ರಾಜ್ಯದ ಮಹಿಳಾ ಆಯೋಗದಿಂದ ವಿಚಾರಣೆಯ ಬೇಡಿಕೆ
ಹಾಸನ – ಹಾಸನ ಜಿಲ್ಲೆಯಲ್ಲಿ ಕೆಲವು ಆಕ್ಷೇಪಾರ್ಹ ವಿಡಿಯೋಗಳು ಪ್ರಸಾರವಾಗುತ್ತಿವೆ, ಅದರಲ್ಲಿ ಮಹಿಳೆಯರ ಜೊತೆಗೆ ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸುವುದನ್ನು ತೋರಿಸಲಾಗಿದೆ. ಈ ವಿಡಿಯೋದಿಂದ ವಿವಾದ ನಿರ್ಮಾಣವಾಗಿದ್ದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಈ ವಿಡಿಯೋಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಬೇಕೆಂದು ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
Thousands of women sexually assaulted in #Karnataka, videos circulated
Karnataka Women’s Commission calls for investigation
Eversince the #Congress Government has come to power in Karnataka, there has not been a single positive incident, instead only such unfortunate incidents… pic.twitter.com/17aRmkRwU2
— Sanatan Prabhat (@SanatanPrabhat) April 26, 2024
೧. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ ಅವರು ಮಾತನಾಡಿ, ಕೆಲವು ಪ್ರಭಾವಶಾಲಿ ರಾಜಕಾರಣಿಗಳು ಮಹಿಳೆಯರನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವು ನಾಯಕರು ಮಹಿಳೆಯರ ಮೇಲೆ ಬಲಾತ್ಕಾರದಂತಹ ಅಪರಾಧ ನಡೆಸಿದ್ದಾರೆ. ಪ್ರಸಾರವಾಗಿರುವ ವಿಡಿಯೋಗಳು ಜನಸಾಮಾನ್ಯರಿಗೆ ತಲುಪುತ್ತಿದೆ. ಇದರಿಂದ ಸಮಾಜವೆ ನಾಚಿಕೆಯಿಂದ ತಲೆತಗ್ಗಿಸಿದೆ.
೨. ಪ್ರಸಾರಗೊಂಡಿರುವ ವಾರ್ತೆಯ ಪ್ರಕಾರ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇಂತಹ ಆಘಾತಕಾರಿ ಕೃತ್ಯ ಮೊಬೈಲಿನಲ್ಲಿ ಚಿತ್ರಿಕರಣ ಮಾಡಿ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಲು ಬಳಸಲಾಗುತ್ತಿದೆ.