Muslim Youths Arrested For Harassment: ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಕಾಮುಕ ಯುವಕರು ಪೊಲೀಸರಿಗೆ ಒಪ್ಪಿಸಿದರು !

  • ಖಾಸಗಿ ಬಸ್ ಸಂಸ್ಥೆ ‘ವಿಜಯಾನಂದ ಟ್ರಾವೆಲ್ಸ್’ ಚಾಲಕನ ಶ್ಲಾಘನೀಯ ಕ್ರಮ !

  • ಪೊಲೀಸರಿಂದ ಯೂನಸ್, ಗೌಸ್ ಮತ್ತು ಸಾದಿಕ್ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದರು !

ಗದಗ – ದೇಶದ ಅತಿ ದೊಡ್ಡ ಖಾಸಗಿ ಬಸ್ ಸಂಸ್ಥೆ ‘ವಿಜಯಾನಂದ್ ಟ್ರಾವೆಲ್ಸ್’ ಚಾಲಕ ಇತ್ತೀಚೆಗೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ನಿಗಾ ವಹಿಸಿ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಎಪ್ರಿಲ್ 24ರ ರಾತ್ರಿ ನಡೆದಿದ್ದು ಹುಬ್ಬಳ್ಳಿಯಿಂದ ಭಾಗ್ಯನಗರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಹಿಂದೂ ಮಹಿಳೆಯೊಬ್ಬರು ಹತ್ತಿದ್ದಾರೆ. ಆಕೆ ಕಾಯ್ದಿರಿಸಿದ ಜಾಗದಲ್ಲಿ ಯುವಕನೊಬ್ಬ ಮಲಗಿದ್ದ. ಅವಳು ಅವನ ಸ್ಥಳಕ್ಕೆ ಹೋಗುವಂತೆ ಕೇಳಿದಳು. ಅವನ ಮತ್ತು ಅವನ ಸ್ನೇಹಿತರು ವಾದ ಮಾಡಲು ಪ್ರಾರಂಭಿಸಿದರು. ಈ ವೇಳೆ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆ ಬಸ್ ಚಾಲಕನ ಸಹಾಯ ಕೇಳಿದಾಗ, ಅವರು ಬಸ್ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿರುಗಿಸಿದರು. ಬಸ್ಸಿನಲ್ಲಿದ್ದ 15 ಮಂದಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಹುಬ್ಬಳ್ಳಿಯ ನಿವಾಸಿಗಳಾದ ಮಹಮ್ಮದ್ ಯೂನಸ್ ಮುನ್ನಾಸಾಬ್ ಮುದಗಲ್, ಮಹಮ್ಮದ್ ಗೌಸ್ ರಹೀಮಸಾಬ್ ಶಿರಹಟ್ಟಿ ಹಾಗೂ ಮಹಮ್ಮದ್ ಸಾದಿಕ್ ಜಾಫರಸಾಬ್ ಶೇಖಬಾದೆ ವಿರುದ್ಧ ಕಲಂ 110 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಮೂವರನ್ನು ಬಂಧಿಸಲಾಗಿದೆ.