಾಗಿದೆ. ಪ್ರಧಾನಿಯನ್ನು ವೈಯಕ್ತಿಕವಾಗಿ ಟೀಕಿಸಿದಷ್ಟೂ ಪ್ರಧಾನಿ ಮತ್ತು ಬಿಜೆಪಿ ಬಲಿಷ್ಠವಾಗುವುದು ಎಂಬುದು ಇತಿಹಾಸ ತೋರಿಸಿದೆ ಎಂದು ಹೇಳಿದರು.